ಬಿಜೆಪಿಯನ್ನ ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಒಂದಾಗಲಿದೆ ; ಡಿ.ಕೆ.ಶಿವಕುಮಾರ್

news18
Updated:September 4, 2018, 7:51 PM IST
ಬಿಜೆಪಿಯನ್ನ ಅಧಿಕಾರದಿಂದ ದೂರವಿಡಲು ಕಾಂಗ್ರೆಸ್-ಜೆಡಿಎಸ್ ಒಂದಾಗಲಿದೆ ; ಡಿ.ಕೆ.ಶಿವಕುಮಾರ್
news18
Updated: September 4, 2018, 7:51 PM IST
- ಎ.ಟಿ.ವೆಂಕಟೇಶ್, ನ್ಯೂಸ್18 ಕನ್ನಡ

ರಾಮನಗರ ( ಸೆ.04) :  ಬಿಜೆಪಿಯನ್ನ ಅಧಿಕಾರದಿಂದ ದೂರವಿಡುವ ದೃಷ್ಠಿಯಿಂದ ನಾವಿಬ್ಬರು ಒಂದಾಗುತ್ತೇವೆಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.  ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಬಳಿ ಇಂಡಸ್ ಸ್ಕೂಲ್ ಆಫ್ ಲೀಡರ್ ಶಿಫ್ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಡಿಕೆಶಿ ಮಾಧ್ಯಮಕ್ಕೆ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಇನ್ನು ಹಣಬಲ, ತೋಳ್ಬಲದಿಂದ ಚುನಾವಣೆ ಮಾಡಿದ್ದಾರೆಂಬ ಯಡಿಯೂರಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಯಡಿಯೂರಪ್ಪನವರು ಹೇಗೆ ಚುನಾವಣೆ ಮಾಡಿದ್ದಾರೆಂದು ನಮಗೆ ಗೊತ್ತಿದೆ. ಈ ಬಾರಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಬಂದಿಲ್ಲ. ಹಾಗಾಗಿ ಹತಾಶರಾಗಿ ಹೀಗೆ ಮಾತನಾಡುತ್ತಿದ್ದಾರೆ ಅಷ್ಟೇ ಎಂದರು.

ಇನ್ನು ಸಿದ್ದರಾಮಯ್ಯನವರ ಜೊತೆ ವಿದೇಶಕ್ಕೆ ಕೆಲ ಸಚಿವರು, ಶಾಸಕರು ಹೋಗಿರುವ ವಿಚಾರಕ್ಕೆ ಮಾತನಾಡಿದ ಡಿಕೆಶಿ, ಅವರ ಜೊತೆಗೆ ಯಾರು ರಾಜಕಾರಣಕ್ಕಾಗಿ ಹೋಗಿಲ್ಲ. ಕೆಲವರು ಅಮೇರಿಕಾದಲ್ಲಿನ ಅಕ್ಕ ಸಮ್ಮೇಳನಕ್ಕಾಗಿ ಹೋಗಿದ್ದಾರೆ ಅಷ್ಟೇ, ಬೇರೆ ಯಾವುದೇ ಉದ್ದೇಶವಿಲ್ಲವೆಂದು ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ