• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • JDS-Congress ಭದ್ರಕೋಟೆಯಲ್ಲಿ ಹಿಂದುತ್ವ ಅಸ್ತ್ರ; ಚುನಾವಣೆಗೂ ಮೊದಲೇ ರಾಮ ಮಂದಿರ ಶಂಕುಸ್ಥಾಪನೆಗೆ ಬಿಜೆಪಿ ಸಕಲ ಸಿದ್ಧತೆ

JDS-Congress ಭದ್ರಕೋಟೆಯಲ್ಲಿ ಹಿಂದುತ್ವ ಅಸ್ತ್ರ; ಚುನಾವಣೆಗೂ ಮೊದಲೇ ರಾಮ ಮಂದಿರ ಶಂಕುಸ್ಥಾಪನೆಗೆ ಬಿಜೆಪಿ ಸಕಲ ಸಿದ್ಧತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Ram Mandir In Ramanagar: 19 ಎಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದ್ದು, ಮೊದಲ ಹಂತದಲ್ಲಿ 50 ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ಸಿದ್ಧವಾಗಿದೆ

 • News18 Kannada
 • 4-MIN READ
 • Last Updated :
 • Karnataka, India
 • Share this:

ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣೆ (Assembly Election 2023) ದಿನಾಂಕ ಘೋಷಣೆಗೆ ಕೆಲವೇ ದಿನಗಳ ಬಾಕಿ ಉಳಿದಿವೆ. ಹಾಗಾಗಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ (BJP Government) ತನ್ನ ಜನಪ್ರಿಯ ಯೋಜನೆಗಳನ್ನು ಮತದಾರರಿಗೆ ತಲುಪಿಸಲು ಮುಂದಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಹಳೇ ಮೈಸೂರು ಭಾಗದ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಹಾಗಾಗಿ ಬಜೆಟ್​ನಲ್ಲಿ (Bommai Budget) ಈ ಭಾಗಗಳಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಈಗಾಗಲೇ ಬಿಜೆಪಿ ನಾಯಕರು, ಮೈಸೂರು ಭಾಗದಲ್ಲಿ ಹಿಂದುತ್ವ (Hindutva) ಆಧಾರದ ಮೇಲೆಯೇ ಮತ ಕೇಳುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಮಾತುಗಳಿಗೆ ಪೂರಕ ಎಂಬಂತೆ ಬಜೆಟ್​ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ರಾಮನಗರದ ರಾಮದೇವರ ಬೆಟ್ಟದಲ್ಲಿ (Ramadevara Betta) ರಾಮ ಮಂದಿರ (Rama Mandir) ನಿರ್ಮಾಣಕ್ಕೆ 50 ಕೋಟಿ ಘೋಷಣೆ ಮಾಡಿದ್ದರು.


ಇದೀಗ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಗೂ ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲು ಬಿಜೆಪಿ ತುದಿಗಾಲಿನಲ್ಲಿ ನಿಂತಿದೆ. ರಾಮ ಮಂದಿರದ ವಿಷಯವನ್ನಿಟ್ಟುಕೊಂಡು ಚುನಾವಣೆ ಪ್ರಚಾರ ನಡೆಸಲು ಬಿಜೆಪಿ ಪ್ಲಾನ್ ಮಾಡಿಕೊಂಡಂತೆ ಕಾಣುತ್ತಿದೆ.


ಶಂಕು ಸ್ಥಾಪನೆಗೆ ಬಿಜೆಪಿ ಸಿದ್ಧತೆ


ಬಜೆಟ್​ನಲ್ಲಿ ಅನುದಾನ ಘೋಷಣೆಯಾಗಿ ಇನ್ನೂ 10 ದಿನಗಳು ಸಹ ಕಳೆದಿಲ್ಲ. ಅದಾಗಲೇ ರಾಮ ಮಂದಿರ ನಿರ್ಮಾಣದ ನೀಲನಕ್ಷೆ ಸಿದ್ಧಪಡಿಸಲಾಗಿದೆಯಂತೆ. ಮಾರ್ಚ್ ಮೊದಲ ವಾರದಲ್ಲಿಯೇ ರಾಮಮಂದಿರ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಲು ಬಿಜೆಪಿ ಸಿದ್ಧವಾಗುತ್ತಿದೆ ಎಂದು ತಿಳಿದು ಬಂದಿದೆ.


what budget have given to Kalburgi district
ಬಸವರಾಜ್ ಬೊಮ್ಮಾಯಿ, ಸಿಎಂ


ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣವಾದ ರೀತಿಯಲ್ಲಿಯೇ ರಾಮ ಮಂದಿರದ ಕೆಲಸಗಳು ನಡೆಯಬೇಕು ಎಂದು ಸಚಿವ ಅಶ್ವತ್ಥ್ ನಾರಾಯಣ್ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.


19 ಎಕರೆ ಪ್ರದೇಶದಲ್ಲಿ ರಾಮ ಮಂದಿರ?


19 ಎಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದ್ದು, ಮೊದಲ ಹಂತದಲ್ಲಿ 50 ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ಸಿದ್ಧವಾಗಿದೆ. ಹಣಕಾಸು ಇಲಾಖೆಗೆ 50 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ಅನುಮತಿ ಸಿಗಬೇಕಿದೆ. ಶೀಘ್ರವೇ ಅನುದಾನ ಬಿಡುಗಡೆ ಮಾಡಲು ಸಿಎಂ ಸಹ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.


ಯಶಸ್ವಿನಿ ಶರ್ಮಾ ನೇತೃತ್ವದಲ್ಲಿ ಶಿಲಾನ್ಯಾಸ


ರಾಮ ಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದ ದೇಣಿಗೆ ಹಾಗೂ ಅಗತ್ಯ ಸಾಮಾಗ್ರಿಗಳ ಸಂಗ್ರಹದ ಬಗ್ಗೆಯೂ ಚರ್ಚೆಗಳು ನಡೆದಿವೆ. ರಾಮ ದೇವರ ಬೆಟ್ಟದಲ್ಲಿ ಪ್ರಕೃತಿಗೆ ತೊಂದರೆಯಾಗದ ರೀತಿಯಲ್ಲಿ ಎಸ್ತೆಟಿಕ್ ಆರ್ಕಿಟೆಕ್ಟ್ ನ ಖ್ಯಾತ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ನೇತೃತ್ವದ ತಂಡದಿಂದ ಶಿಲಾನ್ಯಾಸ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ:  IAS Rohini Sindhuri: ಪ್ರಚಾರಪ್ರಿಯೆನಾ, ದಕ್ಷ ಅಧಿಕಾರಿನಾ? ರೋಹಿಣಿ ಸಿಂಧೂರಿ ಅಸಲಿ ಹಿನ್ನೆಲೆ ಇಲ್ಲಿದೆ


ಶಂಕುಸ್ಥಾಪನೆಗೆ ಬರ್ತಾರಾ ಯೋಗಿ ಆದಿತ್ಯನಾಥ್?


ಇತಿಹಾಸ ತಜ್ಞರು, ದೇಗುಲ ವಾಸ್ತುಶಿಲ್ಪಿ ಪರಿಣಿತರು, ಪರಿಸರ ಮತ್ತು ವನ್ಯಜೀವಿ ತಜ್ಞರು ವಿನ್ಯಾಸದ ತಂಡದಲ್ಲಿದ್ದಾರೆ. ಮಾರ್ಚ್​​​ನಲ್ಲಿ ಶಂಕುಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರ್ಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಶಂಕುಸ್ಥಾಪನೆ ನೆರವೇರಿಸಲು ಪ್ಲಾನ್ ಮಾಡಿಕೊಂಡಿದೆ. ಶಂಕುಸ್ಥಾಪನೆ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.




ಕಾರಿಗೆ ಬೆಂಕಿ, ಸಂಪೂರ್ಣ ಭಸ್ಮ


ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ರಾತ್ರಿ 9 ಗಂಟೆ ಸುಮಾರಿಗೆ ನಡುರಸ್ತೆಯಲ್ಲೇ ಕಾರ್ ಹೊತ್ತಿ ಉರಿದಿದೆ. ಕಾರಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರ್ ಸೈಡಿಗೆ ಹಾಕಿದ್ದಾರೆ ಕಾರು ಚಾಲಕ. ಬಳಿಕ ನೊಡ ನೋಡುತಿದ್ದಂತೆ ಹೊತ್ತಿ ಉರಿದಿದೆ. ನಡುರಸ್ತೆಯಲ್ಲಿ ಕಾರು ಧಗಧಗನೆ ಉರಿಯುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Published by:Mahmadrafik K
First published: