ತೆರಿಗೆ ಕಟ್ಟದವರ ಬದಲು ದಕ್ಷ ರಾಜಕಾರಣಿಗಳ ಮೇಲೆ ಐಟಿ ದಾಳಿ; ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ

ಯಾರು ತೆರಿಗೆ ಕಟ್ಟುವುದಿಲ್ಲವೋ ಅಂಥವರ ಮೇಲೆ ಐಟಿ ದಾಳಿ ಮಾಡಬೇಕು. ಆದರೆ, ರಾಜಕೀಯ ಪ್ರೇರಿತವಾಗಿ ದಕ್ಷ ರಾಜಕಾರಣಿಗಳ ಮನೆ ಮೇಲೆ ಐಟಿ ದಾಳಿ ನಡೆಸಲಾಗುತ್ತಿದೆ. ಐಟಿ ದಾಳಿ ಮೂಲಕ ವಿರೋಧ ಪಕ್ಷದವರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

news18-kannada
Updated:October 10, 2019, 1:49 PM IST
ತೆರಿಗೆ ಕಟ್ಟದವರ ಬದಲು ದಕ್ಷ ರಾಜಕಾರಣಿಗಳ ಮೇಲೆ ಐಟಿ ದಾಳಿ; ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ
ಹೆಚ್​.ಡಿ. ಕುಮಾರಸ್ವಾಮಿ
  • Share this:
ಬೆಂಗಳೂರು (ಅ.10): ರೈತರ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಲತಾಯಿ ಧೋರಣೆಯನ್ನು ಖಂಡಿಸಿ ಇಂದು ಜೆಡಿಎಸ್​ ಮತ್ತು ರೈತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಮೌರ್ಯ ಸರ್ಕಲ್​ನಿಂದ ಫ್ರೀಡಂ ಪಾರ್ಕ್​ವರೆಗೆ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್​ ನಾಯಕರು ಕಾಲ್ನಡಿಗೆಯಲ್ಲೇ ಪ್ರತಿಭಟನಾ ಜಾಥಾ ನಡೆಸಿದ್ದಾರೆ. 

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯದಲ್ಲಿ ಕಳೆದ 2 ತಿಂಗಳಿಂದ ನೆರೆ ಹಾವಳಿ ಇದೆ. ಆದರೂ ಸರ್ಕಾರದಿಂದ ಯಾವುದೇ ರೀತಿಯ ನೆರವು ಸಿಕ್ಕಿಲ್ಲ. ಸರಿಯಾದ ಪರಿಹಾರವೂ ದೊರೆತಿಲ್ಲ. ಇದರ ವಿರುದ್ಧ ಸಾಂಕೇತಿಕ ಪ್ರತಿಭಟನೆ ಮಾಡಲಾಗುತ್ತಿದೆ ಎಂದಿದ್ದಾರೆ.

ನಿರಾಶ್ರಿತರಿಗೆ ಮನೆ ಕಟ್ಟಿ ಕೊಡೋದಾಗಿ ರಾಜ್ಯ ಸರ್ಕಾರದ ನಾಯಕರು ಹೇಳಿದ್ದಾರೆ. 5 ಲಕ್ಷ ಮನೆ ಕಟ್ಟಲು ಹಣ ನೀಡುವುದಾಗಿ ಹೇಳಿದ್ದಾರೆ. ಆದರೆ ಈವರೆಗೂ ಒಂದು ಬಿಡಿಗಾಸೂ  ನೀಡಿಲ್ಲ. ಸಂತ್ರಸ್ತರ ಪರವಾಗಿ ನಿಲ್ಲೋ ಕೆಲಸ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಎಚ್ಚರಿಸಲು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು

ಐಟಿ ದಾಳಿ ಬಗ್ಗೆ ಹೆಚ್​ಡಿಕೆ ಟೀಕೆ:

ಯಾರು ತೆರಿಗೆ ಕಟ್ಟುವುದಿಲ್ಲವೋ ಅಂಥವರ ಮೇಲೆ ಐಟಿ ದಾಳಿ ಮಾಡಬೇಕು. ಆದರೆ, ರಾಜಕೀಯ ಪ್ರೇರಿತವಾಗಿ ದಕ್ಷ ರಾಜಕಾರಣಿಗಳ ಮನೆ ಮೇಲೆ ಐಟಿ ದಾಳಿ ನಡೆಸಲಾಗುತ್ತಿದೆ. ಐಟಿ ದಾಳಿ ಮೂಲಕ ವಿರೋಧ ಪಕ್ಷದವರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆಸಿದ್ದಕ್ಕೆ  ಹೆಚ್​ಡಿಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸ್ಪೀಕರ್ ಕಾಗೇರಿಯವರು ಮಾಧ್ಯಮಗಳಿಗೆ ನಿರ್ಬಂಧ ಹೇರುವ ಆದೇಶ ಹೊರಡಿಸಿರುವುದು  ಸರಿಯಲ್ಲ. ಇದರ ಹಿಂದಿ ಉದ್ದೇಶವೇನೆಂದು ರಾಜ್ಯ ಸರ್ಕಾರ ತಿಳಿಸಬೇಕು. ಹಾಗೇ ಕೂಡಲೇ ತಮ್ಮ ಸುತ್ತೋಲೆಯನ್ನ ಹಿಂಪಡೆಯಬೇಕು ಎಂದು ಹೆಚ್​.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.(ವರದಿ: ಮುನಿರಾಜು)

First published: October 10, 2019, 1:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading