Arun Singh: 2023 ರ ಚುನಾವಣೆಯಲ್ಲಿನ ಗೆಲ್ಲುವುದೇ ನಮ್ಮ ಮುಂದಿನ ಸವಾಲು: ಅರುಣ್​ ಸಿಂಗ್​

ಉಳಿದ ಸಚಿವ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಿಎಂ ಹೈಕಮಾಂಡ್ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

 • Share this:
  ಬೆಂಗಳೂರು (ಆ. 30): ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿರುವ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ (Karnataka BJP Incharge Arun singh) ಇಂದು ರಾಜ್ಯಕ್ಕೆ ಆಗಮಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಮಗನ ಬಿವೈ ವಿಜಯೇಂದ್ರ (BY vijayendra) ಅವರನ್ನು ಸಂಜೆ ಅವರು ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ (KIAL) ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಅರುಣ್​ ಸಿಂಗ್​​, 2023 ರ ಚುನಾವಣೆಯಲ್ಲಿನ ಗೆಲ್ಲುವುದೇ ನಮ್ಮ ಮುಂದಿನ ಸವಾಲು. ಹೀಗಾಗಿ ರಾಜ್ಯಾದ್ಯಂತ ಪ್ರತಿ ಜಿಲ್ಲೆಗೂ ಭೇಟಿ‌ ನೀಡುತ್ತೇನೆ, ಪಕ್ಷದ ಕಾರ್ಯಕರ್ತರು ಮುಖಂಡರ ಜತೆ ಸಂಘಟನೆ ಚುನಾವಣಾ ತಂತ್ರಗಳ ಬಗ್ಗೆ ಸಭೆ ಮಾಡುತ್ತೇನೆ. ಮೊದಲ ಹಂತವಾಗಿ ಮೈಸೂರು, ಮಂಡ್ಯ ಚಾಮರಾಜನಗರ ಜಿಲ್ಲೆಗಳಿಗೆ ಭೇಟಿ ‌ನೀಡುತ್ತಿದ್ದೇನೆ. ಹಂತ ಹಂತವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ ಎಂದರು.

  ಇದೇ ವೇಳೆ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಉಳಿದ ಸಚಿವ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಿಎಂ ಹೈಕಮಾಂಡ್ ಜತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

  ವಿಮಾನ ನಿಲ್ದಾಣದಿಂದ ಅವರು ನೇರವಾಗಿ ಮೈಸೂರಿಗೆ  (Mysore visit)ಹೊರಟಿದ್ದು, ಇ. ಇಂದು ಅಲ್ಲಿಯೇ ವಾಸ್ತವ್ಯ ಹೂಡಲಿರುವ ಅವರು, ನಾಳೆ ಬೆಳಗ್ಗೆ ನಾಡಿನ ಶಕ್ತಿ ದೇವತೆ ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಮೈಸೂರು, ಚಾಮರಾಜನಗರ ಜಿಲ್ಲಾ ಮಟ್ಟದ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

  ಮೂರು ದಿನ ರಾಜ್ಯ ಪ್ರವಾಸದ ವಿವರ

  ನಾಳೆಯಿಂದ ಸೆ. 3ರವರೆಗೆ ರಾಜ್ಯ ಪ್ರವಾಸ ನಡೆಸಲಿರುವ ಉಸ್ತುವಾರಿ ಅರುಣ್​ ಸಿಂಗ್​​ ವಿವಿಧ ಜಿಲ್ಲೆಗಳ ಪದಾಧಿಕಾರಿಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಅಂದರೆ, ಆಗಸ್ಟ್​ 31ರಂದು ಮೈಸೂರು, ಮೈಸೂರು ಗ್ರಾಮಾಂತರ, ಚಾಮರಾಜನಗರದಲ್ಲಿ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಸೆ. 1ರಂದು ಹಾಸನ, ಮಂಡ್ಯ, ಚನ್ನರಾಯಪಟ್ಟದಲ್ಲಿ ಸಭೆ ನಡೆಸಲಿದ್ದಾರೆ. ಸೆ. 2ರಂದು ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಜಿಲ್ಲೆಯ ಪದಾಧಿಕಾರಿಗಳ ಸಭೆ ನಡೆಸಲಿದ್ದು, ಬಳಿಕ ಹುಬ್ಬಳಿಗೆ ತೆರಳಲಿದ್ದಾರೆ. ಸೆ. 3ರಂದು ಅವರು ದೆಹಲಿಗೆ ಹೊರಡಲಿದ್ದಾರೆ.

  ಇದನ್ನು ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

  ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ತಿಂಗಳುಗಳ ಬಳಿಕ ರಾಜ್ಯಕ್ಕೆ ಆಗಮಿಸಿರುವ ಉಸ್ತುವಾರಿ ಅರುಣ್ ಸಿಂಗ್​ ಅವರ ಈ ಪ್ರವಾಸ ಸಾಕಷ್ಟು ಕುತೂಹಲ ಮೂಡಿಸಿದೆ. ಕಾರಣ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ  ಬೇಡಿಕೆ ಹೆಚ್ಚಿರುವ ಜೊತೆಯೇ ಖಾತೆ ಬಗ್ಗೆ ಅನೇಕ ಸಚಿವರು ಅಸಮಾಧಾನ ಹೊಂದಿದ್ದು, ಈ ಮುನಿಸುಗಳ ಶಮನಕ್ಕೆ ಅವರು ಮುಂದಾಗಲಿದ್ದಾರೆ ಎನ್ನಲಾಗಿದೆ.

  ಅ. 2ರಂದು ದಾವಣಗೆರೆಗೆ ಅಮಿತ್​ ಶಾ (Amit shah)

  ಇದೇ ವೇಳೆ ಅರುಣ್​ ಸಿಂಗ್​ ಬರಮಾಡಿಕೊಳ್ಳಲು ಆಗಮಿಸಿದ್ದ ಸಚಿವ ಬೈರತಿ ಬಸವರಾಜ್​ ಮಾತನಾಡಿ, ಅರುಣ್ ಸಿಂಗ್ ಯಾವಾಗ ಬೇಕಾದರೂ ರಾಜ್ಯಕ್ಕೆ ಬರಬಹುದು. ಪಕ್ಷ ಸಂಘಟನೆ ಮತ್ತು ಪಕ್ಷದ ಬಗ್ಗೆ ಚಿಂತನೆ ಮಾಡಬಹುದು. ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆ ಮುಗಿಸಿ ನಾಳೆ ಬೆಳಗಾವಿಗೆ ಹೋಗುತ್ತೇವೆ. ಅ. 2 ರಂದು ಅಮಿತ್ ಶಾ ದಾವಣಗೆರೆಗೆ ಬರಲಿದ್ದಾರೆ ಎಂದರು.

  ಖಾತೆ ಅಸಮಾಧಾನ ಇಲ್ಲ

  ಖಾತೆ ಅಸಮಾಧಾನ ವಿಚಾರ ಕುರಿತು ಮಾತನಾಡಿದ ಅವರು, ನಮ್ಮಲ್ಲಿ ಎಲ್ಲಾ ಸಮಾಧಾನ ಇದೆ ಯಾವುದೂ ಅಸಮಾಧಾನ ಇಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಒಗ್ಗಟ್ಟಾಗೆ ಮುಂದಿನ ಚುನಾವಣೆ ಎದುರಿಸುತ್ತೇವೆ. ಆನಂದ್ ಸಿಂಗ್ ಸಹ ಸಮಾಧಾನ ಆಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
  Published by:Seema R
  First published: