ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆಗೂ ಮುನ್ನವೇ ನಡೆಯಲಿದೆ ಅಸಮಾಧಾನಿತರ ಸಭೆ; ಕುತೂಹಲ ಮೂಡಿಸಿದ ಬೆಳವಣಿಗೆ

ಕಳೆದ ವಾರ ನಡೆದ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ವಲಸಿಗ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲಾಯಿತು. ಅಲ್ಲದೆ, ಅನುದಾನ ಹಂಚಿಕೆಯಲ್ಲೂ ತಾರತಮ್ಯ ಎಸಗಲಾಗುತ್ತಿದ್ದು, ವಲಸಿಗ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂಬುದು ಮೂಲ ಬಿಜೆಪಿ ಶಾಸಕರ ವಾದ. ಅಲ್ಲದೆ, ಇದರಿಂದ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂಬುದು ಅವರ ಆರೋಪವೂ ಹೌದು.

ಬಿಜೆಪಿಯ ಕಮಲ ಚಿಹ್ನೆ

ಬಿಜೆಪಿಯ ಕಮಲ ಚಿಹ್ನೆ

  • Share this:
ಬೆಂಗಳೂರು (ಫೆಬ್ರವರಿ 16); ಸಂಪುಟ ವಿಸ್ತರಣೆಯಾದ ದಿನದಿಂದ ಕಮಲ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತು ರಾಜಕೀಯ ವಠಾರದಲ್ಲಿ ಕೇಳಿ ಬರುತ್ತಲೇ ಇದೆ. ಇದಕ್ಕೆ ಪುಷ್ಠಿ ನೀಡುವಂತಹ ಬೆಳವಣಿಗೆಯೊಂದು ಕಮಲ ಪಾಳಯದಲ್ಲಿ ಇಂದು ನಡೆಯುತ್ತಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಂಜೆ ಬಿಜೆಪಿ ಪಕ್ಷದ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ. ಆದರೆ, ಈ ಸಭೆಗೂ ಮುಂಚಿತವಾಗಿಯೇ ಅಸಮಾಧಾನಿತ ಶಾಸಕರು ಸಭೆ ಕರೆದಿರುವುದು ಬಿಜೆಪಿ ರಾಜ್ಯ ನಾಯಕರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

ಶಾಸಕಾಂಗ ಸಭೆಗೂ ಮುನ್ನವೇ ಸಭೆ ಸೇರಲಿರುವ ಬಿಜೆಪಿ ಅಸಮಾಧಾನಿತ ಶಾಸಕರು ಈ ಸಭೆಯಲ್ಲಿ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ವಿಚಾರವನ್ನು ಪ್ರಸ್ತಾಪಿಸಿ ತಾರತಮ್ಯ ಸರಿಪಡಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಸಚಿವ ಸಂಪುಟ‌ ವಿಸ್ತರಣೆ ವೇಳೆ ತಮ್ಮನ್ನು ಕಡೆಗಣಿಸಿರುವುದರ ಜೊತೆಗೆ ಅನುದಾನದ ವಿಷಯದಲ್ಲೂ ರಾಜ್ಯ ನಾಯಕರು ತಾರತಮ್ಯ ನೀತಿ ಅನುಸರಿಸಿದ್ದಾರೆ. ಮಧ್ಯ ಕರ್ನಾಟಕ, ಕರಾವಳಿ ಹಾಗೂ ಹೈದ್ರಾಬಾದ್​ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಕುರಿತೂ ಈ ಸಭೆಯಲ್ಲಿ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಕಳೆದ ವಾರ ನಡೆದ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ವಲಸಿಗ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲಾಯಿತು. ಅಲ್ಲದೆ, ಅನುದಾನ ಹಂಚಿಕೆಯಲ್ಲೂ ತಾರತಮ್ಯ ಎಸಗಲಾಗುತ್ತಿದ್ದು, ವಲಸಿಗ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಲಾಗುತ್ತಿದೆ ಎಂಬುದು ಮೂಲ ಬಿಜೆಪಿ ಶಾಸಕರ ವಾದ. ಅಲ್ಲದೆ, ಇದರಿಂದ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂಬುದು ಅವರ ಆರೋಪವೂ ಹೌದು.

ಹೀಗಾಗಿ ಇಂದು ಬಿಜೆಪಿ ಶಾಸಕಾಂಸ ಸಭೆಗೂ ಮುನ್ನ ಅಸಮಾಧಾನಿತ ಶಾಸಕರ ಸಭೆ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡುವುದು ಈ ಸಭೆಯ ಉದ್ದೇಶ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಈ ವಲಸಿಗ ಮತ್ತು ಮೂಲ ಬಿಜೆಪಿಗರ ನಡುವಿನ ತಿಕ್ಕಾಟ ಕೊನೆಗೆ ಯಾವ ಹಂತ ತಲುಪಲಿದೆ? ಎಂಬುದನ್ನು ಕಾದು ನೋಡಲೇಬೇಕಿದೆ.

ಇದನ್ನೂ ಓದಿ : ಕೆಪಿಸಿಸಿ ನೂತನ ಅಧ್ಯಕ್ಷರ ಘೋಷಣೆಗೂ ಮುನ್ನವೇ ಸಂಭ್ರಮಾಚರಣೆಗೆ ಇಳಿದ ಡಿಕೆಶಿ ಅಭಿಮಾನಿಗಳು

First published: