ಸಿಎಎ ಕುರಿತು ಬಿಜೆಪಿ ನಾಯಕರಿಂದ ಮುಜುಗರದ ಹೇಳಿಕೆ; ಕಟೀಲ್​ಗೆ ಚಾಟಿ ಬೀಸಿದ ಹೈ ಕಮಾಂಡ್​​

ಪೌರತ್ವ ಕಾಯ್ದೆ ಜಾರಿ ತರಲು ಎಲ್ಲರ ವಿಶ್ವಾಸಗಳಿಸಿ ಜಾರಿಗೆ ತರಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಈ ನಡುವೆ ಈ ರೀತಿಯ ಹೇಳಿಕೆಗಳು ಹೊರ ಬಂದರೆ, ಅವರು ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತದೆ.

news18-kannada
Updated:January 23, 2020, 1:08 PM IST
ಸಿಎಎ ಕುರಿತು ಬಿಜೆಪಿ ನಾಯಕರಿಂದ ಮುಜುಗರದ ಹೇಳಿಕೆ; ಕಟೀಲ್​ಗೆ ಚಾಟಿ ಬೀಸಿದ ಹೈ ಕಮಾಂಡ್​​
ನಳಿನ್ ಕುಮಾರ್​ ಕಟೀಲ್​
  • Share this:
ಬೆಂಗಳೂರು (ಜ.23): ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ರಾಜ್ಯ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಪಕ್ಷಕ್ಕೆ ಲಾಭಾವಾಗುವುದಕ್ಕಿಂತ ಹೆಚ್ಚು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿದೆ. ಇದರಿಂದ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷಕ್ಕೆ ಇರಿಸು ಮುರುಸಾಗುತ್ತಿದ್ದು, ಈ ರೀತಿಯ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹೈ ಕಮಾಂಡ್​ ರಾಜ್ಯಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ಗೆ ಎಚ್ಚರಿಸಿದ್ದಾರೆ. 

ಸಿಎಎ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ್ದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ, ದೇಶದಲ್ಲಿ ಶೇ 80ರಷ್ಟು ಹಿಂದೂಗಳಿದ್ದರೆ, ಅಲ್ಪಸಂಖ್ಯಾತರ ಸಂಖ್ಯೆ ಕೇವಲ 17 ರಷ್ಟು ಮಾತ್ರ. ಹಾಗಾಗಿ ಯಾವುದೇ ಹೆಜ್ಜೆ ಮುಂದಿಡುವ ಮುನ್ನ ಎಚ್ಚರಿಕೆಯಿಂದ ಇರಿ ಎಂದಿದ್ದರು. ಕೋಮು ಪ್ರಚೋದನೆ ಹೇಳಿಕೆ ನೀಡುವ ಮೂಲಕ ರೆಡ್ಡಿ ಅಲ್ಪಸಂಖ್ಯಾತರಿಗೆ ಎಚ್ಚರಿಕೆ ರವಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಹರಿಹಾಯುವ ಜೊತೆ ದೂರು ದಾಖಲಿಸಿದ್ದರು.

ಇದಾದ ಬಳಿಕ ಮಾತನಾಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ಮದರಾಸಗಳು ಭಯೋತ್ಪಾದನಾ ತಾಣಗಳಾಗಿವೆ. ಶ ನಿರ್ಮಾಣದಲ್ಲಿ ಅವರ ಕೊಡುಗೆ ಶೂನ್ಯ ಇದೆ. ನನಗೆ ಚುನಾವಣೆಯಲ್ಲಿ ಮತ ಹಾಕದ ಅವರ ಕ್ಷೇತ್ರದಲ್ಲಿ ನಾನು ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿಲ್ಲ ಎಂದಿದ್ದರು.

ಇನ್ನು ಭಯತ್ಪಾದಕರೆಲ್ಲಾ ಮುಸ್ಲಿರು. ಭಯೋತ್ಪಾದಕರು ಎಂದರೇ ಪಾಕಿಸ್ತಾನದಿಂದ ಬಂದವರು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಸಾಕಷ್ಟು ಮುಜುಗರ ಉಂಟು ಮಾಡಿದ್ದರು.

ಬಿಜೆಪಿ ನಾಯಕರ ಈ ಹೇಳಿಕೆಯಿಂದ ಸಿಎಎ ವಿರುದ್ಧ ಪ್ರತಿಭಟನಾಕಾರರಿಗೆ ಇನ್ನಷ್ಟು ಪುಷ್ಠಿ ನೀಡಿದಂತೆ ಆಗಿದೆ. ಈ ರೀತಿಯ ಹೇಳಿಕೆಯಿಂದ ಕಾಯ್ದೆಗೂ ಕೂಡ ಹಿನ್ನೆಡೆಯಾಗಲಿದೆ. ಪಕ್ಷದ ನಾಯಕರುಗಳು ಈ ರೀತಿ ಮೇಲಿಂದ ಮೇಲೆ ಮಾತನಾಡುತ್ತಿದ್ದರೂ ಯಾಕೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಕಟೀಲ್​ಗೆ ಹೈ ಕಮಾಂಡ್​ ಪ್ರಶ್ನಿಸಿದೆ.

ಇದನ್ನು ಓದಿ: ಮುಸ್ಲಿಮರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡುವುದಿಲ್ಲ: ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಎಚ್ಚರಿಕೆ

ಅಲ್ಲದೇ, ಪೌರತ್ವ ಕಾಯ್ದೆ ಜಾರಿ ತರಲು ಎಲ್ಲರ ವಿಶ್ವಾಸಗಳಿಸಿ ಜಾರಿಗೆ ತರಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಈ ನಡುವೆ ಈ ರೀತಿಯ ಹೇಳಿಕೆಗಳು ಹೊರ ಬಂದರೆ, ಅವರು ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿಯೂ ಇವು ಸುದ್ದಿಯಾಗುತ್ತಿದ್ದು, ಈ ರೀತಿ ಅಹಿತಕರ ಹೇಳಿಕೆ ನೀಡುವ ನಾಯಕರಿಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ್ದಾರೆ.ಜೊತೆಗೆ ಪೌರತ್ವ ಕಾಯ್ದೆ ಬಗ್ಗೆ ಶಾಸಕರು ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿ  ಜನಜಾಗೃತಿ ಕೆಲಸ ಮಾಡಲು ಸೂಚಿಸಲು ಕೂಡ ಇದೇ ವೇಳೆ ಹೈಕಮಾಂಡ್ ಸೂಚಿಸಿದೆ.
First published: January 23, 2020, 1:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading