ದೆಹಲಿಯಲ್ಲಿ ಇಂದು ರಾಜ್ಯದ ಬಿಜೆಪಿ ಜನಪ್ರತಿನಿಧಿಗಳಿಗೆ ವರಿಷ್ಠರಿಂದ ಚುನಾವಣೆ ರಣತಂತ್ರಗಳ ಪಾಠ

ಲೋಕಸಭಾ ಚುನಾವಣಾ ಕಾರ್ಯತಂತ್ರಗಳು ಹೇಗಿರಬೇಕು? ಎಂಬ ಬಗ್ಗೆ ಸಭೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಟಿಪ್ಸ್ ನೀಡಲಿದ್ದಾರೆ.

Vijayasarthy SN | news18
Updated:January 13, 2019, 9:40 AM IST
ದೆಹಲಿಯಲ್ಲಿ ಇಂದು ರಾಜ್ಯದ ಬಿಜೆಪಿ ಜನಪ್ರತಿನಿಧಿಗಳಿಗೆ ವರಿಷ್ಠರಿಂದ ಚುನಾವಣೆ ರಣತಂತ್ರಗಳ ಪಾಠ
ಅಮಿತ್​ ಶಾ
Vijayasarthy SN | news18
Updated: January 13, 2019, 9:40 AM IST
- ಧರಣೀಶ್ ಬೂಕನಕೆರೆ,

ನವದೆಹಲಿ(ಜ. 12): ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿರುವ ಬಿಜೆಪಿ ಇಂದಿನಿಂದ ದೆಹಲಿಯಲ್ಲಿ ರಾಜ್ಯದ ಎಲ್ಲಾ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರ ಸಭೆ ಕರೆದಿದೆ. ಇದಕ್ಕಾಗಿ ದೆಹಲಿಯ ವೆಸ್ಟರ್ನ್ ಕೋರ್ಟ್ ಬುಕ್ ಆಗಿದ್ದು ಬೆಳಗ್ಗೆಯಿಂದ ಸಂಜೆವರೆಗೂ ಅಲ್ಲಿ ತಾಲೀಮು ನಡೆಯಲಿದೆ‌.‌ ಪಕ್ಷದ ರಾಷ್ಟ್ರಾಧ್ಯಕ್ಷ  ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರರಾವ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಲೋಕಸಭಾ ಚುನಾವಣೆಗೆ ವಿವಿಧ ಸಮುದಾಯದವರ ಮತ ಹೇಗೆ ಸೆಳೆಯಬೇಕು? ಚುನಾವಣಾ ವಿಷಯಗಳು ಹೇಗಿರಬೇಕು? ಮತ್ತೊಮ್ಮೆ ಮೋದಿ ಅಲೆ ಎಬ್ಬಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಣಿಸುವ ಬಗ್ಗೆ ಚಿಂಥನ-ಮಂಥನ

ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿಯನ್ನು ಹೇಗೆ ಎದುರಿಸಬೇಕು? ಚುನಾವಣೆ ಮಹಾಸಮರಕ್ಕೆ ನಡೆಸಿಕೊಳ್ಳಬೇಕಾದ ಪೂರ್ವ ಸಿದ್ಧತೆಗಳಾವುವು? ವಿರೋಧ ಪಕ್ಷಗಳನ್ನು ಸೆದೆ ಬಡಿಯುವುದು ಹೇಗೆ? ಎಂಬ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ.

ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಮಿತ್ ಶಾ ಟಿಪ್ಸ್
ಈಗಾಗಲೇ ರಾಜ್ಯದ ಎಲ್ಲಾ ಲೋಕಸಭಾ ಅಭ್ಯರ್ಥಿಗಳ ಕುರಿತಂತೆ ಸ್ಥಳೀಯ ನಾಯಕರಿಂದ ಬಿಜೆಪಿ ಹೈಕಮಾಂಡ್​​ ಮಾಹಿತಿ ಸಂಗ್ರಹಿಸಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್​​. ಯಡಿಯೂರಪ್ಪ ಕೂಡ ಅಭ್ಯರ್ಥಿಗಳ ಸ್ಥಿತಿಗತಿ ವರದಿ ಸಿದ್ದಪಡಿಸಿಕೊಂಡಿದ್ದಾರೆ. ಇದರೊಂದಿಗೆ ಸ್ಥಳೀಯ ನಾಯಕರ ಅಭಿಪ್ರಾಯವನ್ನು ನಾಳಿನ ಸಭೆಯಲ್ಲಿ ಸಂಗ್ರಹಿಸುವ ಸಾಧ್ಯತೆ ಇದೆ. ಬಳಿಕ ಅಮಿತ್ ಶಾ ಅಭ್ಯರ್ಥಿಗಳ ಆಯ್ಕೆ ಮಾನದಂಡ ಹೇಗಿರಬೇಕು? ಯಾರಿಗೆ ಅವಕಾಶ ನೀಡಬೇಕು? ಎಂಬ ಬಗ್ಗೆ ಸಲಹೆ ನೀಡಲಿದ್ದಾರೆ‌.
Loading...

ಕರ್ನಾಟಕವೇ ಟಾರ್ಗೆಟ್, ಅಮಿತ್ ಶಾ ಹೈ ಅಲರ್ಟ್
ದಕ್ಷಿಣ ಭಾರತದಲ್ಲಿ ಬಿಜೆಪಿ ಅತಿಹೆಚ್ಚು ಸೀಟು ಗೆಲ್ಲಲು ಸಾಧ್ಯ ಇರುವುದು ಕರ್ನಾಟಕದಲ್ಲಿ ಮಾತ್ರ. ಆದಕಾರಣ ಅಮಿತ್ ಶಾ ಕರ್ನಾಟಕವನ್ನೇ ಟಾರ್ಗೆಟ್ ಮಾಡಿಕೊಂಡಿದ್ದು ರಾಜ್ಯ ಘಟಕಕ್ಕೆ ಹೆಚ್ಚು ಗುರಿ ನೀಡಿದ್ದಾರೆ. ನಾಳೆ ಕೂಡ ಅದನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳುವ ಸಾಧ್ಯತೆ ಇದೆ.
First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...