HOME » NEWS » State » BJP HIGH COMMAND LIKELY TO GREEN SIGNAL FOR CM YEDIYURAPP CABINET EXPANSION DBDEL HK

ರಾಜ್ಯ ಸಚಿವ ಸಂಪುಟ ಕಸರತ್ತು: ಸಚಿವಾಕಾಂಕ್ಷಿಗಳಿಗೆ ಹೊಸ ವರ್ಷಕ್ಕೆ ಗುಡ್ ನ್ಯೂಸ್

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕಳುಹಿಸಿರುವ ಪಟ್ಟಿಯ ಪೈಕಿ ಈಗಾಗಲೇ ನಾಲ್ಕು ಹೆಸರುಗಳಿಗೆ ಹೈಕಮಾಂಡ್ ಕೂಡ ಹಸಿರು ನಿಶಾನೆ ತೋರಿದೆ ಎಂದು ಹೇಳಲಾಗುತ್ತಿದೆ.

news18-kannada
Updated:December 24, 2020, 6:25 PM IST
ರಾಜ್ಯ ಸಚಿವ ಸಂಪುಟ ಕಸರತ್ತು: ಸಚಿವಾಕಾಂಕ್ಷಿಗಳಿಗೆ ಹೊಸ ವರ್ಷಕ್ಕೆ ಗುಡ್ ನ್ಯೂಸ್
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಡಿಸೆಂಬರ್​. 24): ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಸಚಿವ ಸಂಪುಟ ಪುನರ್​ ರಚನೆ ಕಸರತ್ತು ಕಡೆಗೂ ಬಗೆಹರಿಯುವ ಲಕ್ಷಣಗಳು ಕಂಡುಬಂದಿವೆ.‌ ಸಚಿವಾಕಾಂಕ್ಷಿಗಳಿಗೆ ಹೊಸ ವರ್ಷಕ್ಕೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 15ರಿಂದ ಎರಡು ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದು, ಮತ್ತೆ ಸಚಿವ ಸಂಪುಟ ಪುನರ್ರಚನೆಯ ಕಸರತ್ತಿಗೆ ಜೀವ ಬಂದಿದೆ. ಭದ್ರಾವತಿಯಲ್ಲಿ ಸಿಆರ್​ಎಫ್​ಟಿ ತರಬೇತಿ ಕೇಂದ್ರ ಉದ್ಘಾಟನೆ ಮಾಡುವುದು ಸೇರಿದಂತೆ ಹಲವು‌ ಕಾರ್ಯಗಳನ್ನು ಹಮ್ಮಿಕೊಂಡಿರುವ ಅಮಿತ್ ಶಾ, ಬಹಳ ಮುಖ್ಯವಾಗಿ ಸಂಪುಟ ಕಗ್ಗಂಟನ್ನು ಬಿಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯೇಂದ್ರ ಮೂಲಕ ಸಚಿವಾಕಾಂಕ್ಷಿಗಳ ಪಟ್ಟಿ ಹೈಕಮಾಂಡಿಗೆ ರವಾನೆ :

ಸಚಿವ ಸಂಪುಟ ಪುನರ್ರಚನೆ ಈಗಾಗಲೇ ಸಾಕಷ್ಟು ತಡವಾಗಿರುವುದರಿಂದ ಹಾಗೂ ಸಚಿವಾಕಾಂಕ್ಷಿಗಳ ಒತ್ತಡ ಹೆಚ್ಚಾಗುತ್ತಿರುವುದರಿಂದ ಸಿಎಂ ಯಡಿಯೂರಪ್ಪ ಈಗ ಪುತ್ರ ವಿಜಯೇಂದ್ರನನ್ನು ದೆಹಲಿಗೆ ಕಳುಹಿಸಿ ಹೈಕಮಾಂಡ್ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ವಿಜಯೇಂದ್ರನ ಮೂಲಕ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡಿಗೆ ರವಾನಿಸಿದ್ದಾರೆ. 3 ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ವಿಜಯೇಂದ್ರ ಪಟ್ಟಿಯನ್ನು ಹೈಕಮಾಂಡಿಗೆ ಕೊಟ್ಟಿದ್ದಾರೆ ಎಂದು ಕೂಡ ತಿಳಿದುಬಂದಿದೆ.

ನಾಲ್ವರಿಗೆ ಸಚಿವ ಸ್ಥಾನ ಗಟ್ಟಿ:

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕಳುಹಿಸಿರುವ ಪಟ್ಟಿಯ ಪೈಕಿ ಈಗಾಗಲೇ ನಾಲ್ಕು ಹೆಸರುಗಳಿಗೆ ಹೈಕಮಾಂಡ್ ಕೂಡ ಹಸಿರು ನಿಶಾನೆ ತೋರಿದೆ ಎಂದು ಹೇಳಲಾಗುತ್ತಿದೆ. ಅವರುಗಳೆಂದರೆ ಆರ್. ಶಂಕರ್, ಎಂಟಿಬಿ ನಾಗರಾಜ್, ಮುನಿರತ್ನ ನಾಯ್ಡು ಮತ್ತು ಉಮೇಶ್ ಕತ್ತಿ.

ಇದನ್ನೂ ಓದಿ : ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಮತ್ತೆ ಮರು ಟೆಂಡರ್: ನಳಿನ್ ಕುಮಾರ್ ಕಟೀಲ್

ಶಾಸಕ ಸ್ಥಾನ ತ್ಯಜಿಸಿ ಬಿ ಎಸ್ ಯಡಿಯೂರಪ್ಪ ಸರ್ಕಾರ ಬರಲು ಕಾರಣಕರ್ತರಾದ ಆರ್. ಶಂಕರ್, ಎಂಟಿಬಿ ನಾಗರಾಜ್, ಮುನಿರತ್ನ ನಾಯ್ಡು ಮತ್ತು ಹಿರಿಯ ಶಾಸಕ ಉಮೇಶ್ ಕತ್ತಿ ಹೆಸರುಗಳು ಈಗಾಗಲೇ ಫೈನಲ್ ಆಗಿವೆ. ಅಂದರೆ ಹಿಂದಿನ ಮಾತುಕತೆಗಳಲ್ಲೇ ಹೈಕಮಾಂಡ್ ಈ ಹೆಸರುಗಳಿಗೆ ಓಕೆ ಎಂದು ಹೇಳಿದೆ ಎನ್ನಲಾಗಿದೆ.ಇಬ್ಬರು ಹಾಲಿ ಸಚಿವರಿಗೆ ಕೋಕ್ ಸಾಧ್ಯತೆ :

ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ 7 ಸ್ಥಾನಗಳು ಖಾಲಿ ಇದ್ದು ನಿಷ್ಕ್ರಿಯರಾಗಿರುವ ಇಬ್ಬರು ಸಚಿವರನ್ನು ಕೈಬಿಟ್ಟು, ಹೊಸದಾಗಿ ಇಬ್ಬರು ಅಥವಾ ಮೂವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಸಿಎಂ ಯಡಿಯೂರಪ್ಪ ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡುತ್ತಾ ಇಲ್ಲವಾ ಎಂಬುದು ಅಮಿತ್ ಶಾ ರಾಜ್ಯ ಭೇಟಿ ವೇಳೆ ಗೊತ್ತಾಗಲಿದೆ.

ಬಹುತೇಕ ಒಪ್ಪಿಗೆಯಾಗಿರುವ ಎಂಟಿಬಿ ನಾಗರಾಜ್, ಆರ್. ಶಂಕರ್, ಮುನಿರತ್ನ ನಾಯ್ಡು ಹಾಗೂ ಉಮೇಶ್ ಕತ್ತಿ ಹೆಸರುಗಳಿಗೆ ಡಿಸೆಂಬರ್ ಕೊನೆಯಲ್ಲೇ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ. ಇವರುಗಳಿಗೆ ಹೊಸ ವರ್ಷಕ್ಕೆ ಶುಭಸುದ್ದಿ ಸಿಗಬಹುದು. ಉಳಿದವರು ಇನ್ನೂ ಸ್ವಲ್ಪ ದಿನ ಕಾಯಬೇಕಾಗಬಹುದು.
Published by: G Hareeshkumar
First published: December 24, 2020, 6:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories