• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Election Campaign: ಬಿಜೆಪಿ ಪ್ರಚಾರ ಮಹಾಭಿಯಾನ; 98 ಕೇಂದ್ರ, 150 ರಾಜ್ಯ ನಾಯಕರಿಂದ ಮತಬೇಟೆ

Election Campaign: ಬಿಜೆಪಿ ಪ್ರಚಾರ ಮಹಾಭಿಯಾನ; 98 ಕೇಂದ್ರ, 150 ರಾಜ್ಯ ನಾಯಕರಿಂದ ಮತಬೇಟೆ

ಬಿಜೆಪಿ ಪ್ರಚಾರ ಮಹಾಭಿಯಾನ

ಬಿಜೆಪಿ ಪ್ರಚಾರ ಮಹಾಭಿಯಾನ

BJP Leaders: ಆಯಾ ಕ್ಷೇತ್ರದಲ್ಲಿರುವ ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ, ಫಲಾನುಭವಿಗಳ ಜೊತೆ ಸಂವಾದ ನಡೆಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಿದ್ದಾರೆ.

  • Share this:

ಬೆಂಗಳೂರು: ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ಬಿಜೆಪಿ (BJP) ಅಬ್ಬರದ ಪ್ರಚಾರಕ್ಕೆ ಮುಂದಾಗಿದೆ. ಈಗಾಗಲೇ ಜನಸಂಕಲ್ಪ ಯಾತ್ರೆ (Jana Sankalpa Yatre) ಹೆಸರಿನಲ್ಲಿ ಒಂದು ಸುತ್ತಿನ ಪ್ರಚಾರವನ್ನು ಬಿಜೆಪಿ ನಡೆಸಿದೆ. ಇಂದು, ನಾಳೆ ರಾಜ್ಯದ 224 ಕ್ಷೇತ್ರಗಳಲ್ಲಿ ಬಿಜೆಪಿ ಕೇಂದ್ರ, ರಾಜ್ಯ ನಾಯಕರಿಂದ (BJP Leaders) ಭರ್ಜರಿ ಕ್ಯಾಂಪೇನ್ (Election Campaign) ಮಾಡಲಿದ್ದಾರೆ. 98 ಮಂದಿ ಕೇಂದ್ರ ನಾಯಕರು, 150 ರಾಜ್ಯ ನಾಯಕರು ಮನೆ ಮನೆಗೆ ಭೇಟಿ ನೀಡಿ ಸರ್ಕಾರದ (BJP Government) ಸಾಧನೆ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲಿದ್ದಾರೆ. ಆಯಾ ಕ್ಷೇತ್ರದಲ್ಲಿರುವ ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ, ಫಲಾನುಭವಿಗಳ ಜೊತೆ ಸಂವಾದ ನಡೆಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಿದ್ದಾರೆ.


ಕೇಂದ್ರ ನಾಯಕರಾದ ಜೆ.ಪಿ.ನಡ್ಡಾ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಅರುಣ್‌‍ ಸಿಂಗ್‌, ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್‌, ನಿರ್ಮಲಾ ಸೀತಾರಾಮನ್‌. ಮನ್ಸುಕ್‌ ಮಾಂಡವೀಯ, ಯೋಗಿ ಆದಿತ್ಯನಾಥ್‌, ದೇವೇಂದ್ರ ಫಡ್ನವೀಸ್‌ ಸೇರಿ ಹಲವರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಇದರ ಜೊತೆ 150 ರಾಜ್ಯ ನಾಯಕರು ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ.
ಮಂಡ್ಯ, ವಿಜಯಪುರಕ್ಕೆ ಸಿಎಂ ಆದಿತ್ಯನಾಥ್


ನಾಳೆ ಮಂಡ್ಯದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ 3 ಕಿಲೋ ಮೀಟರ್​ ಬೃಹತ್​ ರೋಡ್​ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ಮತಯಾಚನೆ ಮಾಡಲಿದ್ದಾರೆ.


ಇದನ್ನೂ ಓದಿ:  HD Revanna: ಹಾಸನಕ್ಕೆ ಅಮೆರಿಕಾ ಅಧ್ಯಕ್ಷರಾದರು ಬರಲಿ, ರಷ್ಯಾ ಪ್ರೆಸಿಡೆಂಟ್​​ನಾದರೂ ಕರೆತರಲಿ; ಅಮಿತ್​​ ಶಾ ಭೇಟಿಗೆ ರೇವಣ್ಣ ಟಾಂಗ್​!


ಮಂಡ್ಯ ಬಳಿಕ ವಿಜಯಪುರದ ಬಸವನ ಬಾಗೇವಾಡಿಗೆ ಭೇಟಿ ನೀಡಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಎಸ್​ಕೆ ಬೆಳ್ಳುಬ್ಬಿ ಪರ ಪ್ರಚಾರ ನಡೆಸಲಿದ್ದಾರೆ. ನಂತರ ಇಂಡಿಯಲ್ಲಿ ಆಯೋಜನೆ ಮಾಡಲಾಗಿರುವ ರೋಡ್​ಶೋನಲ್ಲಿ ಭಾಗಿಯಾಗಲಿದ್ದಾರೆ.

top videos
    First published: