Bitcoin Scam: ಸಿಎಂ ಬದಲಾವಣೆ ಚರ್ಚೆ; ಜಗದೀಶ್ ಶೆಟ್ಟರ್ ದೆಹಲಿಗೆ ಕರೆಸಿಕೊಂಡ ಬಿಜೆಪಿ ಹೈಕಮಾಂಡ್!

ಬಿಟ್ ಕಾಯಿನ್ ಹಗರಣ ದೊಡ್ಡದಾಗುತ್ತಿದ್ದಂತೆ ಸಿಎಂ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದೆ. ಇದೇ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಳ್ಳುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಸಚಿವ ಜಗದೀಶ್ ಶೆಟ್ಟರ್.

ಸಚಿವ ಜಗದೀಶ್ ಶೆಟ್ಟರ್.

 • Share this:
  ಬೆಂಗಳೂರು: ಬಿಟ್ ಕಾಯಿನ್ ಹಗರಣ (Bitcoin Scam) ಬಿಜೆಪಿಯಲ್ಲಿ (Karnataka State BJP) ಭಾರೀ ಬಿರುಗಾಳಿಯನ್ನೇ ಹಬ್ಬಿಸಿದೆ. ಈ ಹಗರಣ ಇದೀಗ ಸಿಎಂ ಸ್ಥಾನಕ್ಕೂ ಸಂಚಕಾರ ತಂದೊಗುವ ಮಟ್ಟಕ್ಕೆ ಬೆಳೆಕ್ಕೆ ಬೆಳೆದಿದೆ. ಇದೇ ವಿಷಯವಾಗಿ ನೆನ್ನೆ ದೆಹಲಿಗೆ ತೆರಳಿದ್ದ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಹೈಕಮಾಂಡ್ ನಾಯಕರನ್ನು (BJP High Command Leaders) ಭೇಟಿಯಾಗಿ ಬಿಟ್ ಕಾಯಿನ್ ಹಗರಣ ಸಂಬಂಧ ಎದ್ದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದರು. ಅದರ ಬೆನ್ನಲ್ಲೇ ರಾಜ್ಯದ ಕೆಲ ಬಿಜೆಪಿ ನಾಯಕರು ಪಕ್ಷದ ನಿಷ್ಠರು ಎಂಬ ಹೆಸರಲ್ಲಿ ಬೆಂಗಳೂರಿನಲ್ಲಿ ಸಿಎಂ ಬದಲಾವಣೆ ಕುರಿತಂತೆ ಸಭೆ ಕೂಡ ನಡೆಸಿದ್ದರು. ಅದರ ಬೆನ್ನಲ್ಲೇ ಇದೀಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ. ಹೈಕಮಾಂಡ್ ಆದೇಶದಂತೆ ಜಗದೀಶ್ ಶೆಟ್ಟರ್ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ.   ಮೂಲ ಬಿಜೆಪಿ ನಾಯಕರ ಬಂಡಾಯ

  ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗುತ್ತಿದ್ದಂತೆ ಮತ್ತು ಬಿಟ್ ಕಾಯಿನ್ ಹಗರಣದ ಚರ್ಚೆ ಶುರುವಾಯಿತೋ 'ಒಳಗಿನ' ಅಥವಾ ಮೂಲ ಬಿಜೆಪಿ ನಾಯಕರು 'ಪಕ್ಷ ನಿಷ್ಠರ ಹೆಸರಿನಲ್ಲಿ ಸಭೆ ಸೇರಲು‌ ಶುರು ಮಾಡಿದ್ದಾರೆ ಎಂದು ಗೊತ್ತಾಗಿದೆ. ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಸಂದರ್ಭದಲ್ಲಿ ಸದ್ದಿಲ್ಲದೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಲು ಸಂಘ ಪರಿವಾರದ ಮೂಲಕ ಪ್ರಬಲವಾಗಿ ಲಾಬಿ ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ನಾಯಕರೊಬ್ಬರ ಸರ್ಕಾರಿ ಬಂಗಲೆಯಲ್ಲಿ 'ಈ ಪಕ್ಷ ನಿಷ್ಠರು' ಸಭೆ ಸೇರಿದ್ದಾರೆ. ಅವರದ್ದೆ 'ಅಧ್ಯಕ್ಷತೆಯಲ್ಲಿ' ಸಭೆ ನಡೆದಿದೆ.

  ಹೈಕಮಾಂಡ್​ ಭೇಟಿಯಾಗಿದ್ದ ಸಿಎಂ ಬೊಮ್ಮಾಯಿ

  ಈ ಸುಳಿವು ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೇ ಕಾರಣಕ್ಕೆ ದೆಹಲಿಗೆ ತೆರಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ (BJP National President JP Nadda) ಅವರನ್ನು ಭೇಟಿ ಮಾಡಿ ತಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ದೂರು ನೀಡಿದ್ದರು. ರಾಜ್ಯ ಬಿಜೆಪಿಯ ನಾಯಕರು 'ಪಕ್ಷ ನಿಷ್ಠರ' ಹೆಸರಿನಲ್ಲಿ ಬೆಂಗಳೂರಿನ ಸರ್ಕಾರಿ ಬಂಗಲೆಯೊಂದರಲ್ಲಿ ಪದೇ ಪದೇ ಸಭೆ ಸೇರಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಬಿಟ್ ಕಾಯನ್ ಹಗರಣ ಬಳಸಿಕೊಂಡು ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನ ನಡೆಸುತ್ತಿದ್ದಾರೆ. ಬಿಟ್ ಕಾಯನ್ ಹಗರಣ ಹೊರಬರಲು ಸ್ಚಪಕ್ಷೀಯರೇ ಕಾರಣ. ಬಿಟ್ ಕಾಯನ್ ಹಗರಣ ಹೆಚ್ಚು ಚರ್ಚೆಯಾಗಲು ಬಿಜೆಪಿ ನಾಯಕರೇ ಕಾರಣ. ಬಿಟ್ ಕಾಯನ್ ಹಗರಣದ ಬಗ್ಗೆ ಪ್ರತಿಪಕ್ಷಗಳಿಗೆ ಬಿಜೆಪಿ ನಾಯಕರೇ ಮಾಹಿತಿ ನೀಡುತ್ತಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಿ ವಿಷಯವನ್ನು ಜೀವಂತವಾಗಿ ಇಟ್ಟಿದ್ದಾರೆ' ಎಂಬುದಾಗಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

  ಇದನ್ನು ಓದಿ: ಸಿಎಂ ಬೊಮ್ಮಾಯಿ ಕೆಳಗಿಳಿಸಲು ಸ್ವಪಕ್ಷೀಯರಿಂದಲೇ ಸ್ಕೆಚ್​: Bitcoin ಹಗರಣದ Exclusive News!

  ಸಚಿವ ಸ್ಥಾನ ಬೇಡ ಎಂದಿದ್ದ ಶೆಟ್ಟರ್

  ಮಾಜಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರು ಯಡಿಯೂರಪ್ಪ ಸರ್ಕಾರದಲ್ಲಿ ಪಟ್ಟು ಹಿಡಿದು ಸಚಿವ ಸ್ಥಾನ ಪಡೆದಿದ್ದರು. ಆದರೆ, ಬಿಎಸ್​ವೈ ಬದಲಾವವಣೆ ನಂತರ ಬಸವರಾಜ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ಬರುತ್ತಿದ್ದಂತೆ ತಾವಾಗಿಯೇ ಮಂತ್ರಿ ಸ್ಥಾನ ಬೇಡ ಎಂದು ಹೇಳಿದ್ದರು. ಹೊರನೋಟಕ್ಕೆ ಅವರಿಗೆ ಬೊಮ್ಮಾಯಿ ಕೈಕೆಳಗೆ ಕೆಲಸ ಮಾಡಲು ಇಷ್ಟವಿರಲಿಲ್ಲ ಎಂಬುದು ಬಹಿರಂಗ ಸತ್ಯವಾಗಿತ್ತು. ಇದೀಗ ಬಿಟ್ ಕಾಯಿನ್ ಹಗರಣ ದೊಡ್ಡದಾಗುತ್ತಿದ್ದಂತೆ ಸಿಎಂ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದೆ. ಇದೇ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಳ್ಳುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
  Published by:HR Ramesh
  First published: