Santosh Suicide Case: 40% ಕಮಿಷನ್, ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ಸಮಗ್ರ ವರದಿ ಕೇಳಿದ BJP ಹೈಕಮಾಂಡ್

Santosh Suicide Case: ಈಶ್ವರಪ್ಪ ರಾಜೀನಾಮೆ ಪಡೆಯುವಂತೆ ಸಿಎಂ ಬಸವರಾಜ ಬೊಮ್ಮಾಯಿ‌ ಮೇಲೆ ಕೂಡ ಒತ್ತಡ ಹೆಚ್ಚಾಗುತ್ತಿದೆ. ರಾಜೀನಾಮೆ ಪಡೆದುಕೊಳ್ಳುವುದು ತಡವಾದಷ್ಟು ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗಲಿದೆ. ಈಶ್ವರಪ್ಪ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ಈಗ ಪ್ರಮುಖವಾದ ಅಸ್ತ್ರವಾಗಿದೆ.

ಸಂತೋಷ್ ಪಾಟೀಲ್

ಸಂತೋಷ್ ಪಾಟೀಲ್

  • Share this:
ನವದೆಹಲಿ, ಏ. 13: ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ (Minister K.S.Eshwarappa) ಅವರೇ ಕಾರಣ ಎಂದು ಸ್ಪಷ್ಟವಾಗಿ ಡೆತ್​ ನೋಟ್ (Death Note)​ ಬರೆದಿಟ್ಟು ಗುತ್ತಿಗೆದಾರ ಹಾಗೂ ಹಿಂದೂ ಸಂಘಟನೆಯ ಮುಖಂಡ ಸಂತೋಷ್​ ಪಾಟೀಲ್ (Contractor Santosh Patil) ಆತ್ಮಹತ್ಯೆಗೆ ಶರಣಾಗಿರುವ ವಿಷಯ ಈಗ ದೆಹಲಿ ಮಟ್ಟದಲ್ಲೂ ಭಾರೀ ಸಂಚಲನ ಮೂಡಿಸಿದೆ. ಐದು ರಾಜ್ಯಗಳ ಚುನಾವಣೆ ಫಲಿತಾಂಶದ (Election Results) ಬಳಿಕ‌ ಕರ್ನಾಟಕ(Karnataka)ದಲ್ಲೂ ಗೆಲ್ಲಬಹುದು ಎಂದು ಭಾರೀ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಹೈಕಮಾಂಡ್ ನಾಯಕರಿಗೆ ತಮ್ಮದೇ ಪಕ್ಷದ ವಿರುದ್ಧ ಕೇಳಿ ಬರುತ್ತಿರುವ 40% ಕಮಿಷನ್ (40% Commission Allegation) ವಿಚಾರ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಷಯ ಭಾರೀ ತಲೆನೋವಾಗಿ ಪರಿಣಮಿಸಿದೆ. ಈ‌ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ (BJP High Command) ರಾಜ್ಯ ಘಟಕದಿಂದ ಸಮಗ್ರವಾದ ವರದಿ ಕೇಳಿದೆ.

ನಳಿನ್ ಕುಮಾರ್ ಕಟೀಲ್ ಗೆ ಸೂಚನೆ

ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಹಾಗೂ ಹಿಂದೂ ಸಂಘಟನೆಯ ಮುಖಂಡ ಸಂತೋಷ್​ ಪಾಟೀಲ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಅವರ ಸಂಬಂಧ ಹೇಗಿತ್ತು? ಸಂತೋಷ್ ಪಾಟೀಲ್ ಆತ್ಮಹತ್ಯೆಯಲ್ಲಿ ಈಶ್ವರಪ್ಪ ಅವರ ಪಾತ್ರ ಏನು? ಸಂತೋಷ್ ಪಾಟೀಲ್ ಮೇಲೆ ಈಶ್ವರಪ್ಪ ಒತ್ತಡ ಹೇರಿದ್ದರಾ? 40% ಕಮಿಷನ್ ನೀಡುವಂತೆ ಮತ್ತು ಮಾನನಷ್ಟ ಮೊಕದ್ದಮೆ ಮೂಲಕ ಒತ್ತಡ ಹೇರಿದ್ದರಾ? ನಿಜಕ್ಕೂ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ಕಾರಣರಾ? ಎಂಬ ಬಗ್ಗೆ ಸಮಗ್ರವಾದ ಮಾಹಿತಿ ನೀಡಿ ಎಂದು ವರದಿ ಕೇಳಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:  Santosh Patil: ಉಡುಪಿಯಲ್ಲಿ FIR ದಾಖಲು; ಮೊದಲ ಆರೋಪಿ ಸ್ಥಾನದಲ್ಲಿ ಸಚಿವ KS Eshwarappa ಹೆಸರು

ರಾಜ್ಯ ಸರ್ಕಾರದ ಬಗ್ಗೆಯೂ ವರದಿ ನೀಡಿ

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತಿರುವ ವಿಚಾರ ಮಾತ್ರವಲ್ಲದೆ ರಾಜ್ಯ ಸರ್ಕಾರದ ಮೇಲೂ ಇಂಥದೇ ಆರೋಪ ಬಂದಿದೆ.

ಈ‌ ಹಿನ್ನೆಲೆಯಲ್ಲಿ 40% ಕಮಿಷನ್ ಪಡೆಯುತ್ತಿರುವ ವಿಚಾರ ಪಕ್ಷದ ನಾಯಕತ್ವಕ್ಕೆ ಗೊತ್ತಿದೆಯಾ? 40% ಕಮಿಷನ್ ವಿಷಯದಿಂದ ಪಕ್ಷದ ಇಮೇಜ್ ಹೇಗಾಗಿದೆ? ರಾಜ್ಯ ಸರ್ಕಾರದ ಕಾರ್ಯವೈಖರಿ ಹೇಗಿದೆ? ರಾಜ್ಯ ಸರ್ಕಾರದ ಬಗ್ಗೆ ವಿಶೇಷವಾಗಿ 40% ಕಮಿಷನ್ ಪಡೆಯುತ್ತಿದೆ ಬಿಜೆಪಿ ಸರ್ಕಾರ ಎಂಬ ಬಗ್ಗೆ ಜನಾಭಿಪ್ರಾಯ ಹೇಗಿದೆ ಎಂಬ ವಿಷಯಗಳ ಬಗ್ಗೆ ಕೂಡ ಸಮಗ್ರವಾದ ಮಾಹಿತಿ ನೀಡುವಂತೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

ವರದಿ ಆಧರಿಸಿ ಕ್ರಮ

ಈಗಾಗಲೇ 40% ಕಮಿಷನ್ ಪಡೆಯುತ್ತಿರುವ ವಿಚಾರ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕಿತ್ತುಹಾಕಬೇಕು ಎಂಬ ಬಗ್ಗೆ ಒತ್ತಡ ಹೆಚ್ಚಾಗುತ್ತಿದ್ದು ನಳಿನ್ ಕುಮಾರ್ ಕಟೀಲ್ ನೀಡುವ ವರದಿ ಆಧರಿಸಿ ಜೆಪಿ ನಡ್ಡ ಕ್ರಮ ಕೈಗೊಳ್ಳುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ಈಶ್ವರಪ್ಪ ರಾಜೀನಾಮೆ ಪಡೆಯುವಂತೆ ಸಿಎಂ ಬಸವರಾಜ ಬೊಮ್ಮಾಯಿ‌ ಮೇಲೆ ಕೂಡ ಒತ್ತಡ ಹೆಚ್ಚಾಗುತ್ತಿದೆ. ರಾಜೀನಾಮೆ ಪಡೆದುಕೊಳ್ಳುವುದು ತಡವಾದಷ್ಟು ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗಲಿದೆ. ಈಶ್ವರಪ್ಪ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ಈಗ ಪ್ರಮುಖವಾದ ಅಸ್ತ್ರವಾಗಿದೆ.

ಇದನ್ನೂ ಓದಿ:  Santhosh Suicide Case: ಕೆ.ಎಸ್​ ಈಶ್ವರಪ್ಪ ತಲೆದಂಡ ಬಹುತೇಕ ಫಿಕ್ಸ್!? ಕಾಂಗ್ರೆಸ್​ಗೆ ಸಿಕ್ಕಿದೆ ಪ್ರಬಲ ಅಸ್ತ್ರ

ಹೈಕಮಾಂಡ್ ಸೂಚನೆ ಬರುತ್ತಿದ್ದಂತೆ ರಾಜೀನಾಮೆ ಸಾಧ್ಯತೆ

ಇಂದು ಕಾಂಗ್ರೆಸ್ ನಿಯೋಗ ರಾಜ್ಯಪಾಲರ ಭೇಟಿ ಮಾಡಲಿದೆ. ಇನ್ನೂ ಹಲವು ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳಲಿದೆ. ಕಾಂಗ್ರೆಸ್ ಕೈಯಲ್ಲಿರುವ ಅಸ್ತ್ರ ಕಸಿದುಕೊಳ್ಳಲು ರಾಜೀನಾಮೆ ಪಡೆಯುವುದೇ ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವರು ಸಲಹೆ ನೀಡಿದ್ದಾರೆ. ಹೇಗೂ ಸಂಪುಟ ಪುನರ್ ರಚನೆ ವೇಳೆ ಈಶ್ವರಪ್ಪ ಅವರನ್ನು ಕೈಬಿಡಬೇಕಿತ್ತು ಈಗಲೇ ರಾಜೀನಾಮೆ ಪಡೆದು ಪಕ್ಷಕ್ಕಾಗುವ ಧಕ್ಕೆ ತಪ್ಪಿಸಿ ಎಂದು ಹೇಳಿದ್ದಾರೆ.‌ ಹೈಕಮಾಂಡ್ ಸೂಚನೆ ಬರುತ್ತಿದ್ದಂತೆ ರಾಜೀನಾಮೆ ಪಡೆಯಲಾಗುತ್ತದೆ ಎಂದು ತಿಳಿದುಬಂದಿದೆ
Published by:Mahmadrafik K
First published: