ಅರಣ್ಯ ಸಚಿವ ಆನಂದ್ ಸಿಂಗ್ ಮೇಲಿನ ಪ್ರಕರಣಗಳ ಮಾಹಿತಿ ಕೇಳಿದ ಹೈಕಮಾಂಡ್

ಆನಂದ್​ ಸಿಂಗ್​ಗೆ ಅರಣ್ಯ ಖಾತೆ ನೀಡಿರುವುದು ಬೇಲಿಯೇ ಎದ್ದು ಹೊಲ ಮೇಯಲು ಅವಕಾಶ ಮಾಡಿಕೊಟ್ಟಂತೆ. ಈ ಮೂಲಕ ಅವರ ಹಾದಿ ಸುಗಮವಾಗಿದೆ ಎಂದು ವಿಪಕ್ಷಗಳು ಕೂಡ ಟೀಕಿಸಿವೆ. 

news18-kannada
Updated:February 14, 2020, 1:06 PM IST
ಅರಣ್ಯ ಸಚಿವ ಆನಂದ್ ಸಿಂಗ್ ಮೇಲಿನ ಪ್ರಕರಣಗಳ ಮಾಹಿತಿ ಕೇಳಿದ ಹೈಕಮಾಂಡ್
ಆನಂದ್​ ಸಿಂಗ್​​
  • Share this:
ಬೆಂಗಳೂರು (ಫೆ. 14): ಅರಣ್ಯ ಕಾಯ್ದೆ ಉಲ್ಲಂಘನೆ ಕುರಿತು ಪ್ರಕರಣವಿದ್ದು, ಆನಂದ್​ ಸಿಂಗ್​ಗೆ ಅರಣ್ಯ ಖಾತೆ ನೀಡಿರುವ ಬಗ್ಗೆ ದಿನಕ್ಕೊಂದು ವಿವಾದಗಳು ಮೇಲೇಳುತ್ತಿವೆ. ಇದರಿಂದ ಸರ್ಕಾರ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇದ್ದು, ಈ ಕುರಿತು ಎಚ್ಚೆತ್ತ ಹೈ ಕಮಾಂಡ್​, ಆನಂದ್ ಸಿಂಗ್ ಮೇಲಿನ ಪ್ರಕರಣಗಳ ಕುರಿತು ವರದಿ ಕೇಳಿದೆ. 

ಗಣಿ ಉದ್ಯಮದಲ್ಲಿ ತೊಡಗಿರುವ ಸಚಿವ ಆನಂದ್​ ಸಿಂಗ್​ ಮೇಲೆ ಒಟ್ಟಾರೆ 20 ಪ್ರಕರಣಗಳಿದ್ದು, ಇದರಲ್ಲಿ 10 ಪ್ರಕರಣಗಳು ಅರಣ್ಯ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದ್ದಕ್ಕಾಗಿದೆ. ಅಷ್ಟೇ ಅಲ್ಲದೇ ಗಣಿಗಾರಿಕೆ ಪ್ರಕರಣದಲ್ಲಿ 2013ರಲ್ಲಿ ಬಂಧನಕ್ಕೆ ಒಳಗಾಗಿದ್ದ ಅವರು,  ಎರಡು ವರ್ಷ ಜೈಲು ಶಿಕ್ಷೆ ಕೂಡ ಅನುಭವಿಸಿದ್ದರು.

ಆನಂದ್​ ಸಿಂಗ್​ಗೆ ಅರಣ್ಯ ಖಾತೆ ನೀಡಿರುವುದು ಬೇಲಿಯೇ ಎದ್ದು ಹೊಲ ಮೇಯಲು ಅವಕಾಶ ಮಾಡಿಕೊಟ್ಟಂತೆ. ಈ ಮೂಲಕ ಅವರ ಹಾದಿ ಸುಗಮವಾಗಿದೆ ಎಂದು ವಿಪಕ್ಷಗಳು ಕೂಡ ಟೀಕಿಸಿವೆ.

ಈ ಎಲ್ಲಾ ಆರೋಪಗಳನ್ನು ಹೊಂದಿದ್ದ ಅವರು ಮುಖ್ಯಮಂತ್ರಿ ಬಳಿ ಅದೇ ಬೇಕೆಂದು ಪಟ್ಟು ಹಿಡಿದು ಅರಣ್ಯ ಖಾತೆ ಪಡೆದಿದ್ದಾರೆ. ಇದಕ್ಕಾಗಿ ಮೊದಲು ನೀಡಿದ್ದ ಆಹಾರ ಮತ್ತು ನಾಗರಿಕ ಖಾತೆ ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಮೇಲಿನ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ತಮ್ಮ ಗಣಿ ಉದ್ಯಮದಲ್ಲಿ ತೊಡಗುವ ವಿಚಾರಗಳಿಗೆ ಅವರೇ ಪರವಾನಿಗೆ ನೀಡುವ ಅಧಿಕಾರ ಹೊಂದಲಿದ್ದಾರೆ ಎಂಬುದು ವಿಪಕ್ಷ ನಾಯಕರುಗಳ ಆರೋಪವಾಗಿದೆ.

ಸಿಂಗ್​ ಮೇಲಿನ ಅರಣ್ಯ ಒತ್ತುವರಿ ಮಾಡಿದ ಗಂಭೀರ ಆರೋಪ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಹೇಗೆ ಸಿಎಂ ಅವರಿಗೆ ಈ ಖಾತೆ ನೀಡಿದರು ಎಂಬ ಕೂಗು ಕೂಡ ಕೇಳಿಬಂದಿದೆ.

ಇದನ್ನು ಓದಿ: ಗಣಿ ವ್ಯವಹಾರ ಅಂದ್ಮೇಲೆ ಅರಣ್ಯ ನಿಯಮ ಉಲ್ಲಂಘನೆ ಪ್ರಕರಣ ಸಹಜ: ಅರಣ್ಯ ಸಚಿವ ಸ್ಥಾನ ಸಮರ್ಥಿಸಿಕೊಂಡ ಆನಂದ್​ ಸಿಂಗ್

ಮುಂದೆ ಇದೇ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆ ಇದ್ದು, ಉರುಳಾಗುವ ಮುನ್ನವೇ ಎಚ್ಚೆತ್ತುಕೊಳ್ಳಲು ಮುಂದಾಗಿರುವ ಹೈ ಕಮಾಂಡ್​ ಈ ಕುರಿತು ಸವಿವರ ವರದಿ ಕೇಳಿದೆ. ಈ ಕುರಿತು ಮುಂದಿನ ನಿರ್ಧಾರ ಕೈ ಗೊಳ್ಳಲು ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

 
First published: February 14, 2020, 1:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading