• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಂಜೆ ರಾಜಧಾನಿಗೆ ಆಗಮಿಸಲಿರುವ ಧರ್ಮೇಂದ್ರ ಪ್ರಧಾನ್​, ಕಿಶನ್ ರೆಡ್ಡಿ; ನಾಳೆ ಸಿಎಂ ಘೋಷಣೆ

ಸಂಜೆ ರಾಜಧಾನಿಗೆ ಆಗಮಿಸಲಿರುವ ಧರ್ಮೇಂದ್ರ ಪ್ರಧಾನ್​, ಕಿಶನ್ ರೆಡ್ಡಿ; ನಾಳೆ ಸಿಎಂ ಘೋಷಣೆ

ಇಂದು ಶಾಸಕರ ಅಭಿಪ್ರಾಯ ಸಂಗ್ರಹದ ಬಳಿಕ ವೀಕ್ಷಕರು ಈ ವರದಿಯನ್ನು ಹೈ ಕಮಾಂಡ್​ಗೆ ನೀಡಲಿದ್ದು, ಬಳಿಕ ಮುಂದಿನ ಸಿಎಂ ಯಾರು ಎಂಬ ಘೋಷಣೆಯನ್ನು ಹೊರಡಿಸಲಿದೆ.

ಇಂದು ಶಾಸಕರ ಅಭಿಪ್ರಾಯ ಸಂಗ್ರಹದ ಬಳಿಕ ವೀಕ್ಷಕರು ಈ ವರದಿಯನ್ನು ಹೈ ಕಮಾಂಡ್​ಗೆ ನೀಡಲಿದ್ದು, ಬಳಿಕ ಮುಂದಿನ ಸಿಎಂ ಯಾರು ಎಂಬ ಘೋಷಣೆಯನ್ನು ಹೊರಡಿಸಲಿದೆ.

ಇಂದು ಶಾಸಕರ ಅಭಿಪ್ರಾಯ ಸಂಗ್ರಹದ ಬಳಿಕ ವೀಕ್ಷಕರು ಈ ವರದಿಯನ್ನು ಹೈ ಕಮಾಂಡ್​ಗೆ ನೀಡಲಿದ್ದು, ಬಳಿಕ ಮುಂದಿನ ಸಿಎಂ ಯಾರು ಎಂಬ ಘೋಷಣೆಯನ್ನು ಹೊರಡಿಸಲಿದೆ.

  • Share this:

    ಬೆಂಗಳೂರು (ಜು. 27): ಯಡಿಯೂರಪ್ಪ ಪದತ್ಯಾಗದ ಬಳಿಕ ಮುಖ್ಯಮಂತ್ರಿಯಾಗಿ ಯಾರನ್ನು ನೇಮಕ ಮಾಡಬೇಕು ಎಂಬ ಪ್ರಶ್ನೆ ಈಗ ಎದುರಾಗಿದೆ. ಈ ಎಲ್ಲಾ ಕುರಿತು ಚರ್ಚೆಗೆ ಇಂದು ಶಾಸಕಾಂಗ ಸಭೆ ನಡೆಸಲಾಗುತ್ತಿದೆ. ಈ ಹಿನ್ನಲೆ ವೀಕ್ಷಕರಾಗಿ ಧರ್ಮೇಂದ್ರ ಪ್ರಧಾನ್​, ಕಿಶನ್ ರೆಡ್ಡಿ ಅವರನ್ನು ಹೈ ಕಮಾಂಡ್​ ನಿಯೋಜನೆ ಮಾಡಿದೆ. ಇಂದು ಸಭೆ ರಾಜ್ಯಕ್ಕೆ ಆಗಮಿಸುವ ವೀಕ್ಷಕರು ಶಾಸಕಾಂಗ ಪಕ್ಷದ ಸಭೆ ನಡೆಸಿ ಅಲ್ಲಿ ಪಕ್ಷದ ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಇನ್ನು ಇಲ್ಲಿ ಪ್ರಮುಖ ಶಾಸಕರ ಅಭಿಪ್ರಾಯ ಮಾತ್ರ ಸಂಗ್ರಹವಾಗಲಿದೆ ಎಂಬ ಮಾತು ಕೂಡ ಕೇಳಿ ಬಂದಿದೆ. ಈಗಾಗಲೇ ಸಿಎಂ ರೇಸ್​ನಲ್ಲಿ ಇರುವ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹ ಕೂಡ ನಡೆಯಲಿದೆ ಎನ್ನಲಾಗಿದೆ.


    ಇಂದು ಶಾಸಕರ ಅಭಿಪ್ರಾಯ ಸಂಗ್ರಹದ ಬಳಿಕ ವೀಕ್ಷಕರು ಈ ವರದಿಯನ್ನು ಹೈ ಕಮಾಂಡ್​ಗೆ ನೀಡಲಿದ್ದು, ಬಳಿಕ ಮುಂದಿನ ಸಿಎಂ ಯಾರು ಎಂಬ ಘೋಷಣೆಯನ್ನು ಹೊರಡಿಸಲಿದೆ. ವೀಕ್ಷಕರ ಅಭಿಪ್ರಯಾದ ಬಳಿಕ ಹೈ ಕಮಾಂಡ್​ ಮತ್ತೊಂದು ಸುತ್ತಿನ ಚರ್ಚೆ ಕೂಡ ನಡೆಸಲಿದೆ ಎನನಲಾಗಿದೆ




    ಈಗಾಗಲೇ ಸಿಎಂ ರೇಸ್​ನಲ್ಲಿ ಹಲವು ನಾಯಕರು ಇದ್ದು, ಅಂತಿಮವಾಗಿ ಯಾರಿಗೆ ಪಟ್ಟ ಕಟ್ಟಬೇಕು ಎಂಬ ಕುರಿತು ಚರ್ಚೆ ನಡೆಯುತ್ತಲೇ ಇದೆ. 2023ರ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಆಯ್ಕೆ ನಡೆಯಬೇಕಿರುವ ಹಿನ್ನಲೆ ಈ ಕುರಿತು ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುತ್ತಿದೆ ಎನ್ನಲಾಗಿದೆ


    ಮುಂದಿನ ಸಿಎಂ ಆಯ್ಕೆ ವೇಳೆ ಶಾಸಕಾರ ಸಹಕಾರವೂ ಅಗತ್ಯವಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಸಿಎಂ ಯಾರು ಎಂಬ ಕುರಿತು ಹೈ ಕಮಾಂಡ್​ ನಿರ್ಧಾರ ಮಾಡಿದ್ದು, ಈ ಕುರಿತು ಚರ್ಚೆಗೆ ಶಾಸಕಾಂಗ ಸಭೆಯನ್ನು ಕರೆಯಲಾಗಿದೆ. ಈ ಶಾಸಕಾಂಗ ಸಭೆಯಲ್ಲಿ ಯಾರು ಸಿಎಂ ಎಂಬ ಕುರಿತು ತಿಳಿಸಲಿದ್ದು, ಅವರಿಗೆ ಎಲ್ಲಾ ಶಾಸಕರು ಬೆಂಬಲ ನೀಡಿ, ಸಹಕಾರ ನೀಡುವಂತೆ ತಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


    ಪಕ್ಷದ ಬೆಳವಣಿಗೆ ಕುರಿತು ರಾಜ್ಯದ ಪ್ರಮುಖ ನಾಯಕರ ಬಳಿ ಚರ್ಚೆ ನಡೆಸಲಿದ್ದಾರೆ. ಬಳಿಕ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲಾ ನಾಯಕರ ಬಳಿ ಚರ್ಚಿಸಿ, ಹೈ ಕಮಾಂಡ್​ ಆಯ್ಕೆ ಮಾಡಿದ ಸಿಎಂ ಅಭ್ಯರ್ಥಿಗೆ ಬೆಂಬಲಿಸುವಂತೆ ಸೂಚನೆ ನೀಡಲಾಗುವುದು. ಇನ್ನುಳಿದ ಎರಡು ವರ್ಷಗಳ ಕಾಲ ಆಯ್ಕೆಯಾದ ಸಿ ಎಂ ಅಭ್ಯರ್ಥಿಗೆ ಬೆಂಬಲಿ, ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವಂತೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗುವುದು


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು