• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Nehru Olekar: ಹಾವೇರಿ ಶಾಸಕ ನೆಹರೂ ಓಲೇಕಾರ್‌ಗೆ 2 ವರ್ಷ ಜೈಲು, ಕೋಟಿ ಕೋಟಿ ಗೋಲ್ಮಾಲ್ ಮಾಡಿದ್ದ ಪುತ್ರಿರಿಗೂ ಶಿಕ್ಷೆ!

Nehru Olekar: ಹಾವೇರಿ ಶಾಸಕ ನೆಹರೂ ಓಲೇಕಾರ್‌ಗೆ 2 ವರ್ಷ ಜೈಲು, ಕೋಟಿ ಕೋಟಿ ಗೋಲ್ಮಾಲ್ ಮಾಡಿದ್ದ ಪುತ್ರಿರಿಗೂ ಶಿಕ್ಷೆ!

ನೆಹರು ಓಲೇಕಾರ್

ನೆಹರು ಓಲೇಕಾರ್

ಪ್ರಕರಣದಲ್ಲಿ ಎ1 ನೆಹರೂ ಓಲೇಕಾರ್, ಎ2 ಮಂಜುನಾಥ್ ಓಲೇಕಾರ್, ಎ3 ದೇವರಾಜ್ ಓಲೇಕಾರ್, ಎ4 ಎಚ್ ಕೆ ರುದ್ರಪ್ಪ, ಎ5 ಎಚ್.ಕೆ.ಕಲ್ಲಪ್ಪ, ಎ7 ಶಿವಕುಮಾರ್ ಪಿ, ಎ8 ಚಂದ್ರಮೋಹನ್ ಪಿ.ಎಸ್ ಸೇರಿದಂತೆ 8 ಮಂದಿ ಅಪರಾಧಿಗಳು ತಪ್ಪು ಎಸಗಿರುವುದು ಸಾಬೀತಾಗಿದೆ.

  • News18 Kannada
  • 2-MIN READ
  • Last Updated :
  • Haveri, India
  • Share this:

ಹಾವೇರಿ: ಮೀಸಲು ಕ್ಷೇತ್ರದ (Havery) ಬಿಜೆಪಿ (BJP) ಶಾಸಕ ಶಾಸಕ ನೆಹರೂ ಓಲೇಕಾರ್ (Nehru Olekar) ಹಾಗೂ ಇಬ್ಬರು ಪುತ್ರ ಸೇರಿ ಐವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ  (Special Courts for MP/MLA)ಎರಡು ವರ್ಷ ಜೈಲು, ಎರಡು ಸಾವಿರ ದಂಡ ವಿಧಿಸಿ ಆದೇಶ ಪ್ರಕಟಿಸಿದೆ. 2012ರಲ್ಲಿ ನಗರಸಭೆ ಕಾಮಗಾರಿಯಲ್ಲಿ ಅವ್ಯವಹಾರ ಮಾಡಿದ್ದ ಪ್ರಕರಣದಲ್ಲಿ ನೆಹರೂ ಓಲೇಕಾರ ಮಕ್ಕಳು ಹಾಗೂ ಅಧಿಕಾರಿಗಳಿಗೆ ಶಿಕ್ಷೆಯಾಗಿದೆ. ನಕಲಿ ದಾಖಲೆ ಸೃಷ್ಟಿಸಿ 5 ಕೋಟಿ 35 ಲಕ್ಷ ರೂಪಾಯಿ ಮೋಸ ಮಾಡಿದ್ದ ಎಂಟು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿತ್ತು. ನ್ಯಾಯಾಲಯದ ವಿಚಾರಣೆ ವೇಳೆ ಸುಳ್ಳು ಕ್ಲಾಸ್ ಓನ್ ಗುತ್ತಿಗೆದಾರ ಪ್ರಮಾಣಪತ್ರ ಪಡೆದು ಕಾಮಗಾರಿ ಮಾಡಿರುವುದು ಸಾಭೀತು ಹಿನ್ನಲೆಯಲ್ಲಿ ಕೋರ್ಟ್​ ಶಿಕ್ಷೆ ವಿಧಿಸಿದೆ.


ಪ್ರಕರಣದಲ್ಲಿ ಎ1 ನೆಹರೂ ಓಲೇಕಾರ್, ಎ2 ಮಂಜುನಾಥ್ ಓಲೇಕಾರ್, ಎ3 ದೇವರಾಜ್ ಓಲೇಕಾರ್, ಎ4 ಎಚ್ ಕೆ ರುದ್ರಪ್ಪ, ಎ5 ಎಚ್.ಕೆ.ಕಲ್ಲಪ್ಪ, ಎ7 ಶಿವಕುಮಾರ್ ಪಿ, ಎ8 ಚಂದ್ರಮೋಹನ್ ಪಿ.ಎಸ್ ಸೇರಿದಂತೆ 8 ಮಂದಿ ಅಪರಾಧಿಗಳು ತಪ್ಪು ಎಸಗಿರುವುದು ಸಾಬೀತಾಗಿದೆ. ಇತ್ತ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಪರಾಧಿಗಳು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಶಾಸಕ ಓಲೇಕಾರ್ ಸೇರಿದಂತೆ ಇಬ್ಬರು ಪುತ್ರರಿಗೂ ಹಾಗೂ ಅಧಿಕಾರಿಗಳಿಗೆ ಕೋರ್ಟ್​ ಜಾಮೀನು ಮಂಜೂರು ಮಾಡಿದೆ.




ಇದನ್ನೂ ಓದಿ: WPL Action 2023 RCB: 'ನಮ್ಮ ಬೆಂಗಳೂರು' ತಂಡಕ್ಕೆ ಬಂದ ಕನ್ನಡತಿ! RCB ಟೀಂನಲ್ಲಿ ಯಾರೆಲ್ಲಾ ಇದ್ದಾರೆ? ಇಲ್ಲಿದೆ ಫುಲ್ ಡಿಟೇಲ್ಸ್


ಪ್ರಕರಣದಲ್ಲಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದ ಲೋಕಾಯುಕ್ತ ಪೊಲೀಸರು


ಹಾವೇರಿ ಶಾಸಕ ನೆಹರೂ ಓಲೇಕಾರ್ ಅವರು ತಮ್ಮ ಇಬ್ಬರು ಪುತ್ರರಿಗೆ ಅಕ್ರಮವಾಗಿ ಅಭಿವೃದ್ಧಿ ಕಾಮಗಾರಿ ಗುತ್ತಿಗೆ ನೀಡಿ ಸ್ವಜನಪಕ್ಷಪಾತ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು. ದೂರಿನಲ್ಲಿ ಗುತ್ತಿಗೆದಾರರಾಗಿರುವ ಶಾಸಕರ ಪುತ್ರರಿಗೆ 50 ಲಕ್ಷ ರೂಪಾಯಿಗೂ ಅಧಿಕ ಕಾಮಗಾರಿ ಗುತ್ತಿಗೆ ನೀಡಲಾಗಿದೆ ಆರೋಪಿಸಲಾಗಿತ್ತು.


ಈ ದೂರಿನ ಅನ್ವಯ ವಿಶೇಷ ನ್ಯಾಯಾಲಯ, ಪ್ರಕರಣದ ತನಿಖೆಯನ್ನು ದಾವಣಗೆರೆ ಲೋಕಾಯುಕ್ತ ಪೊಲೀಸರಿಗೆ ವಹಿಸಿತ್ತು. ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಒಟ್ಟು 9 ಮಂದಿ ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದರು.


ಇದನ್ನೂ ಓದಿ: Valentine's Day: ಪ್ರೇಮಿಗಳೇ ಎಚ್ಚರ ಎಚ್ಚರ, ವ್ಯಾಲೆಂಟೈನ್ಸ್ ಡೇ ಹೆಸರಲ್ಲಿ ಮೈಮರೆತರೆ ಹುಷಾರ್! ಪಾರ್ಕ್, ಹೋಟೆಲ್‌ಗಳ ಮೇಲೆ ಕಣ್ಣಿಡುತ್ತಂತೆ ಶ್ರೀರಾಮಸೇನೆ!


ಮಂಜುನಾಥ್ ಓಲೇಕಾರ/ದೇವರಾಜ್ ಓಲೇಕಾರ


ಓರ್ವ ಅರೋಪಿ ವಿಚಾರಣೆ ಅವಧಿಯಲ್ಲಿ ನಿಧನ


ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನಾಯ್ಯಾಲಯ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳು ತಪ್ಪಿತಸ್ಥರು ಎಂದು ಘೋಷಿಸಿದೆ. ಉಳಿದಂತೆ ಓರ್ವ ಆರೋಪಿ ವಿಚಾರಣೆ ಸಮಯದಲ್ಲಿ ಸಾವನ್ನಪ್ಪಿರುವ ಕಾರಣ, ಅವರ ವಿರುದ್ಧ ಪ್ರಕರಣ ರದ್ದುಗೊಳಿಸಲಾಗಿದೆ. 2009ರಿಂದ 2011ರ ಅವಧಿಯಲ್ಲಿ ನಡೆದಿದ್ದ ಭ್ರಷ್ಟಾಚಾರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅಧಿಕಾರಿಗಳು ಅಕ್ರಮವಾಗಿ ಬಿಲ್​​ಗಳನ್ನು ನೀಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.


ಸಾಮಾನ್ಯ ಕುಟುಂಬ ಸದಸ್ಯರ ಮೇಲೆ ದಬ್ಬಾಳಿಕೆ ಆರೋಪ


ಶಾಸಕ ನೆಹರೂ ಓಲೇಕಾರ ಕುಟುಂಬಸ್ಥರ ವಿರುದ್ಧ ದಬ್ಬಾಳಿಕೆ ಆರೋಪ ಕೇಳಿ ಬಂದಿತ್ತು. ಜಮೀನಿಗಾಗಿ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದ ನಿವಾಸಿಗಳ ಮೇಲೆ ದಿಬ್ಬಾಳಿಕೆ ನಡೆಸಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಅಲ್ಲದೆ ದಬ್ಬಾಳಿಕೆ ಒಳಗಾದ ಕುಟುಂಸ್ಥರು ಜಮೀನಿನಲ್ಲೇ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದರು.

Published by:Sumanth SN
First published: