HOME » NEWS » State » BJP GOVERNMENT WILL GIVE RESERVATION TO SCHEDULED CASTE COMMUNITY SAYS CHALAVADI NARAYANASWAMY LG

ಒಳಮೀಸಲಾತಿ ವಿಚಾರಕ್ಕೆ ಬಿಜೆಪಿ ಸರ್ಕಾರ ತಾರ್ಕಿಕ ಅಂತ್ಯ ಒದಗಿಸಲಿದೆ; ಚಲವಾದಿ ನಾರಾಯಣಸ್ವಾಮಿ

ದಲಿತ ಸಿಎಂ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹೆಚ್ಚು ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳು ಒಬ್ಬ ದಲಿತನನ್ನು ಸಿಎಂ ಮಾಡಲಿಲ್ಲ.  ದಲಿತರೊಬ್ಬರನ್ನು ಡಿಸಿಎಂ ಮಾಡಲು ಕಾಂಗ್ರೆಸ್ಸಿಗೆ 70 ವರ್ಷ ಬೇಕಾಯಿತು. ಆದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತ ನಾಯಕ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಿದೆ ಎಂದು ತಿಳಿಸಿದರು.

news18-kannada
Updated:November 22, 2020, 1:50 PM IST
ಒಳಮೀಸಲಾತಿ ವಿಚಾರಕ್ಕೆ ಬಿಜೆಪಿ ಸರ್ಕಾರ ತಾರ್ಕಿಕ ಅಂತ್ಯ ಒದಗಿಸಲಿದೆ; ಚಲವಾದಿ ನಾರಾಯಣಸ್ವಾಮಿ
ಸುದ್ದಿಗೋಷ್ಟಿ
  • Share this:
ವಿಜಯಪುರ(ನ.22): ಒಳಮೀಸಲಾತಿ ವಿಚಾರ ಈ ಬಾರಿ ಬಿಜೆಪಿ ಸರಕಾರದಲ್ಲಿ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಠ ಜಾತಿ ಎಂದರೆ ಬಿಜೆಪಿಯನ್ನು ಸೋಲಿಸುತ್ತವೆ ಎಂಬ ಭಾವನೆ ಈ ಮುಂಚೆ ಇತ್ತು.  ಬೇರೆ ಪಕ್ಷಗಳು ಬಿಜೆಪಿಯಿಂದ ಪರಿಶಿಷ್ಠ ಜಾತಿಯ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದವು.  ಆದರೆ, ಈಗ ಪರಿಶಿಷ್ಠ ಜಾತಿಯವರಿಗೆ ಪ್ರತಿಪಕ್ಷಗಳ ಬಗ್ಗೆ ಅರಿವಾಗಿದೆ.  ಈಗ ಬಿಜೆಪಿಯತ್ತ ಪರಿಶಿಷ್ಠ ಜಾತಿಯ ಮತದಾರರು ವಾಲುತ್ತಿದ್ದಾರೆ ಎಂದು ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ದಲಿತ ಪರ ಯೋಜನೆಗಳನ್ನು ಜಾರಿಗೆ ತಂದಿವೆ.  ಕಾಂಗ್ರೆಸ್ಸಿನಲ್ಲಿ ಈಗ ಕಾಂಗ್ರೆಸ್ಸಿಗರೇ ಕಾಂಗ್ರೆಸ್ಸನ್ನು ಟೀಕಿಸುವ ಪರಿಸ್ಥಿತಿ ಇದೆ.  ದೇಶದಲ್ಲಿ ಬಿಜೆಪಿಗೆ ಪರ್ಯಾಯವಾದ ಶಕ್ತಿ ಈಗ ಇಲ್ಲ.  ನ.26 ರಂದು ಬಿಜೆಪಿ 310 ಮಂಡಲಗಳಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಿದೆ ಎಂದರು.

ಒಳ ಮೀಸಲಾತಿ ಕುರಿತು ಚರ್ಚೆಯನ್ನು ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪಿಸಲಾಗಿದೆ.  ಆದರೆ, ಕೊರೊನಾ ಹಿನ್ನೆಲೆ ಅಧಿವೇಶನ ಅರ್ಧಕ್ಕೆ ಮೊಟಕುಗೊಂಡಿತ್ತು.  ಮುಂದಿನ ಅಧಿವೇಶನದಲ್ಲಿ ಈ ವಿಷಯ ಚರ್ಚೆಗೆ ಬರಲಿದೆ.  ಈ ಸರಕಾರದಲ್ಲಿ ಒಳ ಮೀಸಲಾತಿ ತಾರ್ಕಿಕ ಅಂತ್ಯ ಕಾಣಲಿದೆ ಎಂದು ತಿಳಿಸಿದರು. ಆಯೋಗದ ಮೂಲಕ ಈ ವರದಿಯನ್ನು ತಯಾರಿಸಿದ ಹಿಂದಿನ ಕಾಂಗ್ರೆಸ್ ಸರಕಾರ ಆರು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಜಾರಿಗೆ ಪ್ರಯತ್ನಿಸಿಲ್ಲ.  ಈಗ ವರದಿಯನ್ನು ಯಥಾವತ್ತಾಗಿ ಜಾರಿಗೆ ಆಗ್ರಹಿಸುತ್ತಿದೆ. ಆದರೆ, ವಿಧಾನ ಮಂಡಲದಲ್ಲಿ ಸಮಗ್ರವಾಗಿ ಚರ್ಚೆಯಾದ ಬಳಿಕ ಒಳ ಮೀಸಲಾತಿ ಪ್ರಕ್ರಿಯೆಗೆ ತಾರ್ಕಿಕ ಅಂತ್ಯ ಸಿಗಲಿದೆ ಎಂದು ಅವರು ತಿಳಿಸಿದರು.

ಬಿಹಾರದಂತೆ ತಮಿಳುನಾಡಿನಲ್ಲೂ ಕಮಲ ಅರಳಲಿದೆ: ಕಾರ್ಯಕರ್ತರಿಗೆ ಅಮಿತ್ ಶಾ ಹುರುಪು

ದಲಿತ ಸಿಎಂ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹೆಚ್ಚು ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳು ಒಬ್ಬ ದಲಿತನನ್ನು ಸಿಎಂ ಮಾಡಲಿಲ್ಲ.  ದಲಿತರೊಬ್ಬರನ್ನು ಡಿಸಿಎಂ ಮಾಡಲು ಕಾಂಗ್ರೆಸ್ಸಿಗೆ 70 ವರ್ಷ ಬೇಕಾಯಿತು. ಆದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತ ನಾಯಕ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಿದೆ ಎಂದು ತಿಳಿಸಿದರು.

ಮೀಸಲಾತಿ ಪಟ್ಟಿಗೆ ಸೇರಿಸಲು ನಾನಾ ಜಾತಿಗಳು ಒತ್ತಾಯಿಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಚಲವಾದಿ ನಾರಾಯಣಸ್ವಾಮಿ, ಈ ಹಿಂದೆ ಜನಸಂಖ್ಯೆಗೆ ಅನುಸಾರವಾಗಿ ಮೀಸಲಾತಿ ನೀಡಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ.  ಇನ್ನು ಮುಂದೆ ಮೀಸಲಾತಿಗೆ ಬೇರೆ ಜಾತಿಯನ್ನು ಸೇರಿಸುವ ಮೊದಲು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ವಿಜಯಪುರದಲ್ಲಿ ಬಿಜೆಪಿ ಎಸ್. ಸಿ. ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ಮುಖಂಡರಾದ ಚಿದಾನಂದ ಚಲವಾದಿ, ಈಶಪ್ಪ ಹಿರೇಮನಿ, ದಿನಕರ ಬಾಬು, ಮುತ್ತ್ತಣ್ಣ ಸಾಸನೂರ, ಶ್ರೀನಿವಾಸ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.
Published by: Latha CG
First published: November 22, 2020, 1:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories