HOME » NEWS » State » BJP GOVERNMENT TAKE BACK THE SECURITY OF BASANAGOUDA PATIL YATNAL SESR MVSV

ಯತ್ನಾಳ್​ಗೆ ನೀಡಿದ್ದ ಭದ್ರತೆ ದಿಢೀರ್​ ಹಿಂದಕ್ಕೆ; ನನಗೇನಾದ್ರೂ ಆದ್ರೆ ಸರ್ಕಾರವೇ ಹೊಣೆ ಎಂದ ಶಾಸಕ

ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ ಮತ್ತು ಅನಾಹುತವಾದರೆ ಆಡಳಿತ ನಡೆಸುತ್ತಿರುವ ತಾವೇ ಹೊಣೆ ಎಂದು  ಸಿಎಂ ಬಿ. ಎಸ್. ಯಡಿಯೂರಪ್ಪಗೆ ತಿಳಿಸಿದ್ದಾರೆ

news18-kannada
Updated:January 15, 2021, 5:56 PM IST
ಯತ್ನಾಳ್​ಗೆ ನೀಡಿದ್ದ ಭದ್ರತೆ ದಿಢೀರ್​ ಹಿಂದಕ್ಕೆ; ನನಗೇನಾದ್ರೂ ಆದ್ರೆ ಸರ್ಕಾರವೇ ಹೊಣೆ ಎಂದ ಶಾಸಕ
ಶಾಸಕ ಬಸನಗೌಡ ಪಾಟೀಲ ಯತ್ನಾಳ
  • Share this:
ವಿಜಯಪುರ (ಜ.17): ಸಂಕ್ರಾಂತಿ ಸಂದರ್ಭದಲ್ಲಿ ಯತ್ನಾಳ ಸಿಡಿಸಿದ ಸಿಡಿ ಬಾಂಬ್ ನಿಂದಾಗಿ ಯತ್ನಾಳಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಇಂದು ದಿಢೀರನೆ ಹಿಂಪಡೆಯಲಾಗಿದೆ.  ಈಗಾಗಲೇ ಮೊದಲೇ  ಕುದಿಯುತ್ತಿದ್ದ ಯತ್ನಾಳ ಈಗ ಮತ್ತೊಮ್ಮೆ ಸಿಎಂ ವಿರುದ್ಧ ಅಸಮಾಧಾನವ್ಯಕ್ತಪಡಿಸಿದ್ದಾರೆ. ಅಲ್ಲದೇ ಭದ್ರತೆ ಹಿಂಡೊಎದ ಕುರಿತು  ಸಿಎಂ ಬಿ. ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರಿಗೆ ಖಾರವಾಗಿ ಪತ್ರ ಬರೆದು ಎಚ್ಚರಿಕೆಯನ್ನು ನೀಡಿದ್ದಾರೆ. ಯತ್ನಾಳ ಬರೆದಿರುವ ಪತ್ರದ ಪ್ರತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.  ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ ಮತ್ತು ಅನಾಹುತವಾದರೆ ಆಡಳಿತ ನಡೆಸುತ್ತಿರುವ ತಾವೇ ಹೊಣೆ ಎಂದು  ಸಿಎಂ ಬಿ. ಎಸ್. ಯಡಿಯೂರಪ್ಪಗೆ ತಿಳಿಸಿದ್ದಾರೆ. ಅಲ್ಲದೇ ಈ ಪತ್ರದ ಪ್ರತಿಯನ್ನು ಗೃಹ ಸಚಿವ  ಬೊಮ್ಮಯಿ , ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಬಿಜೆಪಿ ರಾಜ್ಯಾಧ್ಯಕ್ಷ ಅಮಿತ ಶಾ ಅವರಿಗೂ ಕಳುಹಿಸಲಾಗಿದೆ.ನಾನು ಪ್ರಖರ ಹಿಂದುಪರವಾದ ಮತ್ತು ಜನಪರವಾದ ಹೋರಾಟ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ.  ಈ ಹಿನ್ನೆಲೆಯಲ್ಲಿ ನನ್ನ ಮೇಲೆ ಈ ಹಿಂದೆ  ಕೆಲವು ಹಿಂದೂ ವಿರೋಧಿ, ಮತಾಂಧ ಶಕ್ತಿಗಳು ದಾಳಿ ನಡೆಸುವ ಮುನ್ಸೂಚನೆಗಳಿದ್ದವು.  ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆಯ ಆದೇಶದ ಮೇರೆಗೆ ಈವರೆಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಆದರೆ, ನಾನು ಸಿಎಂ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ಈ ಭದ್ರತೆ ಹಿಂಪಡೆಯಲಾಗಿದೆ. ಈ ಮೂಲಕ ಸಿಎಂ ಎಂದಿನಂತೆ ದ್ವೇಷದ ರಾಜಕಾರಣ ಮಾಡಿದ್ದಾರೆ. ಪೊಲೀಸ್ ಭದ್ರತೆಯನ್ನು ದಿಢೀರಾಗಿ ಹಿಂಪಡೆದಿದ್ದೀರಿ. ಇದರ ಹಿಂದಿರುವ ದುರುದ್ದೇಶ ಗೊತ್ತು.  ತಮ್ಮ ಹಳೆಯ ಚಾಳಿ, ವಿಕೃತ ಮನಸ್ಸನ್ನು ಇದು ಬಿಂಬಿಸುತ್ತದೆ. ಇದರಿಂದ ಹಿಂದುಪರ, ಜನಪರ, ಅನ್ಯಾಯದ ವಿರುದ್ಧ ನನ್ನ ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ.  ಸರಕಾರವನ್ನು ನಂಬಿ ನಾನು ಹೋರಾಟ ಮಾಡುತ್ತಿಲ್ಲ.  ನನ್ನ ಹೋರಾಟ ನಿರಂತರರವಾಗಿರುತ್ತದೆ.  ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ, ಅನಾಹುತವಾದರೆ ಆಡಳಿತ ನಡೆಸುತ್ತಿರುವ ತಾವೇ ಹೊಣೆ ಎಂದು ಯತ್ನಾಳ್​ ಪತ್ರದಲ್ಲಿ ತಿಳಿಸಿದ್ದಾರೆ. 

ಇದನ್ನು ಓದಿ: ಸಿಎಂಗೆ ಬೇಡವೆಂದರೂ ಸೇರಿಸಿಕೊಂಡು ಈಗ ಅನುಭವಿಸುತ್ತಿದ್ದಾರೆ; ಯತ್ನಾಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಂಸದ ರಮೇಶ ಜಿಗಜಿಣಗಿ

ಇದೇ ವೇಳೆ ಮಾತನಾಡಿದ ಅವರು, ಇಂದು ಸಂಕ್ರಾಂತಿ ಕರಿ ಇರುವುದರಿಂದ ಜಿಲ್ಲೆಯ ಜನ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.  ಹೀಗಾಗಿ ಯಾವುದೇ ಹೇಳಿಕೆ ಕೊಡುವುದಿಲ್ಲ.  ಇವತ್ತು ಮಕರ ಸಂಕ್ರಮಣದ ಕರಿ ಇದೆ ಈ ಹಿನ್ನಲೆ ಏನು ಹೇಳುವುದಿಲ್ಲ ಎಂದರು.

ಇನ್ನು ತಮ್ಮ ವಿರುದ್ಧ ಬಿಜೆಪಿ ನಾಯಕರು ಅಮಿತ್ ಶಾ ಅವರಿಗೆ ದೂರು ನೀಡುವ ವಿಚಾರದ ಬಗ್ಗೆಯೂ ಗೊತ್ತಿಲ್ಲ.  ಬೆಂಗಳೂರು ಮತ್ತು ಬೆಳಗಾವಿಗೆ ಹೋಗುವುದಿಲ್ಲ.  ನಮ್ಮೂರ ಶ್ರೀ ಸಿದ್ಧರಾಮೇಶ್ವರ ಜಾತ್ರೆಯಿದೆ.  ಈ ಜಾತ್ರೆಯಲ್ಲಿಯೇ ಇರುತ್ತೇನೆೆ ಎಂದು  ತಿಳಿಸಿದರು.
Published by: Seema R
First published: January 15, 2021, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories