ವಿಪಕ್ಷಗಳ ಖಂಡನೆ ಬಳಿಕ ಎಚ್ಚೆತ್ತ ಸರ್ಕಾರ; ರೈತರ ಸಾಲ ವಸೂಲಾತಿ ಆದೇಶಕ್ಕೆ ಬ್ರೇಕ್

ಸರ್ಕಾರದ ಈ ಆದೇಶದ ವಿರುದ್ಧ ಹರಿಹಾಯ್ದ ಪ್ರತಿಪಕ್ಷಗಳು, ಸರ್ಕಾರದ ನಡೆ ಖಂಡಿಸಿ, ತೀವ್ರ ತರಾಟೆ ಕೈಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಹಿಂಪಡೆದಿದೆ.

Seema.R | news18-kannada
Updated:January 22, 2020, 4:43 PM IST
ವಿಪಕ್ಷಗಳ ಖಂಡನೆ ಬಳಿಕ ಎಚ್ಚೆತ್ತ ಸರ್ಕಾರ; ರೈತರ ಸಾಲ ವಸೂಲಾತಿ ಆದೇಶಕ್ಕೆ ಬ್ರೇಕ್
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು (ಜ.22): ರಾಜ್ಯದಲ್ಲಿ ರೈತರು ಈ ಬಾರಿ  ಬರ, ಪ್ರವಾಹದಿಂದ ತತ್ತರಿಸಿದ್ದಾರೆ. ಈ ನಡುವೆಯೇ ಕಡ್ಡಾಯವಾಗಿ  ಸುಸ್ತಿ ಸಾಲ ವಸೂಲಾತಿ ಮಾಡುವಂತೆ  ಆದೇಶ ಹೊರಡಿಸಿರುವ  ಬಿಎಸ್​ವೈ ಸರ್ಕಾರ, ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಹರಿಹಾಯ್ದಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ ತಕ್ಷಣ ಈ ಆದೇಶವನ್ನು ಹಿಂಪಡೆದಿದೆ.

ಈ ಕುರಿತು ಇಂದು ಮತ್ತೊಂದು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ಸುಸ್ತಿ ಕೃಷಿ ಸಾಲಗಳ ವಸೂಲಾತಿಗೆ ಸಂಬಂಧಿಸಿದಂಥೆ ಅವಶ್ಯಕತ ಕ್ರಮ ಕೈಗೊಳ್ಳಲು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಈ ಕುರಿತು ಬ್ಯಾಂಕ್​ಗಳು ಕ್ರಮವಹಿಸಿ ತಕ್ಷಣ ಈ ಆದೇಶ ಜಾರಿಗೆ ಕ್ರಮ ಬರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ಇನ್ನು ನಿನ್ನೆ ಈ ಕುರಿತು ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ, ರೈತರ ಸಾಲವಸೂಲಾತಿ ಕುರಿತು ಈ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಮಾಡಿ ಬಲವಂತದ ಸಾಲ ವಸೂಲಿಗೆ ಪರವಾನಿಗೆ ನೀಡಿತ್ತು.  ಈ ಮೂಲಕ ಬರ, ಪ್ರವಾಹದಿಂದ ನಲುಗಿದ್ದ ರೈತರಿಗೆ ಆಘಾತ ನೀಡಿತ್ತು.ಅಷ್ಟೇ ಅಲ್ಲದೇ ಸಾಲ ವಸೂಲಿಗೆ ಯಾವುದೇ ಕ್ರಮವನ್ನಾದರೂ ಕೈ ಗೊಳ್ಳಿ ಎನ್ನುವ ಮೂಲಕ ಸಹಕಾರಿ ಸಂಘ ಹಾಗೂ ಬ್ಯಾಂಕ್​ಗಳಿಗೆ ಆದೇಶ ನೀಡಿತ್ತು.

ಸರ್ಕಾರದ ಈ ಆದೇಶದ ವಿರುದ್ಧ ಹರಿಹಾಯ್ದ ಪ್ರತಿಪಕ್ಷಗಳು, ಸರ್ಕಾರದ ನಡೆ ಖಂಡಿಸಿ, ತೀವ್ರ ತರಾಟೆ ಕೈಗೊಂಡಿದ್ದವು.

ಈ ಕುರಿತು ಸರಣಿ ಟ್ವೀಟ್​ ಮಾಡಿದ್ದ ಸಿದ್ದರಾಮಯ್ಯ, ರೈತ ಪರ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರೈತರನ್ನೇ ಗುಂಡಿಕ್ಕಿ ಕೊಂದಿತ್ತು. ಅಂತಂಹ ಸರ್ಕಾರದಿಂದ ಈಗ ಮತ್ತೊಮ್ಮೆ ರೈತ ವಿರೋಧಿ ನಿಲುವು ಅನಪೇಕ್ಷಿತವಲ್ಲ ಎಂದು ಕಿಡಿಕಾರಿದ್ದರು.ಇದನ್ನು ಓದಿ: ರೈತರ ಸುಸ್ತಿ ಸಾಲ ವಸೂಲಿಗೆ ಸರ್ಕಾರ ಆದೇಶ - ರೈತರನ್ನು ಮುಗಿಸಲು ಹೊರಟಿದೆ ಎಂದು ಖರ್ಗೆ ಆಕ್ರೋಶ

ಇನ್ನು ಈ ಕುರಿತು ಟ್ವೀಟ್​ ಮಾಡಿದ್ದ ಜೆಡಿಎಸ್​ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ, ರೈತರ ಸಾಲಮನ್ನಾ, ಬಡವರ ಬಂಧು, ಸಾಲ ಋಣಮುಕ್ತ ಕಾಯ್ದೆ ಇವೆಲ್ಲವೂ ನಾನು ತಂದ ಕಾರ್ಯಕ್ರಮಗಳು. ಇವು ದೇಶವಿರೋಧಿಯೇ? ನಿಮ್ಮ ಸರ್ಕಾರ ಜಾರಿಗೆ ತಂದಿರುವ ದೇಶಭಕ್ತಿಯ ಕಾರ್ಯಕ್ರಮಗಳನ್ನು ತೋರಿಸಿ ನೋಡೋಣ‌. ಬಡವ ಬಲ್ಲಿದರು ಬೇಕಿಲ್ಲದ ನಿಮಗೆ ಕೋಮು ಭಾವನೆಗಳೇ ಬಂಡವಾಳ. ನಿಮ್ಮಂಥ ದೇಶಪ್ರೇಮ(ದ್ರೋಹ) ನಮಗೆ ಬೇಕಿಲ್ಲ ಎಂದಿದ್ದರು.

 
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ