• Home
  • »
  • News
  • »
  • state
  • »
  • Congress: ಸರ್ಕಾರ, ಬಿಬಿಎಂಪಿಯಿಂದ ಮತದಾರರ ಮಾಹಿತಿ ಕಳ್ಳತನ; ಕಾಂಗ್ರೆಸ್ ಆರೋಪ

Congress: ಸರ್ಕಾರ, ಬಿಬಿಎಂಪಿಯಿಂದ ಮತದಾರರ ಮಾಹಿತಿ ಕಳ್ಳತನ; ಕಾಂಗ್ರೆಸ್ ಆರೋಪ

ಕಾಂಗ್ರೆಸ್ ಸುದ್ದಿಗೋಷ್ಠಿ

ಕಾಂಗ್ರೆಸ್ ಸುದ್ದಿಗೋಷ್ಠಿ

ಸಿಎಂ ಬೊಮ್ಮಾಯಿ, ಸಚಿವ ಅಶ್ಚಥ್ ನಾರಾಯಣ್ ಹಾಗೂ ಈ ಮೂರು ಸಂಸ್ಥೆಗಳ ಮಧ್ಯ ಇರುವ ಸಂಬಂಧ ಏನು? ಬಿಬಿಎಂಪಿ ಉಸ್ತುವಾರಿಯೂ ಆಗಿರುವ ಸಿಎಂ ಬೊಮ್ಮಾಯಿ ತಕ್ಷಣ ರಾಜೀನಾಮೆ ಕೊಡಬೇಕು.

  • Share this:

ಮತದಾರರ ಮಾಹಿತಿಯನ್ನು (Voter Details) ಸರ್ಕಾರ ಕಳ್ಳತನ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು (Congress Leaderss) ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​ದೀಪ್​ ಸುರ್ಜೇವಾಲಾ (Randeep Surjewala), ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು. ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಸರ್ಕಾರ ಚುನಾವಣೆಯಲ್ಲಿ ಕಳ್ಳತನ ಮಾಡುತ್ತಿದೆ ಎಂದು ಆರೋಪಿಸಿದರು. ಮತದಾರರ ಮಾಹಿತಿಯನ್ನು ಬೊಮ್ಮಾಯಿ ಸರ್ಕಾರ, ಬಿಬಿಎಂಪಿ (BBMP) ಕದ್ದಿದೆ. ಸಿಎಂ ಬೊಮ್ಮಾಯಿ ಮತದಾರರ ದತ್ತಾಂಶ ಕಳ್ಳತನದ ಜವಾಬ್ದಾರಿ ಹೊರಬೇಕು. ಈ ಕಳ್ಳತನ, ಮೋಸ, ವಂಚನೆಗೆ ಮುಖ್ಯಮಂತ್ರಿಗಳೇ ಹೊಣೆ ಎಂದು ಆರೋಪಿಸಿದರು.


ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಬಿಬಿಎಂಪಿ ಉಸ್ತುವಾರಿ ಸಚಿವರು ಆಗಿದ್ದಾರೆ. ಚಿಲುಮೆ‌ ಶಿಕ್ಷಣ ಸಂಸ್ಥೆ ಮತದಾರರ ಮಾಹಿತಿ ಸಂಗ್ರಹಕ್ಕೆ ಅವಕಾಶ ಕೇಳಿತ್ತು. ಮಹದೇವಪುರ ಕ್ಷೇತ್ರದಲ್ಲಿ ಮಾಹಿತಿ ಸಂಗ್ರಹಕ್ಕೆ ಮೊದಲು ಅನುಮತಿ ಕೊಡಲಾಗಿತ್ತು. ಡಿಎಪಿ ಹೊಂಬಾಳೆ ಪ್ರೈವೆಟ್ ಲಿಮಿಟೆಟ್, ಚಿಲುಮೆ ಸಂಸ್ಥೆ ಮಾಹಿತಿ ಸಂಗ್ರಹಿಸಿದ್ದು, ಎರಡೂ ಕಂಪನಿಗಳ ನಿರ್ದೇಶಕರು ಒಬ್ಬರೇ ಆಗಿದ್ದಾರೆ ಎಂಬ ವಿಷಯವನ್ನು ತಿಳಿಸಿದರು.


ಮೊದಲು ಮಹದೇವಪುರದಲ್ಲಿ ಮಾಹಿತಿಗೆ ಕನ್ನ


ಮತದಾರರ ಮಾಹಿತಿ ಕದಿಯುವ ಕೆಲಸವನ್ನು ಬಿಬಿಎಂಪಿ ಹಾಗೂ ಬೊಮ್ಮಾಯಿ ಸರ್ಕಾರ ಮಾಡಿದೆ. ಇದಕ್ಕೆ ಹಲವು ದಾಖಲೆಗಳೂ ಇವೆ. ತುಷಾರ್ ಗಿರಿ ನಾಥ್ ಬಿಬಿಎಂಪಿ ಚುನಾವಣಾಧಿಕಾರಿಯೂ ಆಗಿರ್ತಾರೆ. ಚಿಲುಮೆ ಸಂಸ್ಥೆಗೆ ಮಹದೇವಪುರದಲ್ಲಿ ಜಾಗೃತಿ ಮೂಡಿಸಲು ಅನುಮತಿ ನೀಡಲಾಗಿರುತ್ತದೆ. ಅನುಭವವೇ ಇಲ್ಲದೇ ಚಿಲುಮೆ ಎನ್​​ಜಿಓ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುತ್ತೇವೆ ಎನ್ನುತ್ತದೆ.


bjp government steals voters data says congress mrq
ಕಾಂಗ್ರೆಸ್ ಬಿಡುಗಡೆಗೊಳಿಸಿದ ದಾಖಲೆ


ಹೊಂಬಾಳೆ ಪ್ರೈವೇಟ್ ಲಿಮಿಟೆಡ್ ಹಾಗೂ ಚಿಲುಮೆ NGOದ ಪದಾಧಿಕಾರಿಗಳು ಎಲ್ಲರೂ ಒಂದೇ ಸಂಸ್ಥೆಗೆ ಸೇರಿದವರು ಎಂದು ಹೇಳಿ NGO ಎಜೆಂಟರ್ ಗುರುತಿನ ಪತ್ರವನ್ನು ಸುರ್ಜೆವಾಲಾ ಪ್ರದರ್ಶಿಸಿದರು.


ಕೃಷ್ಣಪ್ಪ, ರವಿಕುಮಾರ್ ಕಿಂಗ್​​​ಪಿನ್


ಮತದಾರರಿಂದ ಸಂಗ್ರಹಿಸಿದ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗದ ವೆಬ್​​ಸೈಟ್​​​ಗೆ ಅಪ್​​​​ಲೋಡ್ ಮಾಡಿಲ್ಲ. ಡಿಜಿಟಲ್ ಸಮೀಕ್ಷಾ ಆ್ಯಪ್​​ಗೆ ಈ  ಮಾಹಿತಿಯನ್ನು ಅಪ್​​ಲೋಡ್ ಮಾಡಲಾಗಿದೆ. ಕೃಷ್ಣಪ್ಪ, ರವಿಕುಮಾರ್ ಪ್ರಕರಣದ ಕಿಂಗ್ ಪಿನ್ ಎಂದು ಫೋಟೋ ತೋರಿಸಿದರು.


ಈ ಸರ್ಕಾರದಲ್ಲಿ ಹಿರಿಯ ಸಚಿವರಾಗಿರುವ, ಮಾಜಿ ಡಿಸಿಎಂಗೆ ಇವರು ಆಪ್ತರು ಆಗಿದ್ದಾರೆ. ಹಾಲಿ ಸಚಿವರು ಕಿಂಗ್​​ಪಿನ್​​ಗಳ ಜೊತೆಗೆ ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದರು.


ಇದನ್ನೂ ಓದಿ:  Mohammad Nalapad: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್​ಗೆ ಸಂಕಷ್ಟ


ಸಿಎಂಗೆ ಪ್ರಶ್ನೆ ಕೇಳಿದ ಸುರ್ಜೆವಾಲಾ


ಖಾಸಗಿ ಸಂಸ್ಥೆಗೆ ಮತದಾರರ ಮಾಹಿತಿ ಸಂಗ್ರಹದ ಅನುಮತಿ ಕೊಡಲಾಗಿದೆ. ಹೀಗೆ ಅನುಮತಿ ಕೊಟ್ಟಿರುವುದು ಅಪರಾಧ ಅಲ್ಲವೆ? ಬಿಬಿಎಂಪಿ ಉಸ್ತುವಾರಿ ಸಚಿವ ಸಿಎಂ ಬೊಮ್ಮಾಯಿ, ಬಿಬಿಎಂಪಿ ಕಮೀಷನರ್ ಹಾಗೂ ಬಿಬಿಎಂಪಿ ಚುನಾವಣಾ ವಿಭಾಗ ಇದಕ್ಕೆ ಹೊಣೆ ಅಲ್ಲವೇ ಎಂದು ಪ್ರಶ್ನೆ ಮಾಡಿದರು.


bjp government steals voters data says congress mrq
ಕಾಂಗ್ರೆಸ್ ಬಿಡುಗಡೆಗೊಳಿಸಿದ ದಾಖಲೆ


ಸಿಎಂ ಬೊಮ್ಮಾಯಿ, ಸಚಿವ ಅಶ್ಚಥ್ ನಾರಾಯಣ್ ಹಾಗೂ ಈ ಮೂರು ಸಂಸ್ಥೆಗಳ ಮಧ್ಯ ಇರುವ ಸಂಬಂಧ ಏನು? ಬಿಬಿಎಂಪಿ ಉಸ್ತುವಾರಿಯೂ ಆಗಿರುವ ಸಿಎಂ ಬೊಮ್ಮಾಯಿ ತಕ್ಷಣ ರಾಜೀನಾಮೆ ಕೊಡಬೇಕು. ಬಸವರಾಜ್ ಬೊಮ್ಮಾಯಿ ಮೇಲೆ ಎಫ್​ಐಆರ್ ದಾಖಲಾಗಬೇಕು. ತಕ್ಷಣ ಸಿಎಂ ಬೊಮ್ಮಾಯಿ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.


ಹಾಲಿ ಸಚಿವರಿಗೆ ಕಿಂಗ್​ಪಿನ್​​ಗಳು ಆಪ್ತರು


ಬೂತ್ ಲೆವೆಲ್ ಆಫಿಸರ್ ಅಂತ ಐಡಿ ಕಾರ್ಡ್ ನೀಡಲಾಗಿದೆ. ವೋಟರ್ ಐಡಿಗಳಿಂದ ಸಂಗ್ರಹಿಸಿದ ಡೇಟಾವನ್ನು ಅವರು ಚುನಾವಣಾ ಆಯೋಗಕ್ಕೆ ಅಪ್​​ಲೋಡ್ ಮಾಡುತ್ತಿಲ್ಲ. ಖಾಸಗಿ ವ್ಯಕ್ತಿಗಳಿಗೆ ಮಾಹಿತಿ ನೀಡುತ್ತಿದ್ದಾರೆ.


ಇದನ್ನೂ ಓದಿ:  Mandya Politics: ನಿಮ್ಮಿಬ್ಬರ ವಿರುದ್ಧ ಸೋತ್ರೆ ಶಿರಚ್ಛೇದ ಮಾಡಿಕೊಳ್ಳುವೆ: ಶಿವರಾಮೇಗೌಡರ ಸವಾಲ್


ಕೃಷ್ಣಪ್ಪ, ರವಿಕುಮಾರ್ ಕಿಂಗ್ ಪಿನ್. ಇವರು ಮಾಜಿ ಡಿಸಿಎಂ ಹಾಗೂ ಹಾಲಿ ಸಚಿವರಿಗೆ ಆತ್ಮೀಯರು. ಹಾಲಿ ಸಚಿವರು ಕಿಂಗ್ ಪಿನ್ ಕೃಷ್ಣಪ್ಪ ಜೊತೆಗೆ ಸೇರಿಕೊಂಡಿದ್ದಾರೆ. ಆರೋಪಿ ಜೊತೆಗೆ ಸಚಿವರು ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ  ಕಾಣಿಸಿಕೊಂಡಿದ್ದಾರೆ ಎಂದು ಫೋಟೋಗಳನ್ನು ಬಿಡುಗಡೆಗೊಳಿಸಿದರು.

Published by:Mahmadrafik K
First published: