Manekshaw Parade Ground: ದ್ವಾರದ ಮೇಲಿದ್ದ ಟಿಪ್ಪು, ರಾಣಿ ಚೆನ್ನಮ್ಮ ಹೆಸರಿಗೆ ಸುಣ್ಣ ಬಳಿದ ಸರ್ಕಾರ

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹೋರಾಟಗಾರ ಹೆಸರಿಗೆ ಸುಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯು.ಟಿ. ಖಾದರ್ ಕಿಡಿಕಾರಿದ್ದಾರೆ.

ಹೆಸರು ಅಳಸಿ ಹಾಕಿರೋದು

ಹೆಸರು ಅಳಸಿ ಹಾಕಿರೋದು

  • Share this:
ಟಿಪ್ಪು ಸುಲ್ತಾನ್ ವರ್ಸಸ್ ವೀರ ಸಾವರ್ಕರ್ ಫೋಟೋ (Tipu Sultan Vs Veer Savarkar) ವಿವಾದ ರಾಜ್ಯದಲ್ಲಿ ಹುಟ್ಟಿಕೊಂಡಿದೆ. ಇದರ ಮಧ್ಯೆ ಸಿಎಂ ಬೊಮ್ಮಾಯಿ (CM Basavaraj Bommai) ನೇತೃತ್ವದ ಬಿಜೆಪಿ ಸರ್ಕಾರ (BJP Government) ಮತ್ತೊಂದು ಎಡವಟ್ಟು ಮಾಡಿದೆ. 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ (Amrit Mahotsava) ಅದ್ಧೂರಿಯಾಗಿ ಆಚರಿಸಲು ಸಿದ್ಧ ಮಾಡಿದ್ದ ಮಾಣೆಕ್ ಷಾ ಪರೇಡ್ ನಲ್ಲಿದ್ದ (Manik Shaw Parade Ground) ಇಬ್ಬರು ಹೋರಾಟಗಾರರ ಹೆಸರಿಗೆ ಸುಣ್ಣ ಬಳಿದಿದೆ. ಸೋಮವಾರ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಸರ್ಕಾರ ಆಚರಿಸಿದೆ. ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಲಾಗಿತ್ತು. ನಂತರ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆದಿತ್ತು.‌ ಹಾಡು ಕುಣಿತ ಜೊತೆಗೆ ರಾಷ್ಟ್ರ ಗೀತೆ ಹಾಡಿ ದೇಶ ಭಕ್ತಿಯನ್ನೂ ಮೆರೆಯಲಾಯಿತು. ಈ ವೇಳೆ ಮಾಣೆಕ್ ಷಾ ಮೈದಾನದಲ್ಲಿರುವ ಗೋಡೆ ಮೇಲಿದ್ದ ಇಬ್ಬರು ಹೋರಾಟಗಾರರ ಹೆಸರನ್ನು ಕಿತ್ತು ಹಾಕಿದ ಸರ್ಕಾರದ ನಡೆ ಈಗ ಭಾರೀ ವಿರೋಧಕ್ಕೆ ಕಾರಣವಾಗಿದೆ.

ಟಿಪ್ಪು, ಚೆನ್ನಮ್ಮ ಹೆಸರಿಗೆ ಕೊಕ್

ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಐತಿಹಾಸಿಕವಾದ ಗೋಡೆಯೊಂದಿದೆ. ಈ ಉದ್ದದ ಗೋಡೆಗೆ ಎರಡು ಮುಖ್ಯ ದ್ವಾರಗಳಿವೆ. ಈ ಎರಡೂ ದ್ವಾರಕ್ಕೆ ಹೋರಾಟಗಾರರ ಹೆಸರನ್ನು ಇಡಲಾಗಿದೆ. ಒಂದು ದ್ವಾರಕ್ಕೆ ಟಿಪ್ಪು ಸುಲ್ತಾನ್ ಹಾಗೂ ಮತ್ತೊಂದರ ಮೇಲೆ ರಾಣಿ ಚೆನ್ನಮ್ಮ ದ್ವಾರ ಎಂದು ಬರೆಯಲಾಗಿತ್ತು. ಆದರೆ ಎರಡೂ ದ್ವಾರದ ಮೇಲಿದ್ದ ಹೆಸರಿಗೆ ಸರ್ಕಾರ ಸುಣ್ಣ ಬಳಿದು ಹೆಸರು ಅಳಿಸಿ ಹಾಕಿದೆ.

BJP Government remove tipu sultan and Kittur rani channamma name in manik shah parade ground amtv mrq
ಈ ಮೊದಲಿದ್ದ ಹೆಸರುಗಳು


ಆಗಸ್ಟ್ 13ರವರೆಗೆ ಈ ಗೋಡೆಗಳ ದ್ವಾರದ ಮೇಲೆ ಈ ಎರಡೂ ಹೆಸರುಗಳಿತ್ತು. ಆದರೆ ಆಗಸ್ಟ್ 15ಕ್ಕೆ ಎರಡೂ ಹೆಸರಿಗೂ ಬಣ್ಣ ಬಳಿದು‌ ಅಳಿಸಿ ಹಾಕಲಾಗಿದೆ. ಈ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಎರಡೂ ದ್ವಾರದ ಮೇಲಿದ್ದ ಹೆಸರಿಗೂ ಸರ್ಕಾರ ಕೊಕ್ ನೀಡಿದೆ.

ಇದನ್ನೂ ಓದಿ: Savarkar Flex: ವೋಟ್‌ಗಾಗಿ ಸಿದ್ದರಾಮಯ್ಯ ಸಾವರ್ಕರ್ ಅವಹೇಳನ ಮಾಡುತ್ತಿದ್ದಾರೆ -ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ

ಇದು ಸದುದ್ದೇಶ ಅಲ್ಲ ದುರುದ್ದೇಶ: ಖಾದರ್ ಆಕ್ರೋಶ

ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಹೋರಾಟಗಾರ ಹೆಸರಿಗೆ ಸುಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯು.ಟಿ. ಖಾದರ್ ಕಿಡಿಕಾರಿದ್ದಾರೆ. ಈ ಕೃತ್ಯ ಅವರ ವ್ಯಕ್ತಿತ್ವನ್ನು ತೋರಿಸುತ್ತದೆ. ಬ್ರಿಟಿಷರಿಗೆ ಕ್ಷಮಾಪಣ ಪತ್ರ ಬರೆದವರು ಇವರಿಗೆ ಸ್ವಾತಂತ್ರ್ಯ ಹೋರಾಟಗಾರರು. ತನ್ನ ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟು ಹೋರಾಡಿದವರು ದೇಶದ್ರೋಹಿಗಳು. ಇದು ಸದುದ್ದೇಶ ಅಲ್ಲ ದುರುದ್ದೇಶ ಎಂದು ಆಕ್ರೋಶ ಹೊರ ಹಾಕಿದರು.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ವೀರ ಸಾವರ್ಕರ್ ಫೋಟೋ

ಇನ್ನು ನಗರದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ವೀರ ಸಾರ್ವಕರ್ ಫೋಟೋವನ್ನು ನಮ್ಮ ಮೆಟ್ರೋ ಇಟ್ಟಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಕೇಳಿ ಬಂದಿದೆ. ಇದಕ್ಕೆ ಕೆಲವರಿಂದ ಅಪಸ್ವರ ಕೇಳಿ ಬಂದಿದ್ದು ಅಲ್ಲದೆ ಸಾವರ್ಕರ್ ಯಾರು.? ಅವರ ಕೊಡುಗೆ ಏನು.? ಬ್ರಿಟಿಷರ ಕ್ಷಮೆ ಕೇಳಿದ ಸಾವರ್ಕರ್ ಗೆ ನಾವೇಕೆ ಗೌರವ ಕೊಡಬೇಕೆಂದು ವಾದ ಸಾಮಾಜಿಕ ತಾಣದಲ್ಲಿ ನೆಟ್ಟಿಗರು ಪ್ರಶ್ನಿಸಿದ್ದಾರೆ.

BJP Government remove tipu sultan and Kittur rani channamma name in manik shah parade ground amtv mrq
ಮೆಟ್ರೋ ನಿಲ್ದಾಣದಲ್ಲಿ ವೀರ ಸಾವರ್ಕರ್ ಫೋಟೋ


ಇದಕ್ಕೆ ಪ್ರತಿಯಾಗಿ ಸಾವರ್ಕರ್ ಫೋಟೋ ಬದಲಿಗೆ ಜಿನ್ನಾ ಫೋಟೋ ಹಾಕ್ಬೇಕಿತ್ತಾ.? ಸಂಸತ್ ಭವನದಲ್ಲೂ ಸಾವರ್ಕರ್ ಫೋಟೋ ಇದೆ. ನಿಮಗೆ ತೆಗಿಸೋ ತಾಕತ್ತಿದ್ಯಾ ಎಂದು ಕೌಂಟರ್ ಕಮೆಂಟ್ ಗಳೂ ಕಂಡು ಬಂದಿದೆ.

ಕೈ ನಾಯಕರು ಸಿಡಿಮಿಡಿ

ಒಟ್ಟಾರೆ ಮಾಣಿಕ್ ಷಾ ಪರೇಡ್ ಮೈದಾನದ ಗೋಡೆ ಮೇಲೆ ಇಷ್ಟೂ ವರ್ಷಗಳ‌ ಕಾಲ‌ ಇದ್ದ ಟಿಪ್ಪು ಸುಲ್ತಾನ್ ಹಾಗೂ ರಾಣಿ ಚೆನ್ನಮ್ಮ ಹೆಸರಿಗೆ ಸುಣ್ಣ ಬಳಿದು ಸರ್ಕಾರ ಅಳಿಸಿ ಹಾಕಿದೆ. ಸರ್ಕಾರದ ಈ ನಡೆಗೆ ಕೈ ನಾಯಕರು ಸಿಡಿಮಿಡಿಗೊಂಡಿದ್ದಾರೆ.

ಇದನ್ನೂ ಓದಿ:  Savarkar Flex: ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದವರನ್ನು ಕಂಡಲ್ಲಿ ಗುಂಡಿಟ್ಟು ಸಾಯಿಸಿ! ಸೊಗಡು ಶಿವಣ್ಣ ಆಕ್ರೋಶದ ಮಾತು

ಇದೇ ವೇಳೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ವೀರ ಸಾವರ್ಕರ್ ಫೋಟೋ ಕಾಣಿಸಿಕೊಂಡಿದ್ದು, ನೆಟ್ಟಗರ ಸಿಟ್ಟು ನೆತ್ತಿಗೇರುವಂತೆ ಮಾಡಿದೆ. ಅಲ್ಲದೆ ಬಿರುಸಿನ ಪರವಿರೋಧ ಚರ್ಚೆ ಶುರುವಾಗಿದೆ.
Published by:Mahmadrafik K
First published: