ಬಿಜೆಪಿ ಸರ್ಕಾರದ ಮೇಲೆ ಅನುಕಂಪ ಇಲ್ಲ; ಸಿದ್ದರಾಮಯ್ಯ ಸಿಎಂ ಆದರೂ ಬೆಂಬಲಿಸುತ್ತೇನೆ: ಕುಮಾರಸ್ವಾಮಿ

ಕುಮಾರಸ್ವಾಮಿ ಆಡಳಿತಕ್ಕೆ ಬೇಸರ ಮಾಡಿಕೊಂಡು ಹೊರಬಂದ್ರು ಅಂತ ಹೇಳಿದರು. ಜನ ಉಳಿಸಲು ಯಾರೇ ಸರ್ಕಾರ ರಚನೆ ಮಾಡಿದರೂ ನಾವು ಬೆಂಬಲವನ್ನು ಮಾಡುತ್ತೇವೆ. ಆದ್ರೆ ಪರಿಹಾರ ನಾನು ಹೇಳಿದ ರೀತಿ ಆಗಬೇಕು ಅಷ್ಟೇ. ಯಡಿಯೂರಪ್ಪನವರೇ ಆಗಲಿ ಸಿದ್ದರಾಮಯ್ಯ ಆಗಲಿ ನಮಗೇನು ಅಭ್ಯಂತರವಿಲ್ಲ

G Hareeshkumar | news18-kannada
Updated:November 2, 2019, 4:07 PM IST
ಬಿಜೆಪಿ ಸರ್ಕಾರದ ಮೇಲೆ ಅನುಕಂಪ ಇಲ್ಲ; ಸಿದ್ದರಾಮಯ್ಯ ಸಿಎಂ ಆದರೂ ಬೆಂಬಲಿಸುತ್ತೇನೆ: ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಬೆಂಗಳೂರು(ನ. 02): ಸರ್ಕಾರಕ್ಕೆ ಸಲಹೆ ಕೊಟ್ಟರೆ ಕುಮಾರಸ್ವಾಮಿ ಬಿಎಸ್​ವೈ ಮೇಲೆ ಮೃದು ಧೋರಣೆ ತೋರಿಸುತ್ತಾರೆ. ಬಿಜೆಪಿ ಜತೆ ಹೋಗುತ್ತಾರೆ ಎಂದು ಮಾಧ್ಯಮದವರು ಸುದ್ದಿ ಮಾಡುತ್ತಾರೆ. ಐಎಂಎ ಮತ್ತು ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಸಂಕಷ್ಟ ಆಗುತ್ತಿದೆ. ಹೀಗಾಗಿ ಬಿಜೆಪಿ ಜತೆ ಸಾಫ್ಟ್ ಕಾರ್ನರ್ ಆಗಿದ್ದಾರೆ ಎನ್ನುತ್ತಾರೆ. ನನಗೆ ಈ ಸರ್ಕಾರದ ಮೇಲೆ ಯಾವುದೇ ಅನುಕಂಪ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಯಾರು ಕೂಡ ನಮ್ಮ ಪಕ್ಷ ಬಿಟ್ಟು ಹೋಗಲ್ಲ. ನಮ್ಮ ಜತೆ ಶಾಸಕರು ಇದ್ದಾರೆ. ಕುಮಾರಸ್ವಾಮಿ ವಿರುದ್ಧ ಮುನಿಸುಕೊಂಡಿರುವವರು ಯಾರು ಇಲ್ಲ. ಯಡಿಯೂರಪ್ಪ ಮೇಲೆ ತಪ್ಪು ಹುಡುಕುತ್ತಿಲ್ಲ ಅನ್ನೋದು ತಪ್ಪು. 17 ಶಾಸಕರು ಬಿಜೆಪಿಗೆ ಹೋಗುತ್ತಾರೆ. ಕುಮಾರಸ್ವಾಮಿಯೇ ಬಿಜೆಪಿಗೆ ಹೋಗುತ್ತಾರೆ ಅಂತಲ್ಲಾ ಆರೋಪಿಸಲಾಗುತ್ತದೆ ಎಂದವರು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಘೋಷಣೆ ಜಾಹಿರಾತಿಗೆ ಮಾತ್ರ  ಸಿಮಿತವಾಗಿದೆ

ಇದು ಜಾಹೀರಾತು ಸರ್ಕಾರ ಆಗುವುದು ಬೇಡ. ನೇಕಾರರಿಗೆ ಅನುಕೂಲ ಆಗಿರುವುದು ಹೇಳಿ. ಪ್ರೋತ್ಸಾಹ ಧನ ಮೀನುಗಾರರ ಕೈ ಸೇರಿದೆಯ ಹೇಳಿ. ಸಿದ್ದರಾಮಯ್ಯನವರ ಕಾಲದಲ್ಲಿ ನೇಕಾರರ ಸಾಲಮನ್ನಾ ಆಯಿತು. ಈ ಸಂಬಂಧ ಇದ್ದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಹಣ ಬಿಡುಗಡಿದ್ದು ಸಮ್ಮಿಶ್ರ ಸರ್ಕಾರ. ಇದು ಬಿಜೆಪಿ ಸರ್ಕಾರದ ಸಾಧನೆ ಅಲ್ಲ. ಆದರೆ, ಬಿಜೆಪಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಹೆಚ್​ಡಿಕೆ ಟೀಕಿಸಿದರು.

ಈ ಸರ್ಕಾರ ಬಹಳ ದಿನ ಉಳಿಯಲ್ಲ. ನಾನು ಈ ಹಿಂದೆಯೂ ಹೇಳಿದ್ದೇನೆ.  ಬೆಳೆ ನಾಶವಾಗಿರುವ ರೈತ ರಿಕವರಿ ಆಗಲೂ ಎರಡು ವರ್ಷ ಬೇಕು. ಕಬ್ಬಿನ ಗದ್ದೆಗಳಲ್ಲಿ ನೀರು ನಿಂತುಕೊಂಡಿದೆ. 25 ಸಾವಿರ ಪರಿಹಾರ ಕೊಟ್ರೆ ಏನು ಪ್ರಯೋಜನ ಇಲ್ಲ. 40-50 ಸಾವಿರ ಕೊಡಲು ಸರ್ಕಾರದಲ್ಲಿ ಹಣ ಇದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಸಿಎಂ ಯಡಿಯೂರಪ್ಪ ಭೇಟಿಗೆ ರಾಜಕೀಯ ಬಣ್ಣ ಬೇಡ ; ಮಾಜಿ ಸಚಿವ ರಾಮಲಿಂಗಾರೆಡ್ಡಿ

ಸಾಲ ಮನ್ನ ಕಾರ್ಯಕ್ರಮಕ್ಕೋಸ್ಕರ ಕೆಲ ಕಡೆ ತೆರಿಗೆ ಹೆಚ್ಚು ಮಾಡಿದ್ದೇನೆ. ಇದು ಜನಸಾಮಾನ್ಯರಿಗೆ ಸಮಸ್ಯೆ ಆಗದ ರೀತಿಯಲ್ಲಿ ಏರಿಕೆ ಮಾಡಿದ್ದೆ. ಇಂದು ಸಹ ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲಮನ್ನ ಆಗಿಲ್ಲ ಅಂತ ಮಾಹಿತಿ ಕೊಡ್ತಾರೆ. ಸರ್ಕಾರದಲ್ಲಿ ಹಣ ಇಲ್ಲ ಅಂತಿದ್ದಾರೆ. ಇದು ಸುಳ್ಳು  ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ

ಇವತ್ತು ಜನಗಳು ಸಂಕಷ್ಟ ದಲ್ಲಿ ಇದ್ದಾರೆ. ಆ ಕಾರಣಕ್ಕೇ ನಾನು ಚುನಾವಣೆ ಬೇಡಾ ಅಂದಿದ್ದೆ. ಈಗಲೂ ಹೇಳ್ತೇನೆ. ಮತ್ತೇನಾದರೂ ಚುನಾವಣೆ ಆದ್ರೆ ಯಾವ ಪಕ್ಷಕ್ಕೂ ಬಹುಮತ ಬರಲ್ಲ. ಜನ ಯಾರನ್ನೂ ನಂಬಲ್ಲ. ಉಪ ಚುನಾವಣೆಯಲ್ಲಿ ಆಗಲಿ ಮುಂದಿನ ಚುನಾವಣೆಯಲ್ಲಿ ಆಗಲಿ ಯಾರ ಜೊತೆಯೂ ಮೈತ್ರಿ ಆಗಿ ಚುನಾವಣೆ ಎದುರಿಸಲ್ಲ. ಜೆಡಿಎಸ್ ಏಕಾಂಗಿಯಾಗೇ ಸ್ಪರ್ಧೆ ಮಾಡುತ್ತೆ. ಮಧ್ಯಂತರ ಚುನಾವಣೆ ಬಂದರೂ ಜೆಡಿಎಸ್ ಸಜ್ಜಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ನಾನು ಸಿದ್ದರಾಮಯ್ಯ ರೀತಿ ದಾಳಿ ಮಾಡಲ್ಲ

ನಾನು ಬೆಳಗಾವಿಯ ಪರಿಸ್ಥಿತಿ ಹೇಳಿದ್ದೇನೆ ಹೊರತು ಸರ್ಕಾರದ ಬಗ್ಗೆ ಸಾಫ್ಟ್ ಕಾರ್ನರ್ ಮಾತು ಆಡಿಲ್ಲ. ನಾನು ಸಿದ್ದರಾಮಯ್ಯರ ರೀತಿ ದಾಳಿ ಮಾಡಲ್ಲ. ಕೆಲಸ ಆಗಬೇಕು. ದಾಳಿ ಮಾಡುವುದರಿಂದ ನಿಮಗೆ ಸ್ಟೋರಿ ಆಗಬಹುದಷ್ಟೇ, ಹೀಗಾಗಿ ನಾನು ಸಿದ್ದರಾಮಯ್ಯ ರೀತಿ ದಾಳಿ ಮಾಡಲ್ಲ. ನಾನು ಅಂಕಿ-ಅಂಶಗಳನ್ನ ಇಟ್ಟುಕೊಂಡು ಮಾತನಾಡುತ್ತೇನೆ ಎಂದು ತಿಳಿಸಿದರು.

ಕುಮಾರಸ್ವಾಮಿ ಆಡಳಿತಕ್ಕೆ ಬೇಸರ ಮಾಡಿಕೊಂಡು ಹೊರಬಂದ್ರು ಅಂತ ಹೇಳಿದರು. ಜನ ಉಳಿಸಲು ಯಾರೇ ಸರ್ಕಾರ ರಚನೆ ಮಾಡಿದರೂ ನಾವು ಬೆಂಬಲವನ್ನು ಮಾಡುತ್ತೇವೆ. ಆದ್ರೆ ಪರಿಹಾರ ನಾನು ಹೇಳಿದ ರೀತಿ ಆಗಬೇಕು ಅಷ್ಟೇ. ಯಡಿಯೂರಪ್ಪನವರೇ  ಆಗಲಿ ಸಿದ್ದರಾಮಯ್ಯ ಆಗಲಿ ನಮಗೇನು ಅಭ್ಯಂತರವಿಲ್ಲ ಎಂದರು.

ಇದನ್ನೂ ಓದಿ : ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ; ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ

ರಾಜ್ಯದಲ್ಲಿ ಸರಳ ಬಹುಮತ ಯಾರಿಗೂ ಬರಲ್ಲ

ಮಹಾರಾಷ್ಟ್ರ ಹರಿಯಾಣದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಇತ್ತು. ವಿಪಕ್ಷ ಕಾಂಗ್ರೆಸ್ ಹೆದರಿಕೊಂಡು ಜನರ ಬಳಿ ಹೋಗಲಿಲ್ಲ ಆದರೂ ಜನ ತಾವಾಗಿಯೇ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಚುನಾವಣೆಗೆ ಹೋದ್ರೆ ಏನಾಗುತ್ತೆ..? ನಮ್ಮ ರಾಜ್ಯದಲ್ಲಿ ಸರಳ ಬಹುಮತ ಯಾರಿಗೂ ಬರಲ್ಲ. 2006 ರಲ್ಲಿ ದೇವೇಗೌಡರ ಮಾತಿಗೆ ವಿರುದ್ಧ ನಡೆದುಕೊಂಡೆ. 20-20 ತಿಂಗಳ ಸರ್ಕಾರದಲ್ಲಿ ಅಧಿಕಾರ ಬಿಟ್ಟು ಕೊಡಲು ನಾನು ಹಿಂದೇಟು ಹಾಕಲಿಲ್ಲ. ಅದು ಬಿಟ್ರೆ ಇವತ್ತಿನವರೆಗೂ ನಮ್ಮ ತಂದೆಯ ವಿರುದ್ಧ ನಾನು ಎಂದೂ ನಡೆದಿಲ್ಲ. ತಂದೆಯ ಆದೇಶದಂತೆ ನಾನು ನಡೆದುಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:November 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ