Belagavi Politics: ಬೆಳಗಾವಿ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ; ಗೊಂದಲ ಸೃಷ್ಟಿಸಿದ ಸರ್ಕಾರ

ಬೆಳಗಾವಿ ಪಾಲಿಕೆ ಮೇಯರ್ ಚುನಾವಣೆ 21ನೇ ಅವಧಿ ಮೀಸಲಾತಿ ಪ್ರಕಾರ ನಡೆಸಬೇಕೋ ಅಥವಾ  24ನೇ ಅವಧಿಯ ಮೀಸಲಾತಿ ಪ್ರಕಾರವೋ ಎನ್ನುವುದೇ ಗೊಂದಲ ಸೃಷ್ಟಿಯಾಗಿದೆ. 

ಬೆಳಗಾವಿ ಮಹಾನಗರ ಪಾಲಿಕೆ

ಬೆಳಗಾವಿ ಮಹಾನಗರ ಪಾಲಿಕೆ

  • Share this:
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ (Belgavi Mayor Election) ಕಗ್ಗಂಟಾಗಿದೆ. ಮೀಸಲಾತಿ (Reservation) ವಿಚಾರದಲ್ಲಿ ಸರ್ಕಾರದ (BJP Government) ನಡೆ‌ ಈಗ ಮತ್ತೆ ಗೊಂದಲ ಸೃಷ್ಟಿಸಿದೆ. ಸ್ಪಷ್ಟವಾದ ಬಹುಮತವಿದ್ದರೂ ಚುನಾವಣೆ ನಡೆಸಲು ಬಿಜೆಪಿ ಶಾಸಕರು, ಸರ್ಕಾರ ಹಿಂದೇಟು ಹಾಕುತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ (Belagavi municipal corporation) ಆಡಳಿತ ಎಂಇಎಸ್ (MES) ಕಪಿಮುಷ್ಠಿಯಿಂದ ಸಂಪೂರ್ಣ ಕೈ ತಪ್ಪಿದೆ. ಸದ್ಯ ಬೆಳಗಾವಿ ಪಾಲಿಕೆ 58 ವಾರ್ಡುಗಳಿಗೆ ಚುನಾವಣೆ ನಡೆದ ಒಂದು ವರ್ಷ ಪೂರ್ಣಗೊಂಡಿದೆ. ಆದರೂ ಮೇಯರ್, ಉಪ ಮೇಯರ್ ಚುನಾವಣೆ ಇನ್ನೂ ಕಗ್ಗಂಟಾಗಿದೆ.

ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡೆ ಮತ್ತೆ ಗೊಂದಲ ಸೃಷ್ಟಿಸಿದೆ. ಬೆಳಗಾವಿ ಮಹಾನಗರ ಪಾಲಿಕೆಗೆ 2019ರಲ್ಲಿ ಮೇಯರ್ ಚುನಾವಣೆ ನಡೆದಿತ್ತು. ಅನಂತರ ವಾರ್ಡಗಳ ವಿಂಗಡನೆ, ಮೀಸಲಾತಿ ವಿಚಾರವಾಗಿ ಎರಡು ವರ್ಷ ಚುನಾವಣೆ ನಡೆಯಲೇ ಇಲ್ಲ. ಈಗ ಚುನಾವಣೆ ನಡೆದು ಒಂದು ವರ್ಷ ಆಗಿದೆ.

BJP government delay belagavi mayor and deputy mayor elections csb mrq
ಬಿಜೆಪಿ ಧ್ವಜ


ಗೊಂದಲ ಏನು?

ಆದರೂ ಮೇಯರ್, ಉಪ ಮೇಯರ್ ಮೀಸಲಾತಿ ವಿಚಾರಣೆ ಗೊಂದಲ ಇನ್ನೂ ಮುಂದುವರಿದಿದೆ. ಹಾಗೇ ನೋಡಿದ್ರೆ  ಬೆಳಗಾವಿ ಪಾಲಿಕೆ ಮೇಯರ್ ಚುನಾವಣೆ 21ನೇ ಅವಧಿ ಮೀಸಲಾತಿ ಪ್ರಕಾರ ನಡೆಸಬೇಕೋ ಅಥವಾ  24ನೇ ಅವಧಿಯ ಮೀಸಲಾತಿ ಪ್ರಕಾರವೋ ಎನ್ನುವುದೇ ಗೊಂದಲ ಸೃಷ್ಟಿಯಾಗಿದೆ.

ಸರ್ಕಾರ ಪ್ರತಿ ವರ್ಷವೂ ಪಾಲಿಕೆ ಮೇಯರ್, ಉಪ ಮೇಯರ್ ಮೀಸಲಾತಿ ಪ್ರಕಟಿಸುತ್ತದೆ. ಹೀಗಾಗಿ ಬೆಳಗಾವಿ ಪಾಲಿಕೆ 21ನೇ ಅವಧಿಗೆ ಮೇಯರ್ ಸಾಮಾನ್ಯ ಮಹಿಳೆ, ಉಪ ಮೇಯರ್ ಬ ವರ್ಗ ಮಹಿಳಾ ಮೀಸಲಾತಿ ಬಂದಿದ್ದು, ಇನ್ನೂ 24 ನೇ ಅವಧಿಗೆ ಮೇಯರ್ ಸಾಮಾನ್ಯ ಮತ್ತು ಉಪ ಮೇಯರ್ ಎಸಿ ಮಹಿಳೆ ಮೀಸಲಾತಿ ಬಂದಿದೆ. ಈಗ 21ನೇ ಅವಧಿ ಅಥವಾ 24ನೇ ಅವಧಿ ಮೀಸಲಾತಿ ಪ್ರಕಾರ ಚುನಾವಣೆ ನಡೆಸಬೇಕಾ ಅನ್ನೋ ಗೊಂದಲಕ್ಕೆ ಕಾರಣವಾಗಿದೆ.

ಬಿಜೆಪಿಗೆ ಸ್ಪಷ್ಟ ಬಹುಮತ

ಇನ್ನೂ ಬೆಳಗಾವಿ ಪಾಲಿಕೆಯಲ್ಲಿ ಚಿನ್ಹೆ ಮೇಲೆ ಚುನಾವಣೆ ನಡೆದು ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದೆ. ಬೆಳಗಾವಿ ಮಹಾನಗರ ಪಾಲಿಕೆ 58 ವಾರ್ಡನಲ್ಲಿ 35 ಸ್ಥಾನ ಬಿಜೆಪಿ, 10 ಸ್ಥಾನ ಕಾಂಗ್ರೆಸ್, 1 ಸ್ಥಾನ ಎಂಐಎಂ, 12 ಪಕ್ಷೇತರ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.

BJP government delay belagavi mayor and deputy mayor elections csb mrq
ಬಿಜೆಪಿ ಧ್ವಜ


ಈ ಪಕ್ಷೇತರಲ್ಲಿ ಮೂವರು ಎಂಇಎಸ್ ಸದಸ್ಯರು ಇದ್ದಾರೆ. ಇಷ್ಟಾಗಿಯೂ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಇಬ್ಬರೂ ಬಿಜೆಪಿ ಶಾಸಕರು ಇದ್ದಾರೆ. ಸರ್ಕಾರ ಮೀಸಲಾತಿ ಪ್ರಕಟಿಸಿದ ಬಳಿಕವೂ ಯಾವುದೇ ಅವಧಿ ಅನುಸಾರವಾಗಿ ಚುನಾವಣೆ ನಡೆಸುವಂತೆ ಸೂಚನೆ ನೀಡಬೇಕಿತ್ತು. ಆ ಕೆಲಸ ಸರ್ಕಾರದಿಂದಲೂ ಆಗುತ್ತಿಲ್ಲ.

ಇದನ್ನೂ ಓದಿ:  Belagavi Politics: ಬೈಲಹೊಂಗಲ ಕ್ಷೇತ್ರದಲ್ಲಿ BJP-KJP ಕಲಹ; ರಾಜ್ಯ ನಾಯಕರಿಗೆ ತಲೆನೋವು ಆದ ಸ್ಥಳೀಯ ಗುದ್ದಾಟ

ಯಾಕೆ ಈ ಹಿಂದೇಟು?

ಇತ್ತ ಇಬ್ಬರೂ ಬಿಜೆಪಿ ಶಾಸಕರು ಸರ್ಕಾರದ ಮೇಲೆ ಪರಿಣಾಮಕಾರಿ ಆಗಿ ಒತ್ತಡ ಹಾಕುತ್ತಿಲ್ಲ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ಹಿಂದೇಟು ಹಾಕುತ್ತಿದೇಯಾ ಅನ್ನೋ ಅನುಮಾನಗಳು ಕಾಡುತ್ತಿವೆ.

ಅಧಿಕಾರಿವಿಲ್ಲದೇ ಪಾಲಿಕೆ ಸದಸ್ಯರ ಪಾಡು ಯಾರಿಗೂ ಹೇಳದಂತಾಗಿದೆ. ಸರ್ಕಾರದ ವಿರುದ್ಧ ಇತ್ತೀಚೆಗೆ ಕಾಂಗ್ರೆಸ್, ಎಂಇಎಸ್, ಎಂಐಎಂ ಸದಸ್ಯರು ಕೇಕ್ ಕತ್ತರಿಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:  Good News: ಹಳ್ಳಿಗೆ ಬಂದ 101 ವಿದ್ಯಾರ್ಥಿಗಳು; ಇದರಿಂದ ರೈತರಿಗೆ ಏನು ಲಾಭ?

ಬೆಳಗಾವಿ ಪಾಲಿಕೆ ಮೇಯರ್ ಗದ್ದುಗೆ ಹಿಡಿಯುವ ಬಹುಮತವಿದ್ದರೂ ಬಿಜೆಪಿ ಸರ್ಕಾರ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರದ ಇಬ್ಬಗೆ ನಡೆ ಗೊಂದಲ ಸೃಷ್ಟಿಸಿದೆ.‌ ಮತ ಕೊಟ್ಟ ಮತದಾರರು ಮಾತ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
Published by:Mahmadrafik K
First published: