• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಅಪ್ಪ-ಮಗನಿಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತೆ; ರೇವಣ್ಣ ಪ್ರಶ್ನೆ

ಅಪ್ಪ-ಮಗನಿಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತೆ; ರೇವಣ್ಣ ಪ್ರಶ್ನೆ

ಮಾಜಿ ಸಚಿವ ಹೆಚ್. ಡಿ. ರೇವಣ್ಣ.

ಮಾಜಿ ಸಚಿವ ಹೆಚ್. ಡಿ. ರೇವಣ್ಣ.

ಅಪ್ಪ ಮಕ್ಕಳ ಪಕ್ಷ ಇಲ್ಲದಿದ್ದರೆ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬರುತ್ತಿತ್ತೆ. ಅಪ್ಪ-ಮಗನಿಂದಾಗಿಯೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಸಫಲವಾಗಿದ್ದು

  • Share this:

ಹಾಸನ  (ಜ .13): ಜೆಡಿಎಸ್​ ಅಪ್ಪ- ಮಕ್ಕಳ ಪಕ್ಷ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಟೀಕೆ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಎಚ್​ಡಿ ರೇವಣ್ಣ, ಅಪ್ಪ ಮಕ್ಕಳ ಪಕ್ಷ ಇಲ್ಲದಿದ್ದರೆ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬರುತ್ತಿತ್ತೆ. ಅಪ್ಪ-ಮಗನಿಂದಾಗಿಯೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಸಫಲವಾಗಿದ್ದು ಎಂದು ತಿರುಗೇಟು ನೀಡಿದರು. ಅಪ್ಪ ಮಕ್ಕಳು ಎಂದು ಜೆಡಿಎಸ್​ ತೋರಿಸುತ್ತಾರೆ. ಆದರೆ, ನಾನು ಯಾವ್ಯಾವ ಪಕ್ಷದಲ್ಲಿ ಅಪ್ಪ ಮಕ್ಕಳಿದ್ದಾರೆ ಅನ್ನೋದನ್ನ ನಾನು ತೋರಿಸುತ್ತೇನೆ. ಜೆಡಿಎಸ್​ ಕಿತ್ತೆಸಬೇಕು ಎನ್ನುತ್ತಾರೆ. ಅಪ್ಪ ಮಕ್ಕಳ ಪಕ್ಷ ತೆಗೆಯಲು ಅವರಿಗೆ ದೇವರು ಆಶೀರ್ವಾದ ಮಾಡಲಿ. ಒಬ್ಬ ದೇವೇಗೌಡರನ್ನ ತೆಗೆಯಲು ಎರಡು ರಾಷ್ಟ್ರೀಯ ಪಕ್ಷಗಳು ಒಂದಾಗಿದ್ದವು.  ಪಕ್ಷ ಕಿತ್ತು ಎಸೆಯೋದು ದೇವರು. ಕಿತ್ತು ಎಸೆಯುವವರು ಯಾಕೆ ಮೂರನೇ ಸ್ಥಾನಕ್ಕೆ ಹೋದರು ಎಂದು ಪ್ರಶ್ನಿಸಿದರು. 

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಿಜೆಪಿ ಸರ್ಕಾರ ಮಾಡಿದ್ದು ಎಂದ ಸಂಸದ ಪ್ರತಾಪ್​ ಸಿಂಹ ಹೇಳಿಕೆ ವಿರುದ್ಧ ಹರಿಹಾಯ್ದ ಅವರು, ಪ್ರತಾಪ್ ಸಿಂಹ ನಿಗೆ ಹಾಸನದ ಚಿಂತೆ ಬೇಡ. ಅವರು, ಮೈಸೂರು ಜಿಲ್ಲೆ ಬಗ್ಗೆ ಚಿಂತೆ ಮಾಡುವುದಕ್ಕೆ ಹೇಳಿ. ಬೆಂಗಳೂರು ಮಾಕುಟ್ಟ ಹೆದ್ದಾರಿ ಕಡತ ಕೇಂದ್ರ ಸರ್ಕಾರದಲ್ಲಿದೆ. ಆ ಕಡತ ಕ್ಲಿಯರ್ ಮಾಡಲು ಹೇಳಿ  ಕಿಡಿಕಾರಿದರು.


ರಾಷ್ಟ್ರೀಯ ಮತ್ತು ಸಹಕಾರ ಬ್ಯಾಂಕ್ ನ ಸಾಲ ತೀರಿಸಿದ್ದು ಅಪ್ಪಮಕ್ಕಳ ಪಕ್ಷ. ರೈತರ ಸಾಲ ತೀರಿಸಿದ್ದು ಇದೇ ಅಪ್ಪಮಕ್ಕಳ ಪಕ್ಷ.  ಮೋದಿಯವರು ತಾಕತ್ತಿದ್ದರೆ ದೇಶದ ರೈತರ ಸಾಲಮನ್ನಾ ಮಾಡಲಿ ಎಂದು ಇದೇ ವೇಳೆ ಸವಾಲ್ ಹಾಕಿದರು.


ಹಾಸನದಲ್ಲಿ ನಡೆದ ಜನಸೇವಕ್​ ಸಭೆಯಲ್ಲಿ ಮಾತನಾಡಿದ ಬಿಜೆಪಿ, ಜಿಲ್ಲೆಯಲ್ಲಿ ಅಪ್ಪ-ಮಕ್ಕಳ ಪಕ್ಷವಾದ ಜೆಡಿಎಸ್‌ನ್ನು ಕಿತ್ತೊಗೆಯಬೇಕು. ಬಿಜೆಪಿಯದೇನಿದ್ದರೂ ಜೆಡಿಎಸ್‌ ವಿರುದ್ಧದ ರಾಜಕೀಯ ಹೋರಾಟ ಎಂದು ಗರ್ಜಿಸಿದ್ದರು.

Published by:Seema R
First published: