• Home
  • »
  • News
  • »
  • state
  • »
  • Karnataka Politics: ಬಿಜೆಪಿಯಿಂದ ಕಾಂಗ್ರೆಸ್​ಗೆ ಕೌಂಟರ್​ ಸಮಾವೇಶ, ಭಾರತ್ ಜೋಡೋ ಯಾತ್ರೆಗೆ ಮತ್ತೆ ಪೋಸ್ಟರ್ ಬಿಸಿ

Karnataka Politics: ಬಿಜೆಪಿಯಿಂದ ಕಾಂಗ್ರೆಸ್​ಗೆ ಕೌಂಟರ್​ ಸಮಾವೇಶ, ಭಾರತ್ ಜೋಡೋ ಯಾತ್ರೆಗೆ ಮತ್ತೆ ಪೋಸ್ಟರ್ ಬಿಸಿ

ಭಾರತ್ ಜೋಡೋ ಯಾತ್ರೆ

ಭಾರತ್ ಜೋಡೋ ಯಾತ್ರೆ

ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurapa) ಹಾಗೂ ಬಿಜೆಪಿ ನಾಯಕರು (BJP Leaders) ಭಾಗವಹಿಸಲಿದ್ದಾರೆ. 

  • Share this:

ಭಾರತ್ ಜೋಡೋ ಪಾದಯಾತ್ರೆಗೆ (Bharar Jodo Yatre) ಬಿಜೆಪಿ (BJP) ಜನಸಂಕಲ್ಪ ಯಾತ್ರೆ (Jana Sankalpa Yatre) ಮೂಲಕ ಟಕ್ಕರ್ ಕೊಡಲು ತಯಾರಿ ಮಾಡಿಕೊಂಡಿದೆ. ಬಿಜೆಪಿ ಪಕ್ಷದಿಂದ ಇಂದಿನಿಂದ ಜನಸಂಕಲ್ಪ ಯಾತ್ರೆ ಪ್ರಾರಂಭ ಆಗ್ತಿದೆ. ರಾಯಚೂರು ಗ್ರಾಮಾಂತರ ಕ್ಷೇತ್ರದ ಗಿಲ್ಲೆಸೂಗೂರು ಕ್ಯಾಂಪ್​​ನಿಂದ ಯಾತ್ರೆ ಪ್ರಾರಂಭವಾಗಲಿದೆ. ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurapa) ಹಾಗೂ ಬಿಜೆಪಿ ನಾಯಕರು (BJP Leaders) ಭಾಗವಹಿಸಲಿದ್ದಾರೆ.  ಇಂದಿನ ಬಿಜೆಪಿ rallyಯಲ್ಲಿ (BJP Rally) ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿದಿನ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಯಲಿದೆ.


ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಮತ್ತೆ ಪೋಸ್ಟರ್ ಬಿಸಿ ತಾಗಿದೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಪಾದಯಾತ್ರೆಗೆ ಮುನ್ನವೇ ಸಚಿವ ಆರ್.ಅಶೋಕ್ ಬಿಡುಗಡೆ ಮಾಡಿದ್ದ ಪಿಎಫ್ಐ ಭಾಗ್ಯ ಎಂಬ ಪೋಸ್ಟರ್ ಅಂಟಿಸಲಾಗಿದೆ. ಕೆಲದಿನಗಳ ಹಿಂದೆ ಚಿಕ್ಕನಾಯಕನಹಳ್ಳಿಯಲ್ಲಿ ಪೋಸ್ಟರ್ ಅಂಟಿಸಲಾಗಿತ್ತು.


45 ನಿಮಿಷ ತಡವಾಗಿ ಪಾದಯಾತ್ರೆ  ಆರಂಭ


ರಾತ್ರಿ ಹೆಚ್ಚು ಮಳೆ ಬಂದ ಹಿನ್ನೆಲೆ ಇಂದು ಪಾದಯಾತ್ರೆ 45 ನಿಮಿಷ ತಡವಾಗಿ ಆರಂಭವಾಯ್ತು. ಇವತ್ತಿನ ಯಾತ್ರೆ ಬಗ್ಗೆ ರಾತ್ರಿ ಚರ್ಚೆ ಆಯ್ತು. ರಾಹುಲ್ ಗಾಂಧಿ ಅವರು ಮುಲಾಯಂ‌ ಸಿಂಗ್ ಅಂತ್ಯ ಸಂಸ್ಕಾರಕ್ಕೆ ಹೋಗಬೇಕು ಅಂತ ಯೋಚಿಸುತ್ತಿದ್ದರು. ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ್ ಗಾಂಧಿ ಶಿಮ್ಲಾದಲ್ಲಿದ್ದಾರೆ. ಆದ್ದರಿಂದ ಪ್ರಿಯಾಂಕಾ ಗಾಂಧಿ ಅಂತ್ಯಸಂಸ್ಕಾರಕ್ಕೆ ತೆರಳಲಿದ್ದಾರೆ. ರಾಹುಲ್ ಗಾಂಧಿ ಪಾದಯಾತ್ರೆ ಮುಂದುವರಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.


BJP gave takkar to bharat jodo yatra mrq
ಬಿಜೆಪಿಯಿಂದ ಪೋಸ್ಟರ್


ಬಳ್ಳಾರಿಯಲ್ಲಿ 15ರಂದು ಸಮಾವೇಶ


ಮುಲಾಯಂ ಸಿಂಗ್ ರಾಷ್ಟ್ರಕ್ಕೆ ದೊಡ್ಡ ನಾಯಕ, ದೊಡ್ಡ ಹೋರಾಟಗಾರರು. ಅವರಿಗೆ ಗೌರವ ಕೊಡುತ್ತಾ ಯಾತ್ರೆ ಮುಂದುವರಿಸುತ್ತೇವೆ. ಇದೇ ಅಕ್ಟೋಬರ್ 15ಕ್ಕೆ ಬಳ್ಳಾರಿಯಲ್ಲಿ ಸಮಾವೇಶ ನಡೆಯಲಿದೆ. 17ರಂದು ಎಐಸಿಸಿ ಚುನಾವಣೆ ನಡೆಯಲಿದ್ದು, ಪಾದಯಾತ್ರೆಯಲ್ಲಿ ಭಾಗಿಯಾವರಿಗೆ ವೋಟಿಂಗ್ ವ್ಯವಸ್ಥೆ ಮಾಡಲಾಗಿದೆ.


ಪಿಸಿಸಿ ಮೆಂಬರ್ ಕೆಪಿಸಿಸಿಗೆ ಹೋಗಿ ವೋಟ್ ಹಾಕಬೇಕು. ಮತದಾನದ ಬಳಿಕ ಬೆಂಗಳೂರು ಬ್ಲ್ಯಾಕ್ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರ ಜೊತೆ ಫೋಟೋ ಸೆಷನ್ ಇರಲಿದೆ ಎಂದು ತಿಳಿಸಿದರು.


ಇದನ್ನೂ ಓದಿ:  Bharat Jodo Yatra: ಸಿದ್ದರಾಮಯ್ಯ ಆಯ್ತು ಇದೀಗ ಡಿಕೆಶಿ ಜೊತೆ ರಾಹುಲ್ ಗಾಂಧಿ​ ರನ್ನಿಂಗ್!


ಸಿಎಂ ಹೇಳಿಕೆ ಕೊಡಲಿ


ಮುಸ್ಲಿಂ ಮೀಸಲಾತಿ ವಿಚಾರವಾಗಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಇವರ ಹೇಳಿಕೆ ನಾನು ರಿಯಾಕ್ಷನ್ ಕೊಡಲ್ಲ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರು ಮಾತನಾಡಲಿ. ಆವಾಗ ಉತ್ತರ ಕೊಡುವೆ ಎಂದು ತಿರುಗೇಟು ನೀಡಿದರು.


BJP gave takkar to bharat jodo yatra mrq
ಬಿಜೆಪಿಯಿಂದ ಪೋಸ್ಟರ್


ಮತ, ಅಧಿಕಾರಕ್ಕಾಗಿ ಎಂದೂ ಪಾದಯಾತ್ರೆ ಮಾಡಿಲ್ಲ: ಬಿ ಸಿ ನಾಗೇಶ್ ಹೇಳಿಕೆ


ಬಿಜೆಪಿಯ ಯಾತ್ರೆಗಳನ್ನು (BJP Rally) ಕಾಪಿ ಮಾಡಿ ಕಾಂಗ್ರೆಸ್ ಪಕ್ಷ (Congress) ಈಗ ಪಾದಯಾತ್ರೆ ನಾಟಕ ಆಡುತ್ತಿದೆ. ಕಾಂಗ್ರೆಸ್​​ಗೆ ದೇಶದ ಜನತೆ ತಕ್ಕ ಉತ್ತರ ನೀಡಿ ಭಾರತ್ ಚೋಡೊ ಎನ್ನುವ ಸ್ಥಿತಿ ಮಾಡಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ (Minister BC Nagesh) ವ್ಯಂಗ್ಯವಾಡಿದರು.


ಇದನ್ನೂ ಓದಿ:  Reservation: ಮುಸ್ಲಿಮರ ಮೀಸಲಾತಿ ತೆಗೆಯುವ ಚರ್ಚೆ ಅಂದ್ರು ಬೆಲ್ಲದ್, ಯತ್ನಾಳ್; ಇಬ್ಬರ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು?


ಬಿಜೆಪಿಯವರಿಗೆ (BJP) ಪಾದಯಾತ್ರೆಗಳು ಹೊಸದಲ್ಲ. ಮುರಳಿ ಮನೋಹರ ಜೋಷಿ ಅವರಾಗಲಿ, ಎಲ್ ಕೆ ಅಡ್ವಾಣಿ ಅವರಾಗಲಿ ಇಂತಹ ಹತ್ತಾರು ಯಾತ್ರೆಗಳನ್ನು ಮಾಡಿದ್ದರು. ಆದರೆ ಬಿಜೆಪಿ ಎಂದು ವೋಟಿಗಾಗಿ ಆಗಲಿ ಅಧಿಕಾರಕ್ಕಾಗಿ ಆಗಲಿ ಯಾತ್ರೆಗಳನ್ನು ಮಾಡಲಿಲ್ಲ. ನಮ್ಮ ಹಲವು ಯಾತ್ರೆಗಳನ್ನು ಅವರು ಕಾಪಿ ಮಾಡುತ್ತಿದ್ದಾರೆ ಅಷ್ಟೇ ಎಂದಿದ್ದಾರೆ.

Published by:Mahmadrafik K
First published: