ಬೆಂಗಳೂರು: ನಾಗಮಂಗಲ (Nagamangala Constituency) ಟಿಕೆಟ್ ಆಕಾಂಕ್ಷಿಯಾಗಿದ್ದ ರೌಡಿಶೀಟರ್ ಫೈಟರ್ ರವಿಗೆ (Fighter Ravi) ಬಿಜೆಪಿ (BJP) ಶಾಕ್ ನೀಡಿದೆ. ಕೆಲ ತಿಂಗಳ ಹಿಂದೆ ಬಿಜೆಪಿ ಸೇರಿದ್ದ ಫೈಟರ್ ರವಿ, ನಾಗಮಂಗಲ ಕ್ಷೇತ್ರದ ತುಂಬೆಲ್ಲಾ ಓಡಾಡಿ ಪಕ್ಷಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಕೊಂಡಿದ್ದನು. ಆದರೆ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ (LR Shivaramegowda) ಬಿಜೆಪಿ ಸೇರಿದ ಬೆನ್ನಲ್ಲೇ ಫೈಟರ್ ರವಿಗೆ ಶಾಕ್ ನೀಡಿದೆ. ಟಿಕೆಟ್ ಕೊಡ್ತೀವಿ ಎಂದು ಫೈಟರ್ ರವಿಯನ್ನು ಸ್ಥಳೀಯ ಬಿಜೆಪಿ ಒಕ್ಕಲಿಗ ನಾಯಕರು ಪಕ್ಷಕ್ಕೆ ಕರೆದುಕೊಂಡು ಬಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಕಾರ್ಯಕ್ರಮಕ್ಕೆ ಜನರನ್ನು ಫೈಟರ್ ರವಿ ಮೂಲಕ ಕರೆದುಕೊಂಡು ಬರಲಾಗಿತ್ತು. ಇದೀಗ ಶಿವರಾಮೇಗೌಡರ ಎಂಟ್ರಿಯಿಂದ ಫೈಟರ್ ರವಿಗೆ ಕೊಕ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಶಿವರಾಮೇಗೌಡರು ನಾಗಮಂಗಲ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇಂದು ಶಿವರಾಮೇಗೌಡರು ಬಿಜೆಪಿ ಸೇರ್ಪಡೆ ಆಗ್ತಾರೆ ಎಂದು ಹೇಳಲಾಗಿತ್ತು. ಆದ್ರೆ ಬಿಜೆಪಿ ಸೇರದೇ ಶಿವರಾಮೇಗೌಡರು ಸಭೆಯಿಂದ ಹೊರ ಬಂದಿದ್ದಾರೆ. ಅಸಮಾಧಾನಗೊಂಡಿರುವ ಫೈಟರ್ ರವಿ ಮುನಿಸು ಶಮನಗೊಳಿಸಿ ಶಿವರಾಮೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ಲಾನ್ ಬಿಜೆಪಿ ಮಾಡಿದೆ ಎನ್ನಲಾಗಿದೆ.
ಹೊಡಿಬಡಿ ರಾಜಕೀಯ
ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರದ ಶ್ರೀನಿವಾಸಪುರದಲ್ಲಿ ಹೊಡಿ ಬಡಿ ರಾಜಕೀಯ ಶುರುವಾಗಿದೆ. ರಮೇಶ್ ಕುಮಾರ್, ವೆಂಕಟಶಿವಾರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮುಖಂಡರಿಂದ ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ.. ಗಾಯಾಳುಗಳಿಗೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
‘ತೆನೆ’ ಇಳಿಸಿ ‘ಕೈ’ಹಿಡಿಯಲಿರುವ ಶಿವಲಿಂಗೇಗೌಡ
ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿದೆ. ಇಂದು ಶಾಸಕಸ್ಥಾನಕ್ಕೆ ಕೆ.ಎಂ.ಶಿವಲಿಂಗೇಗೌಡ ರಾಜೀನಾಮೆ ನೀಡಲಿದ್ದಾರೆ. ನೂರಾರು ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರೊಂದಿಗೆ ಶಿರಸಿಗೆ ತೆರಳಿ ರಾಜೀನಾಮೆ ಸಲ್ಲಿಸಲಿದ್ದಾರ. ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಕೆ.ಎಂ.ಶಿವಲಿಂಗೇಗೌಡ ಸೇರ್ಪಡೆಯಾಗಲಿದ್ದಾರೆ. ಈ ಹಿಂದೆ ಮೂರು ಬಾರಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ, ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಆಯ್ಕೆಯಾಗಿದ್ದರು.
ಇದನ್ನೂ ಓದಿ: HD Revanna ಆರೋಪ ಬೆನ್ನಲ್ಲೇ ಸ್ವಯಂ ವರ್ಗಾವಣೆ ಕೋರಿದ DySP
ಕಾರಾಗೃಹಕ್ಕೆ ಖಾಕಿ ದಿಢೀರ್ ದಾಳಿ
ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಆರ್.ಜೈನ್ ನೇತೃತ್ವದಲ್ಲಿ ರೇಡ್ ನಡೆದಿದೆ. ಜೈಲಿನಲ್ಲಿ ಅಕ್ರಮ ಚಟುವಟಿಕೆ ಮಾಹಿತಿ ಹಿನ್ನೆಲೆಯಲ್ಲಿ ಹಾಗೂ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆ ತಪಾಸಣೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ