ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ (Assembly Election 2023) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳು (Political Party) ಪ್ರಚಾರ ನಡೆಸುತ್ತಿದ್ರೆ, ಟಿಕೆಟ್ ಆಕಾಂಕ್ಷಿಗಳು ಬಿ ಫಾರಂ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಮತ್ತೆ ಒಂದಿಷ್ಟು ನಾಯಕರು ಪಕ್ಷಾಂತರ ಪರ್ವ ಆರಂಭಿಸಿದ್ದಾರೆ. ಇದೀಗ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ (Former MLA SI Chikkanagowdar) ವಿಧಾನಸಭಾ ಟಿಕೆಟ್‌ಗಾಗಿ ಕಣ್ಣೀರು ಹಾಕಿದ್ದಾರೆ. ಎಸ್.ಐ.ಚಿಕ್ಕನಗೌಡರ ಕುಂದಗೋಳ ವಿಧಾನಸಭಾ ಕ್ಷೇತ್ರದ (Kundgol Constituency) ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತ ಸ್ಥಳೀಯ ನಾಯಕ ಎಂಆರ್ ಪಾಟೀಲ್ (BJP Leader MR Patil) ಸಹ ಬಿಜೆಪಿ ಟಿಕೆಟ್‌ಗಾಗಿ ಓಡಾಡುತ್ತಿದ್ದಾರೆ.
ಎಂ.ಆರ್. ಪಾಟೀಲ್ ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Union Minister Pralhad Joshi) ಆಪ್ತರಾಗಿದ್ದು, ಸಚಿವ ಸಿ.ಸಿ.ಪಾಟೀಲ್ (Minister CC Patil) ಅಳಿಯರಾಗಿದ್ದಾರೆ. ಹೀಗಾಗಿ ಎಂ.ಆರ್.ಪಾಟೀಲ್ ಅವರಿಗೆ ಟಿಕೆಟ್ ಬಹುತೇಕ ಖಚಿತ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಇದರಿಂದ ಚಿಕ್ಕನಗೌಡರು ಟಿಕೆಟ್ ಪಡೆದುಕೊಳ್ಳಲು ತಮ್ಮದೇ ರಾಜಕೀಯ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
ಹುಟ್ಟುಹಬ್ಬದ ನೆಪದಲ್ಲಿ ಶಕ್ತಿ ಪ್ರದರ್ಶನ
ಹುಟ್ಟುಹಬ್ಬ ಆಚರಣೆ ನೆಪದಲ್ಲಿ ನಿನ್ನೆ ಎಸ್ಐ ಚಿಕ್ಕನಗೌಡರು ಕ್ಷೇತ್ರದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಹುಟ್ಟುಹಬ್ಬದ ವೇದಿಕೆಯಲ್ಲಿ ತಮಗೆ ಟಿಕೆಟ್ ನೀಡಬೇಕೆಂದು ಗಳಗಳನೇ ಕಣ್ಣೀರು ಹಾಕಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಚಿಕ್ಕನಗೌಡರು ಸೋಲು ಕಂಡಿದ್ದಾರೆ.
ಎರಡು ಬಾರಿ ಕಡಿಮೆ ಅಂತರದಿಂದ ಸೋಲು
2018ರ ಚುನಾವಣೆಯಲ್ಲಿ 634 ಮತಗಳ ಅಂತರದಿಂದ ಮತ್ತು 2019 ರ ಉಪ ಚುನಾವಣೆಯಲ್ಲಿ 1601 ಮತಗಳ ಅಂತರದಿಂದ ಸೋತಿದ್ದೇನೆ. ಆದ್ರೂ ಸಹ ನಾನು ಧೃತಿಗೆಟ್ಟಿಲ್ಲ. ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ. ಇನ್ನೊಮ್ಮೆ ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ ಎಂದು ಮತಯಾಚನೆ ಮಾಡಿದರು.
ಕೇಂದ್ರ ಸಚಿವರಿಗೆ ಪರೋಕ್ಷ ಟಾಂಗ್
ಇದೊಂದು ಬಾರಿಗೆ ಟಿಕೆಟ್ ನೀಡುವಂತೆ ನಾಯಕರ ಬಳಿ ಬೇಡಿಕೆ ಇಟ್ಟಿದ್ದೇನೆ. ಕಾಲು ಬೀಳುತ್ತೇನೆ, ಕೈ ಮುಗಿಯುತ್ತೇನೆ ನನಗೆ ಟಿಕೆಟ್ ನೀಡಿ. ನನ್ನ ಪರಿಸ್ಥಿತಿ ಸರಿ ಇಲ್ಲ, ಯಾರು ಬಂದ್ರೂ ಏನೂ ಮಾಡಲಿಕ್ಕೆ ಆಗುವುದಿಲ್ಲ ಎಂದು ಪರೋಕ್ಷವಾಗಿ ಎಂ.ಆರ್.ಪಾಟೀಲ್ ಮತ್ತು ಪ್ರಹ್ಲಾದ್ ಜೋಶಿ ಅವರಿಗೆ ಟಾಂಗ್ ನೀಡಿದರು.
ಇದನ್ನೂ ಓದಿ: Karnataka Politics: ಬೆಂಗಳೂರು ಅಂಗಳ ತಲುಪಿದ ಕುಂದಗೋಳ ಕಾಂಗ್ರೆಸ್ ಭಿನ್ನಮತ; ಕುಸುಮಾ ಶಿವಳ್ಳಿಗೆ ತಪ್ಪುತ್ತಾ ಟಿಕೆಟ್?
ಕ್ಷೇತ್ರದ ಜನ ತೀರ್ಮಾನ ಮಾಡಲಿ. ಇದೊಂದು ಬಾರಿಗೆ ಆಶೀರ್ವಾದ ಮಾಡಿ ಎಂದು ಕಣ್ಣೀರು ಹಾಕುತ್ತಾ ಕ್ಷೇತ್ರದ ಜನರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದರು.
‘ಕಾಂಗ್ರೆಸ್ ಸೇರೋದು ಖಚಿತ’
ಕಾಂಗ್ರೆಸ್ (Congress) ಸೇರ್ಪಡೆ ವಿಚಾರವನ್ನ ಶಾಸಕ ಶಿವಲಿಂಗೇಗೌಡ (MLA Shivalingegowda) ಅಧಿಕೃತಗೊಳಿಸಿದ್ದಾರೆ.. ನಮ್ಮ ಮುಖಂಡರು ಎಲ್ಲಿಗೆ ಹೋಗಿ ಅಂತಾರೋ ಅಲ್ಲಿಗೆ ಹೋಗ್ತೀನಿ ಅಂದಿದ್ದೆ. ಅದರಂತೆ ನಿನ್ನೆ ರಾತ್ರಿ ಎರಡೂವರೆ ಮೂರು ಸಾವಿರ ಮುಖಂಡರು ಫೋನ್ ಕಾಲ್ ಗೆ ಬಂದಿದ್ದರು.
ಇದನ್ನೆಲ್ಲಾ ನೋಡಿದ್ರೆ ಬಿಜೆಪಿ ನಮಗೆ ಆಗೋದಿಲ್ಲ, ಕಾಂಗ್ರೆಸ್ ಗೆ ಹೋಗೋದು ಸೂಕ್ತ ಅಂತ ಭರವಸೆ ನೀಡಿದ್ದಾರೆ. ನಾನು 5 ನೇ ತಾರೀಖು ಕಾಂಗ್ರೆಸ್ ಸೇರುತ್ತಿಲ್ಲ. ಚುನಾವಣೆ ನೀತಿ ಸಂಹಿತೆ ಘೋಷಣೆಯಾಗೋವರೆಗೂ ರಾಜೀನಾಮೆ ಕೊಡೋದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಸವಾಲ್
ರಾಜಹಂಸಗಡ ಶಿವಾಜಿ ಮಹಾರಾಜರ ಪ್ರತಿಮೆ ವಿಚಾರವಾಗಿ ಕ್ರೆಡಿಟ್ ವಾರ್ ಜೋರಾಗಿದೆ. ನಿನ್ನೆ ಪ್ರತಿಮೆ ಉದ್ಘಾಟಿಸಿ ಮಾತಾಡಿದ ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Former CM Siddaramaiah) ಒಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯರವರು ಅನುದಾನ ಕೊಟ್ಟಿದ್ದೀನಿ ಅಂತಾ ಹೇಳ್ತಾರೆ. ಆದರೆ, 2013ರಿಂದ 2018ರವರೆಗೆ ಸಿದ್ದರಾಮಯ್ಯ ಆಡಳಿತ ಇತ್ತು. ಈ ಕೋಟೆ ಅಭಿವೃದ್ಧಿಗೆ ಒಂದು ನಯಾಪೈಸೆ ಬಿಡುಗಡೆ ಮಾಡಿದ್ರೆ ಅವರನ್ನೇ ಇನ್ನೊಮ್ಮೆ ಕರೆಸಿ ಉದ್ಘಾಟನೆ ಮಾಡಿಸ್ತೀನಿ ಎಂದು ಸವಾಲ್ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ