ಜನ ನಿಮ್ಮನ್ನು ಕ್ಷಮಿಸಲ್ಲ: ಬಿಜೆಪಿಗೆ ಸಿದ್ದರಾಮಯ್ಯ ಎಚ್ಚರಿಕೆ

ರಾಜಕೀಯಕ್ಕೆ ಬನ್ನಿ ಎಂದು ನಮ್ಮನ್ನು ಯಾರು ಕರೆದಿಲ್ಲ. ನಾವಾಗಿಯೇ ರಾಜಕೀಯಕ್ಕೆ ಬಂದೆವು. ಇದೊಂದು ವೃತ್ತಿಯೂ ಅಲ್ಲ. ರಾಜಕೀಯ ಎಂಬುದು ಪ್ರವೃತ್ತಿ, ನಾನು ವೃತ್ತಿಯಲ್ಲಿ ವಕೀಲ, ಹಾಗೆಂದು ರಾಜಕೀಯಕ್ಕೆ ಬಂದ ಮೇಲೆ ತತ್ವ ಸಿದ್ದಾಂತ ಇರಬೇಕು. ಅದಕ್ಕೆ ಬದ್ದರಾಗಿರಬೇಕು. ನಾನು ಸಂವಿಧಾನವನ್ನು ನಂಬುತ್ತೇನೆ

G Hareeshkumar | news18
Updated:July 23, 2019, 7:16 PM IST
ಜನ ನಿಮ್ಮನ್ನು ಕ್ಷಮಿಸಲ್ಲ: ಬಿಜೆಪಿಗೆ ಸಿದ್ದರಾಮಯ್ಯ ಎಚ್ಚರಿಕೆ
ಮಾಜಿ ಸಿಎಂ ಸಿದ್ದರಾಮಯ್ಯ
  • News18
  • Last Updated: July 23, 2019, 7:16 PM IST
  • Share this:
ಬೆಂಗಳೂರು (ಜುಲೈ 23) :  ಬಿಜೆಪಿಯವರು ಸರ್ಕಾರ ರಚಿಸಿದ್ದೇ ಆದಲ್ಲಿ ಹೆಚ್ಚು ದಿನ ಉಳಿಯಲ್ಲ. ನಮಗೆ ಆಗಿರುವ ಸಮಸ್ಯೆ ಅವರಿಗೂ ತಪ್ಪಿದ್ದಲ್ಲ. ಅಂದು ಬಿಜೆಪಿಗೆ ವಿಶ್ವಾಸ ಮತಯಾಚನೆಗೆ 15 ದಿನ ಸಮಯ ನೀಡಿದ್ರೆ ಇಂದು ನಡೆಯುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ಅಂದೇ ನಡೆಯುತ್ತಿತ್ತು. ಅವತ್ತೇ ಕುದುರೆ ವ್ಯಾಪಾರ ಮಾಡುತ್ತಿದ್ದರು ಎಂದು ಬಿಜೆಪಿ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು

2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಕಾರಣ ಹೈಕಮಾಂಡ್​​ ಸೂಚನೆ ಮೇರೆಗೆ ಜೆಡಿಎಸ್​ ಜತೆ ಸರ್ಕಾರ ರಚಿಸುವ ತೀರ್ಮಾನ ಕೈಗೊಂಡಿದ್ದೆವು. ಬಿಜೆಪಿಯವರು ಗೆದ್ದದ್ದು ಕೇವಲ 104 ಸ್ಥಾನಗಳನ್ನ ಮಾತ್ರ. ಸರ್ಕಾರ ರಚಿಸಲು 113 ಬೇಕಿತ್ತು. ಒಬ್ಬ ಪಕ್ಷೇತರ ಶಾಸಕನ ಬೆಂಬಲ ಮಾತ್ರ ಬಿಜೆಪಿಗೆ ಇತ್ತು. ಆದರೂ ಕೂಡ ಸರ್ಕಾರ ರಚಿಸಲು ಹೊರಟಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ಇದೀಗ ಪ್ರಜಾಪ್ರಭುತ್ವ ಕೊಲೆ ಮಾಡಿ ಅಧಿಕಾರಕ್ಕೆ ಬರುವುದಾದರೆ ಅದು ಒಂದು ದಿನ ನಿಮಗೇ ತಿರುಗು ಬಾಣವಾಗುತ್ತದೆ. ಬಿಜೆಪಿಯವರು ಸರ್ಕಾರ ರಚಿಸಿದರೆ ಹೆಚ್ಚು ದಿನ ಉಳಿಯಲ್ಲ ಎಂದವರು ತಿಳಿಸಿದರು.

ಎಲ್ಲರೂ ಒಟ್ಟಾಗಿ ಹೋದರೇ ಅಪಾಯ

10ನೇ ಶೆಡ್ಯೂಲ್ ಅನ್ನ ಎಲ್ಲಾ ಪಕ್ಷದವರಿಗೂ ಸೇರಿಸಿ ಮಾಡಿದ್ದಾರೆ. ಪಕ್ಷಾಂತರ ರೋಗ ಬೆಳೆಯಲು ಬಿಟ್ಟರೆ ಯಾವ ಸರ್ಕಾರ ಉಳಿಯಲು ಸಾಧ್ಯ…? ಒಬ್ಬರು ಹೋದರೆ ಅಪಾಯ ಅಲ್ಲ. ಆದರೇ ಎಲ್ಲರೂ ಒಟ್ಟಾಗಿ ಹೋದರೇ ಅಪಾಯ. ಎಲ್ಲರೂ ಈ ರೀತಿ ಹೋಲ್ ಸೇಲ್ ಟ್ರೇಡ್ ಆದರೆ ಅಪಾಯ. ಪ್ರಜಾಪ್ರಭುತ್ವ ಅಲ್ಲಾಡುತ್ತಿದೆ. ಹಣ ಅಧಿಕಾರ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ ಎಂದು ಸಿದ್ದರಾಮಯ್ಯ ವಿಷಾದಿಸಿದರು.

ರಾಜಕೀಯಕ್ಕೆ ಯಾರು ನಮ್ಮನ್ನ ಕರೆದಿಲ್ಲ

ರಾಜಕೀಯಕ್ಕೆ ಬನ್ನಿ ಎಂದು ನಮ್ಮನ್ನು ಯಾರು  ಕರೆದಿಲ್ಲ. ನಾವಾಗಿಯೇ ರಾಜಕೀಯಕ್ಕೆ ಬಂದೆವು. ಇದೊಂದು ವೃತ್ತಿಯೂ ಅಲ್ಲ. ರಾಜಕೀಯ ಎಂಬುದು ಪ್ರವೃತ್ತಿ, ನಾನು ವೃತ್ತಿಯಲ್ಲಿ ವಕೀಲ, ಹಾಗೆಂದು ರಾಜಕೀಯಕ್ಕೆ ಬಂದ ಮೇಲೆ ತತ್ವ ಸಿದ್ದಾಂತ ಇರಬೇಕು. ಅದಕ್ಕೆ ಬದ್ದರಾಗಿರಬೇಕು. ನಾನು ಸಂವಿಧಾನವನ್ನು ನಂಬುತ್ತೇನೆ. ಎಲ್ಲ ಜನರಿಗೂ ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುದು ನನ್ನ ಆಶಯ ಎಂದು ಸಿದ್ದರಾಮಯ್ಯ ಹೇಳಿದರು.ಇದನ್ನೂ ಓದಿ : ಮೈತ್ರಿ ಬಿಕ್ಕಟ್ಟಿನ ನಡುವೆಯೂ ಸಿದ್ದರಾಮಯ್ಯ ಕ್ಷೇತ್ರ ಬದಾಮಿಯಲ್ಲಿ ಆಡಳಿತಕ್ಕೆ ಮೇಜರ್​ ಸರ್ಜರಿ!

ಬಿಜೆಪಿಯವರು ಅತೃಪ್ತ ಶಾಸಕರ ರಾಜೀನಾಮೆಗೂ  ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಯಾಕೆ ಬಹಿರಂಗವಾಗಿ ಬಿಜೆಪಿಯವರೇ ಕುದುರೆ ವ್ಯಾಪಾರ ಮಾಡುತ್ತಿದ್ದಾರೆಂಬುದು ಎಲ್ಲರಿಗೂ ಗೊತ್ತು.  ಬಹಿರಂಗವಾಗಿ ಹೇಳಿಬಿಡಿ. ಕುದುರೆ ವ್ಯಾಪಾರದ ಮೂಲಕ ನೀವು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಯತ್ನಿಸಿದ್ದೀರಿ. ನಿಮ್ಮನ್ನ ಜನ ಕ್ಷಮಿಸಲ್ಲ. ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದು ಬಿಜೆಪಿಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

First published:July 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ