ಬಿಜೆಪಿಗೆ ಬಹುಮತ ಇಲ್ಲದಿದ್ದರೂ ವಾಮಮಾರ್ಗದಿಂದ ಅಧಿಕಾರ ಹಿಡಿದಿದೆ; ಮಲ್ಲಿಕಾರ್ಜುನ ಖರ್ಗೆ ಕಿಡಿ

ಮುಂದಿನ ದಿನಗಳಲ್ಲಿ ಜನರೇ ಬಿಜೆಪಿಗೆ ಪಾಠ ಕಲಿಸುತ್ತಾರೆ. ರಮೇಶ್ ಕುಮಾರ್ ಅವರು ಶಾಸಕರನ್ನು ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ. ಚುನಾವಣೆ ಸಂದರ್ಭ ಬರಲಿ ನೋಡೋಣ. ಮೈತ್ರಿ ಮುಂದೆ ಏನಾಗುತ್ತೆ ನೋಡೋಣ ಎಂದು ಹೇಳಿದರು.

HR Ramesh | news18
Updated:July 29, 2019, 10:30 PM IST
ಬಿಜೆಪಿಗೆ ಬಹುಮತ ಇಲ್ಲದಿದ್ದರೂ ವಾಮಮಾರ್ಗದಿಂದ ಅಧಿಕಾರ ಹಿಡಿದಿದೆ; ಮಲ್ಲಿಕಾರ್ಜುನ ಖರ್ಗೆ ಕಿಡಿ
ಮಲ್ಲಿಕಾರ್ಜುನ ಖರ್ಗೆ
  • News18
  • Last Updated: July 29, 2019, 10:30 PM IST
  • Share this:
ಬೆಂಗಳೂರು: 14 ತಿಂಗಳ ಪ್ರಯತ್ನ ಮಾಡಿ, ಇಂದು ಬಿಜೆಪಿ ವಾಮಮಾರ್ಗದಿಂದ ಸರ್ಕಾರ ರಚಿಸಿ, ಅಧಿಕಾರ ಹಿಡಿದಿದೆ. ಅನೇಕ ಕಾಂಗ್ರೆಸ್ ಶಾಸಕರನ್ನು ಮುಂಬೈನಲ್ಲಿ ಇಟ್ಟು ಸರ್ಕಾರ ಮಾಡಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಲ್ಲ, ಇದು ಅನ್ಯಾಯ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಇಲ್ಲದೆ ವಾಮಮಾರ್ಗದಿಂದ ಬಹುಮತ ಗಳಿಸಿ ಸರ್ಕಾರ ಮಾಡಿದ್ದೀರಿ. ಇದೇ ರೀತಿ ಗೋವಾ, ಮಣಿಪುರ, ಅರುಣಾಚಲ, ಉತ್ತರಾಖಂಡ್​ನಲ್ಲಿ ಅಧಿಕಾರ ಹಿಡಿದಿರಿ. ಒಂದಲ್ಲ ಎಷ್ಟು ರಾಜ್ಯಗಳಲ್ಲಿ ಹೀಗೆ ಮಾಡಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹನೆ ಇರಬೇಕಲ್ಲ, ಪಕ್ಷಗಳೇ ಇರದೇ ಹೋದರೆ ಹೇಗೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೇ ಪಕ್ಷ ಆಡಳಿತ ನಡೆಸೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿ, ಇದರಿಂದ ಪ್ರಜಾಪ್ರಭುತ್ವಕ್ಕೆ ಒಂದು ದೊಡ್ಡ ಹೊಡೆತ ಬಿದ್ದಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಇದನ್ನು ಓದಿ: ಬಿಎಸ್​ವೈ ನೂತನ ಸರ್ಕಾರದಿಂದ ಮುಂದುವರೆದ ತಡೆ ಆದೇಶ ಪರ್ವ; ವಿವಿ, ನಿಗಮ, ಮಂಡಳಿ ನಾಮನಿರ್ದೇಶನಗಳಿಗೆ ತಡೆ

ಮುಂದಿನ ದಿನಗಳಲ್ಲಿ ಜನರೇ ಬಿಜೆಪಿಗೆ ಪಾಠ ಕಲಿಸುತ್ತಾರೆ. ರಮೇಶ್ ಕುಮಾರ್ ಅವರು ಶಾಸಕರನ್ನು ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ. ಚುನಾವಣೆ ಸಂದರ್ಭ ಬರಲಿ ನೋಡೋಣ. ಮೈತ್ರಿ ಮುಂದೆ ಏನಾಗುತ್ತೆ ನೋಡೋಣ ಎಂದು ಹೇಳಿದರು.

First published:July 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ