ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆ ಬೆನ್ನಲ್ಲೇ ಬಂಡಾಯದ ಬಿಸಿ


Updated:April 16, 2018, 7:40 PM IST
ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆ ಬೆನ್ನಲ್ಲೇ ಬಂಡಾಯದ ಬಿಸಿ

Updated: April 16, 2018, 7:40 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಏ.16): ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಬೆನ್ನಲ್ಲೇ  ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್ ಸಿಗದ ಆಕಾಂಕ್ಷಿಗಳು ಪಕ್ಷದ ವಿರುದ್ಧ ಸಿಡಿದೆದಿದ್ದಾರೆ. ಅರಕಲಗೂಡು ಕ್ಷೇತ್ರಕ್ಕೆ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿಗೆ ಟಿಕೇಟ್ ಸಿಗದ ಹಿನ್ನೆಲೆ ಅರಕಲಗೂಡಿನಲ್ಲಿ ಅಸಮಾಧಾನ ಭುಗಿಲೆದ್ದಿದೆ. ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಯೋಗಾರಮೇಶ್​ಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನ ಜೋರಾಗಿದೆ.

ಹೀಗಾಗಿ, ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ ಕಾರ್ಯಕರ್ತರ ಜೊತೆ ಗೌಪ್ಯ ಸಭೆ ನಡೆಸುತ್ತಿದ್ದಾರೆ. ನಿವೃತ್ತ ಅರಕಲಗೂಡು ಕ್ಷೇತ್ರದಲ್ಲಿ ಒಕ್ಕಲಿಗರನ್ನು ಬಿಟ್ಟರೆ ಕುರುಬ ಮತಗಳೇ ನಿರ್ಣಾಯಕ. 60 ಸಾವಿರ ಕುರುಬ ಮತಗಳನ್ನೊಂದಿರುವ ಕ್ಷೇತ್ರವಾಗಿದ್ದು, ಕುರುಬ ಸಮಾಜದಿಂದಲೂ ಅರಕಲಗೂಡಿನಲ್ಲಿ ಸಭೆ ನಡೆಸಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಐದಾರು ಕೋಟಿ ಖರ್ಚು ಮಾಡಿದ್ದೇನೆ: ಕೊತ್ತೂರು ಹನುಮಂತರಾಯಪ್ಪ ಅಳಲು

ಪಾವಗಡ ಟಿಕೆಟ್ ಆಕಾಂಕ್ಷಿಯಾಗಿದ್ದ ಕೊತ್ತೂರು ಹನುಮಂತರಾಯಪ್ಪ‌ ಸಹ . ಮಾಜಿ ಸಂಸದ ಜಿ.ಎಸ್. ಬಸವರಾಜ್ ಹಾಗೂ ಪಾವಗಡ ಸ್ಥಳೀಯ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ನಾನು ಈಗಾಗಲೇ ಐದಾರು ಕೋಟಿ ರೂ.‌ಖರ್ಚು ಮಾಡಿದ್ದೇನೆ. ಸ್ಥಳೀಯ ಮುಖಂಡರು ಪಕ್ಷಕ್ಕಾಗಿ ದುಡಿಯುತ್ತಾರೆ ಎಂದು ಹಣ ಕೊಟ್ಟಿದ್ದೀನಿ. ಆದರೆ, ಈಗ ಬಲರಾಮ್​ರನ್ನ ಕಾಂಗ್ರೆಸ್​ನಿಂದ ತಂದು ಟಿಕೆಟ್ ಕೊಡಿಸಲು ಅಣಿಯಾಗಿದ್ದಾರೆ. ಹಾಗಾದರೆ, ನಾನು ಹಣ ಖರ್ಚು ಮಾಡಿದ್ದು ಯಾಕೆ?

ಹಣ ಖರ್ಚು ಮಾಡಿದ್ದಕ್ಕೆ ನನ್ನ ಬಳಿ ಎಲ್ಲ ದಾಖಲೆಗಳಿವೆ. ಮಾಜಿ ಸಂಸದ ಜಿ.ಎಸ್.‌ಬಸವರಾಜ್ ಹಾಗೂ ಸ್ಥಳೀಯ ಕೆಲ ಮುಖಂಡರು‌ ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
Loading...

ಹೈಕಮಾಂಡ್ ಹಾಗೂ ಯಡಿಯೂರಪ್ಪನವರ ಮೇಲೆ ನನಗೆ ಈಗಲೂ ವಿಶ್ವಾಸವಿದೆ. ಆದರೆ,  ಟಿಕೆಟ್ ನೀಡದೆ ಹೋದರೆ ನಾನು ಮುಂದೆ ಏನು ಮಾಡಬೇಕು‌ ನಿರ್ಧಾರ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವತ್ತು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ  ಕರಾಳ ದಿನ

ಇತ್ತ, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ ನಾಗರಾಜುಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ  ಮಾಜಿ ಮೇಯರ್ ಹರೀಶ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಇವತ್ತು ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರಕ್ಕೆ  ಕರಾಳ ದಿನ. ಪಕ್ಷ ಮುಖ್ಯ ಎನ್ನುವುದಾಗಿ ನಮ್ಮ.ಪಕ್ಷ ಹೇಳಿ ಕೊಟ್ಟಿತ್ತು. ನೆ.ಲ. ನರೇಂದ್ರ ಬಾಬು ಅವರನ್ನು ನಾವೇ ಪಕ್ಷಕ್ಕೆ ಕರೆದುಕೊಂಡು ಬಂದಿದ್ದೆವು. ನನಗೆ ಟಿಕೇಟ್ ಬೇಡಾ ಅಂತ ಹೇಳಿ ಕೆಲಸ ಮಾಡುತ್ತೇನೆ ಎಂದು ಪಕ್ಷಕ್ಕೆ ಬಂದರು. ನಾನು ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಮಂಡಲದ ತೀರ್ಮಾನಕ್ಕೆ ಬೆಲೆ ಕೊಟ್ಟು ನಾನು ನನ್ನ ಟಿಕೇಟ್ ತ್ಯಾಗ ಮಾಡಿದ್ದೇನೆ. ಬಿಜೆಪಿ ಪಕ್ಷ ಗೆಲ್ಲ ಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ಸ್ಕ್ರೀನಿಂಗ್ ಕಮಿಟಿಯಲ್ಲಿ ನರೇಂದ್ರ ಬಾಬು ಹೆಸರೇ ಇರಲಿಲ್ಲ. ಇವಾಗ ಇದ್ದಕ್ಕಿದ್ದಂತೆ ನರೇಂದ್ರ ಬಾಬು ಅವರಿಗೆ ಟಿಕೇಟ್ ನೀಡಿ ಕುತಂತ್ರ ರಾಜಕೀಯ ಮಾಡಿದ್ದಾರೆ ಎಂದು ಹರೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆ.ಲ.ನರೇಂದ್ರ ಬಾಬು ನಮ್ಮ ಕತ್ತು ಕುಯ್ದಿದ್ದಾರೆ. ರಾಜ್ಯ ನಾಯಕರು ೩೦೦೦ ಬಿಜೆಪಿ ಕಾರ್ಯಕರ್ತರ ಎದೆಗೆ ಚೂರಿ ಹಾಕಿದ್ದಾರೆ. ಮಾಜಿ ಉಪಮೇಯರ್ ಎಸ್ ಹರೀಶ್ ನನಗಾಗಿ ತಮ್ಮ ಸ್ಥಾನ ತ್ಯಾಗ ಮಾಡಿದ್ದರು. ಆದರೆ, ನರೇಂದ್ರಬಾಬು ಕುತಂತ್ರ ಮಾಡಿದ್ದಾರೆ. ನರೇಂದ್ರ ಬಾಬುವನ್ನು ಬಿಜೆಪಿಗೆ ಕರೆತಂದಿದ್ದು ನಾನೇ. ಆದರೆ, ಹೆಣ್ಣು ನೋಡೋ ಅಪ್ಪ ಅಂದ್ರೆ ತಾನೇ ಮದುವೆಯಾಗಿದ್ದಾನೆ ನರೇಂದ್ರ ಬಾಬು. ಹೀಗಾಗಿ, ನನ್ನ ಬಿಜೆಪಿ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಂ. ನಾಗರಾಜು ಹೇಳಿದ್ದಾರೆ.
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ