ರಾಮನಗರ: ಕೇಂದ್ರ ಚುನಾವಣಾ ಆಯೋಗ (Election Commission) ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಘೋಷಣೆ ಮಾಡುತ್ತಿದ್ದಂತೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲು ತಂತ್ರ-ಪ್ರತಿತಂತ್ರ ರೂಪಿಸುವಲ್ಲಿ ಬ್ಯುಸಿಯಾಗಿದೆ. ಪ್ರಮುಖ ನಾಯಕರು ರಾಜ್ಯದ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ತಮ್ಮ ತಮ್ಮ ಪಕ್ಷಗಳ ಪರ ಪ್ರಚಾರ ನಡೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwar) ಅವರು ಮಾತ್ರ ಪತ್ನಿಯೊಂದಿಗೆ ರೀಲ್ಸ್ (Reels) ಮಾಡಲು ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಥೇಟ್ ಸಿನಿಮಾ ಶೈಲಿಯಲ್ಲೇ ಪತ್ನಿ ಶೀಲಾ ಯೋಗೇಶ್ವರ್ ಜೊತೆಗೆ ಮಾಜಿ ಸಚಿವರು ರೀಲ್ಸ್ ಮಾಡಿದ್ದಾರೆ. ಇತ್ತ ಸಿ.ಪಿ ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ (Channapatna) ಸ್ವಾಭಿಮಾನಿ ಸಂಕಲ್ಪ ನಡಿಗೆಯನ್ನು ಕೈಗೊಂಡಿದ್ದಾರೆ. ಇದರ ನಡುವೆಯೇ ಪತ್ನಿ ಜೊತೆಗೆ ಜಾಲಿ ಮೂಡ್ನಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ರೀಲ್ ವಿಡಿಯೋ ಫುಲ್ ವೈರಲ್ ಆಗ್ತಿದೆ.
ಏನಿದು ಸ್ವಾಭಿಮಾನಿ ಸಂಕಲ್ಪ ನಡಿಗೆ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರ ಎದುರು ಸಿ.ಪಿ ಯೋಗೇಶ್ವರ್ ಸೋಲುಂಡಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರ ಮನೆ ಮನೆಗೂ ಭೇಟಿ ನೀಡಲು ಯೋಗೇಶ್ವರ್ ಅವರು ಸ್ವಾಭಿಮಾನಿ ಸಂಕಲ್ಪ ನಡಿಗೆ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ: Transport Employees: ಹಬ್ಬದ ದಿನದಂದೇ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ವೇತನ ಹೆಚ್ಚಿಸಿ ಆದೇಶ
ಈ ವೇಳೆ ಕಳೆದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದು ಏಕೆ? ನಾನು ಮಾಡಿದ ತಪ್ಪು ಏನು? ನೀವು ಗೆಲ್ಲಿಸಿದ ಅಭ್ಯರ್ಥಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರಾ ಎಂಬ ಪ್ರಶ್ನೆಗಳನ್ನು ಮತದಾರರ ಮುಂದಿಟ್ಟು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದೇ ವೇಳೆ ಈ ಬಾರಿಯ ಚುನಾವಣೆಯಲ್ಲಿ ಆರ್ಶಿವಾದ ನೀಡಿ ಎಂದು ಮನವಿ ಮಾಡ್ತಿದ್ದಾರೆ.
ಮಾಜಿ ಸಿಎಂ ಹೆಚ್ಡಿಕೆಗೆ ಸಿಪಿವೈ ಟಾಂಗ್
ಇನ್ನು, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಬಿಜೆಪಿ ಹೊಂದಾಣಿಕೆ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಯೋಗೇಶ್ವರ್ ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿಗೆ ಸ್ವಾಭಾವಿಕವಾಗಿ ಕೆರಳಿಸುತ್ತದೆ, ಕಸಿವಿಸಿ ಆಗುತ್ತಾರೆ. ಅದಕ್ಕಾಗಿ ಅವರು ಚಡಪಡಿಸುತ್ತಾರೆ. ಈ ಬಾರಿ ಯಾವುದೇ ಹೊಂದಾಣಿಕೆ ನಡೆಯಲ್ಲ.
ಆದರೆ ಈ ಬಾರಿಯೂ ಅದರ ನಿರೀಕ್ಷೆಯಲ್ಲಿ ಇದ್ದಾರೇನೋ? ಇಂತಹ ಮಾತುಗಳಿಂದ ಕಾಂಗ್ರೆಸ್ -ಜೆಡಿಎಸ್ ಗೆ ನಷ್ಟವಾಗಲಿದೆ. ಹಾಗಾಗಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ನೋಡೋಣಾ ಇನ್ನೆಷ್ಟು ದಿನ ಮಾತನಾಡುತ್ತಾರೆ. ಚನ್ನಪಟ್ಟಣದ ಸ್ವಾಭಿಮಾನಿ ಜನ ಕುಮಾರಸ್ವಾಮಿ ಅವರ ದುರಂಕಾರದ, ಏಕವಚನದ ಮಾತಿಗೆ ಉತ್ತರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ