DKS v/s Ramya: 'ಕೈ' ಕಲಹದಲ್ಲಿ 'ಕೇಸರಿ' ಎಂಟ್ರಿ! "ನೀನೇ ಸಾಕಿದ ಗಿಣಿ" ಅಂತ ರಮ್ಯಾ ವಿಚಾರಕ್ಕೆ ಡಿಕೆಶಿಗೆ ಟಾಂಗ್

ರಮ್ಯಾ ಹಾಗೂ ಡಿಕೆಶಿ ನಡುವಿನ ಕಲಹದಲ್ಲಿ ರಾಜ್ಯ ಬಿಜೆಪಿ (State BJP) ಎಂಟ್ರಿಯಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಬಿಜೆಪಿ, “ನೀನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ” ಅಂತ ಟ್ವೀಟ್ ಮಾಡಿ, ಡಿಕೆಶಿ ಕಾಲೆಳೆದಿದೆ.

ರಮ್ಯಾ ಹಾಗೂ ಡಿಕೆ ಶಿವಕುಮಾರ್

ರಮ್ಯಾ ಹಾಗೂ ಡಿಕೆ ಶಿವಕುಮಾರ್

  • Share this:
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಒಳ ಜಗಳ ಜೋರಾಗಿದೆ. ಮಾಜಿ ಸಂಸದೆ (Ex MP) ಹಾಗೂ ಕಾಂಗ್ರೆಸ್ ಯುವನಾಯಕಿ (Congress Youth Leader) ರಮ್ಯಾ (Ramya), ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಸರಣಿ ಟ್ವೀಟ್ (Tweet) ಮಾಡಿದ್ದ ರಮ್ಯಾ, “ನನ್ನ ವಿರುದ್ಧ ಟ್ರೋಲ್ (Troll) ಮಾಡೋದಕ್ಕೆ ಕೆಪಿಸಿಸಿ ಕಚೇರಿಯಿಂದಲೇ ಸೂಚನೆ ಹೋಗಿದೆ” ಅಂತ ನೇರಾನೇರ ಆರೋಪ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್, “ಎಲ್ಲೋ ಏನೋ ಮಿಸ್​ ಫೈರ್​” ಆಗಿದೆ ಎಂದಿದ್ದರು. ಇದೀಗ ರಮ್ಯಾ ಹಾಗೂ ಡಿಕೆಶಿ ನಡುವಿನ ಕಲಹದಲ್ಲಿ ರಾಜ್ಯ ಬಿಜೆಪಿ (State BJP) ಎಂಟ್ರಿಯಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಬಿಜೆಪಿ, “ನೀನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ” ಅಂತ ಟ್ವೀಟ್ ಮಾಡಿ, ಡಿಕೆಶಿ ಕಾಲೆಳೆದಿದೆ.

ರಮ್ಯಾ-ಡಿಕೆಶಿ ಕಲಹದಲ್ಲಿ ಬಿಜೆಪಿ ಎಂಟ್ರಿ

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ನಟಿ ರಮ್ಯಾ ನಡುವೆ ಫೈಟ್ ವಿಚಾರದಲ್ಲಿ ರಾಜ್ಯ ಬಿಜೆಪಿ ಎಂಟ್ರಿಯಾಗಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಡಿಕೆ ಶಿವಕುಮಾರ್ ಅವರ ಕಾಲೆಳೆದಿದೆ. ಅಸಹಾಯಕ ಡಿಕೆಶಿ ಅವರೇ, ನೀವೇ ಬೆಳೆಸಿದ Social Media Encounter Specialist ರಮ್ಯಾ ನೇತೃತ್ವದಲ್ಲಿ ಮತ್ತಷ್ಟು ನಕಲಿ ಖಾತೆ ಜನಿಸಲಿದ್ದು, ನಿಮ್ಮದೇ ಮೂಗಿನ ಕೆಳಗೆ ನಿಮ್ಮ ವಿರುದ್ಧವೇ #ToolKit ಹಣೆಯಲಾಗುತ್ತಿದೆ ಅಂತ ಕಾಲೆಳೆದಿದೆ.

“ಇದರ ಹಿಂದೆ ಮೀರ್ ಸಾದಿಕ್ ಕೈವಾಡವಿದೆ”

ಇದರ ಹಿಂದೆ ಮೀರ್‌ಸಾದಿಕ್‌ ಕೈವಾಡವಿದೆ, ಎಚ್ಚರವಿರಲಿ ಎಂದಿರುವ ಬಿಜೆಪಿ, ಮಾನ್ಯ ಡಿಕೆಶಿ ಅವರೇ, ನಿಮ್ಮ ಹೇಳಿಕೆಯನ್ನು ಪಕ್ಷದ ವೇದಿಕೆಯಲ್ಲಿ ಪ್ರಶ್ನಿಸುತ್ತೇನೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ. ದೆಹಲಿ ವರಿಷ್ಠರ ಮುಂದೆಯೇ ನಿಮ್ಮ ನಾಯಕತ್ವದ ಪ್ರಶ್ನೆಗೆ ವೇದಿಕೆ ಸಿದ್ದವಾಗುತ್ತಿದೆಯೇ. ಚುನಾವಣೆಯ ಹೊಸ್ತಿಲಲ್ಲಿ  ಡಿಕೆ ಶಿವಕುಮಾರ್ ಜೊತೆ ಎಷ್ಟು ಮಂದಿ ನಿಲ್ಲಬಹುದು ಎಂದು ಕಾಂಗ್ರೆಸಿಗರು ಈಗಲೇ ನಿರ್ಧರಿಸಿರಬಹುದು ಅಂತ ಟೀಕಿಸಿದೆ.

ಇದನ್ನೂ ಓದಿ: Ramya Divyaspandana: 'ಶಿವ' ಶಿವಾ.. 'ಪದ್ಮಾವತಿ' Troll ಮಾಡ್ತಿದ್ಯಂತೆ ಕಾಣದ 'ಕೈ'? ತಾವೇ ಖುದ್ದು ಸಾಕ್ಷಿ ಕೊಟ್ರು ರಮ್ಯಾ!

“ಡಿಕೆಶಿ ವಿರೋಧಿಗಳ ಸಾಲಿಗೆ ರಮ್ಯಾ”

ಮುಂದುವರೆದು ಟ್ವೀಟ್ ಮಾಡಿರುವ ಬಿಜೆಪಿ, ಮೀರ್‌ಸಾದಿಕ್‌ ಬಣದ ಜೊತೆಗೆ, ಅಸಹಾಯಕ ಡಿಕೆಶಿ ಅವರ ವಿರೋಧಿಗಳ ಸಾಲಿಗೆ ಈಗ ಮಾಜಿ ಸಂಸದೆ ರಮ್ಯಾ ಕೂಡಾ ಸೇರಿದ್ದಾರೆ. ಡಿಕೆಶಿ ಅವರೇ, ಸಹೋದರ ಡಿ.ಕೆ.ಸುರೇಶ್ ಅವರಾದರೂ ನಿಮ್ಮ ಜೊತೆ ನಿಲ್ಲಬಹುದೇ.? ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ, ನೀವು ನಿಜಕ್ಕೂ ಕೆಪಿಸಿಸಿ ಅಧ್ಯಕ್ಷರೇ? ಅಂತ ಖಾರವಾಗಿ ಪ್ರಶ್ನಿಸಿದೆ.



“ಕನಕಪುರ ಬಂಡೆ ಎಷ್ಟೊಂದು ಗಟ್ಟಿಯಾಗಿದೆ?”

ಇನ್ನು ಸಾರ್ವಜನಿಕ ಬದುಕಿನಿಂದ ಕಳೆದು ಹೋದವರೆಲ್ಲ ಈಗ ಬಂದು‌ ಕೆಪಿಸಿಸಿ ಅಧ್ಯಕ್ಷರಿಗೆ ಪಾಠ ಹೇಳುತ್ತಿರುವುದನ್ನು ನೋಡಿದರೆ, ಕನಕಪುರದ ಬಂಡೆ ಎಷ್ಟು ಗಟ್ಟಿ ಎಂದು ಯೋಚಿಸಬೇಕಲ್ಲವೇ? ಡಿಕೆಶಿ ಅವರನ್ನು ಅಧೀರರನ್ನಾಗಿಸುವ ಹಿಂದೆ ಮೀರ್‌ಸಾದಿಕ್‌ ತಂತ್ರವಿದೆಯೇ.? ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಉಗ್ರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುವಷ್ಟು ಡಿಕೆ ಶಿವಕುಮಾರ್ ಅಸಹಾಯಕರೇ? ಅಲ್ಪಸಂಖ್ಯಾತ ಸಲೀಂ ಅವರನ್ನು ಕಿತ್ತೊಗೆದು ಉಗ್ರಪ್ಪ ಜೊತೆ ಪತ್ರಿಕಾಗೋಷ್ಠಿ ಮಾಡುವ ಮೂಲಕ ಯಾವ ಸಂದೇಶ ನೀಡುತ್ತಿದ್ದೀರಿ? ನೀವೆಂತಹ ಬಂಡೆ, ಕಲ್ಲುಬಂಡೆಯೋ ಅಥವಾ ಟೊಳ್ಳು ಬಂಡೆಯೋ..? ಅಂತ ಪ್ರಶ್ನಿಸಲಾಗಿದೆ.

ಇದನ್ನೂ ಓದಿ: DKS v/s Ramya: ಎಲ್ಲೋ ಏನೋ ಮಿಸ್​ ಫೈರ್​ ಆಗಿದೆ ಎಂದ ಡಿಕೆಶಿ; ಕೆಸಿ ವೇಣುಗೋಪಾಲ್ ಮೊರೆ ಹೋದ ರಮ್ಯಾ

“ನೀನೇ ಸಾಕಿದಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ”

ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ" ಎಂದಿರುವ ಬಿಜೆಪಿ, ಇದು ಅಸಹಾಯಕ ಡಿಕೆಶಿ ಅವರ ಸದ್ಯದ ಸ್ಥಿತಿ. ಡಿಕೆಶಿ ಅವರೇ ಬೆಳೆಸಿದ ರಮ್ಯಾ ಈಗ ಡಿಕೆಶಿಗೆ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿ ಮಾತು ಹೇಳುತ್ತಿದ್ದಾರೆ. ರಮ್ಯಾ ಅವರನ್ನು ಭ್ರಷ್ಟಾಧ್ಯಕ್ಷರ ವಿರುದ್ಧ ಛೂಬಿಟ್ಟಿದ್ದು ಮೀರ್‌ಸಾದಿಕ್‌ ಅವರಿರಬಹುದೇ? ಅಂತಲೇ ಬಿಜೆಪಿ ವ್ಯಂಗ್ಯವಾಡಿದೆ.
Published by:Annappa Achari
First published: