ತೆಲಂಗಾಣದ ತಾಂಡೂರದಲ್ಲಿ ಬಿಎಸ್​ವೈ ರಣಕಹಳೆ; ಪರರಾಜ್ಯಕ್ಕೆ ಯಡಿಯೂರಪ್ಪ ಅಂಡ್ ಟೀಮ್ ಹೋಗಿದ್ಯಾಕೆ?

ಚಿಂಚೋಳಿಯಿಂದ 30-40 ಕಿಮೀ ದೂರದಲ್ಲಿರುವ ತೆಲಂಗಾಣದ ತಾಂಡೂರದಲ್ಲಿ 3 ಸಾವಿರದಷ್ಟು ವೀರಶೈವ ಸಮಾಜದವರಿದ್ದಾರೆ. ಇವರ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ನಾಯಕರು ಚುನಾವಣಾ ಪ್ರಚಾರ ಮಾಡಿದರು.

news18
Updated:May 15, 2019, 6:19 PM IST
ತೆಲಂಗಾಣದ ತಾಂಡೂರದಲ್ಲಿ ಬಿಎಸ್​ವೈ ರಣಕಹಳೆ; ಪರರಾಜ್ಯಕ್ಕೆ ಯಡಿಯೂರಪ್ಪ ಅಂಡ್ ಟೀಮ್ ಹೋಗಿದ್ಯಾಕೆ?
ತೆಲಂಗಾಣದ ತಾಂಡೂರದಲ್ಲಿ ಬಿಎಸ್​ವೈ
  • News18
  • Last Updated: May 15, 2019, 6:19 PM IST
  • Share this:
ಕಲಬುರ್ಗಿ(ಮೇ 15): ಎರಡು ವಿಧಾನಸಭಾ ಕ್ಷೇತ್ರಗಳ ಉಚುನಾವಣೆಯ ಬಿಸಿಯಲ್ಲಿರುವ ಬಿಜೆಪಿ ಮುಖಂಡರು ಇವತ್ತು ತೆಲಂಗಾಣ ರಾಜ್ಯದ ತಾಂಡೂರ ಗ್ರಾಮಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ಮಾಡಿದರು. ಉಪಚುನಾವಣೆ ಇರುವುದು ಚಿಂಚೋಳಿಯಲ್ಲಾದರೂ ಬಿಎಸ್​ವೈ ತೆಲಂಗಾಣದಲ್ಲಿ ಪ್ರಚಾರ ಮಾಡಲು ಕಾರಣವಿದೆ. ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರದಲ್ಲಿ 3 ಸಾವಿರಕ್ಕೂ ಹೆಚ್ಚು ವೀರಶೈವ ಸಮುದಾಯದವರಿದ್ದಾರೆ. ಇವರು ಚಿಂಚೋಳಿಯಿಂದ 20-30 ಕಿಮೀ ದೂರದಲ್ಲಿರುವ ತಾಂಡೋರಕ್ಕೆ ಉದ್ಯೋಗ ಅರಸಿಕೊಂಡು ಹೋಗಿ ನೆಲಸಿರುವವರು. ಆದರೆ, ಇವರ ಮತ ಹಕ್ಕು ಚಿಂಚೋಳಿಯಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ, ಅರವಿಂದ್ ಲಿಂಬಾವಳಿ, ಉಮೇಶ್ ಜಾಧವ್ ಮೊದಲಾದ ಬಿಜೆಪಿ ನಾಯಕರು ಇವತ್ತು ತಾಂಡೂರಕ್ಕೆ ಹೋಗಿ ಚುನಾವಣಾ ಪ್ರಚಾರ ನಡೆಸಿದರು.

ಪ್ರಚಾರ ಶುರು ಮಾಡುವ ಮುನ್ನ ಯಡಿಯೂರಪ್ಪ ಅವರು ತಾಂಡೂರದ ಶ್ರೀ ಭಾವಿಗಿ ಭದ್ರೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಈ ವೇಳೆ ಪಟಾಕಿ ಸಿಡಿಸಿ ತಾಂಡೂರಕ್ಕೆ ಯಡಿಯೂರಪ್ಪ ಅವರನ್ನು ಬರಮಾಡಿಕೊಂಡ ವೀರಶೈವ ಸಮಾಜದ ಮುಖಂಡರು ಮಾಜಿ ಮುಖ್ಯಮಂತ್ರಿಗೆ ಸನ್ಮಾನ್ ಕೂಡ ಮಾಡಿದರು.

ಇದನ್ನೂ ಓದಿ: ಶೋಭಕ್ಕ ಶುಭ ಹಾರೈಸಿದ್ದು ಕೇಳಿ ಸಂತೋಷವಾಯಿತು, ಅಕ್ಕ ಏನು ಹೇಳಿದರೂ ಶಿಸ್ತಿನಿಂದ ಪಾಲಿಸುತ್ತೇನೆ: ಡಿಕೆಶಿ

ಇಲ್ಲಿಯ 3 ಸಾವಿರಕ್ಕೂ ಹೆಚ್ಚು ಮತದಾರರ ಮೇಲೆ ಕಣ್ಣಿಟ್ಟಿರುವ ಯಡಿಯೂರಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಗೆಲ್ಲಲು ಮಹತ್ವದ ಕಾರಣ ಇರುವುದನ್ನು ತಿಳಿಸಿದರು. ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ್ ಜಾಧವ್ ಗೆದ್ದ ಮೇಲೆ ರಾಜ್ಯದಲ್ಲಿ ಅಮೂಲಗ್ರ ಬದಲಾವಣೆಯಾಗಲಿದೆ ಎಂದು ಬಿಎಸ್​ವೈ ವಿಶ್ವಾಸ ವ್ಯಕ್ತಪಡಿಸಿದರು.

ಮೇ 23ರ ನಂತರ ಸರಕಾರ ಬದಲಾವಣೆಯಾಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಆಂತರಿಕ ಕಚ್ಚಾಟದಿಂದ ಸಮ್ಮಿಶ್ರ ಸರಕಾರ ಪತನವಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಭವಿಷ್ಯ ನುಡಿದರು.

ಇದನ್ನೂ ಓದಿ: ಬಿಜೆಪಿ ನಾಯಕರ ಬೆನ್ನಲ್ಲೇ ರಮೇಶ್​​ ಜಾರಕಿಹೊಳಿ ಭೇಟಿಯಾದ ಕುಮಟಳ್ಳಿ: ಆಪರೇಷನ್​​ ಕಮಲದ ಭೀತಿಯಲ್ಲಿ ಮತ್ತೆ ಕಾಂಗ್ರೆಸ್​​?

ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಸಿಎಂ ಆಗಬೇಕಿತ್ತು ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಕೇವಲ ಈ ರೀತಿ ಹೇಳಿಕೆ ನೀಡುವ ಬದಲು ಖುದ್ದು ರಾಜೀನಾಮೆ ನೀಡಿ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದು ಹೆಚ್​ಡಿಕೆಗೆ ಸವಾಲು ಹಾಕಿದರು.ಇದೇ ವೇಳೆ, ಭಾವಿಗಿ ಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಈ ಸಭೆಯಲ್ಲಿ ವೀರಶೈವ ಮುಖಂಡರು ತಮ್ಮ ಸಮಾಜವನ್ನು ಓಬಿಸಿ ವರ್ಗಕ್ಕೆ ಸೇರಿಸುವಂತೆ ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಯಡಿಯೂರಪ್ಪ, ಕರ್ನಾಟಕದಲ್ಲೂ ವೀರಶೈವರನ್ನು ಓಬಿಸಿಗೆ ಸೇರಿಸುವ ಕುರಿತು ಬೇಡಿಕೆಗಳಿವೆ. ತಮ್ಮ ಸರಕಾರ ಬಂದಾಗ ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

(ವರದಿ: ಮಹೇಶ್ ವಿ. ಶಟಗಾರ)

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'
First published: May 15, 2019, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading