ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನೆಡೆ; ತೋಂಟದಾರ್ಯ ಶ್ರೀಗಳ ಆಕ್ರೋಶ

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಯಾವತ್ತೂ ನಿಲ್ಲಲ್ಲ. ಪ್ರತಿ ಗ್ರಾಮಗಳಲ್ಲೂ ಲಿಂಗಾಯತ ಧರ್ಮದ ಅರಿವು ಮೂಡಿಸುವ ಕೆಲಸ ನಡೆದಿದೆ. ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

Latha CG | news18
Updated:February 11, 2019, 3:37 PM IST
ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನೆಡೆ; ತೋಂಟದಾರ್ಯ ಶ್ರೀಗಳ ಆಕ್ರೋಶ
ಡಾ.ಸಿದ್ದರಾಮ ಶ್ರೀಗಳು
Latha CG | news18
Updated: February 11, 2019, 3:37 PM IST
ಗದಗ,(ಫೆ.11): ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಇನ್ನೂ ನಿಂತಿಲ್ಲ. ಅನೇಕ ಹೋರಾಟಗಳು ನಡೆಯುತ್ತಲೇ ಇವೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಹೋರಾಟದ ಕಾವು ಜೋರಾಗಿತ್ತು. ಹಾಗಾಗಿ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರತ್ಯೇಕ ಲಿಂಗಾಯತ ಧರ್ಮದ ಸಂಚು ರೂಪಿಸಿದ್ದವು ಎಂಬ ಆರೋಪಗಳು ಕೇಳಿಬಂದಿದ್ದವು.

ಇದೀಗ  ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಗಿದೆ ಎಂದು ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ದರಾಮ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಗದುಗಿನ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆಯುತ್ತಿರುವ ಲಿಂಗಾಯತ ಧರ್ಮ ಮತ್ತು ಚಿಂತನಾಗೋಷ್ಠಿ ಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಲಿಂಗಾಯತರು ಹಿಂದೂ ಧರ್ಮದಿಂದ ಹೊರಗೆ ಹೋಗಬಾರದು ಎನ್ನುವ ನಿಟ್ಟಿನಲ್ಲೇ ಪ್ರಯತ್ನ ಮಾಡುತ್ತಾರೆ. ಪ್ರತ್ಯೇಕ ಲಿಂಗಾಯತ ಧರ್ಮದಿಂದ ಬಿಜೆಪಿಗೆ ಹಾನಿಯಿಲ್ಲ ಅದನ್ನು ಅವರು ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

ಆಪರೇಷನ್​ ಕಮಲ ಆರೋಪ; ಬಿಎಸ್​ವೈ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲು

ಜೈನರು ಮತ್ತು ಬೌದ್ಧರು ಮೊದಲು ಹಿಂದೂಗಳಾಗಿದ್ದರು. ಅವರೀಗ ಹಿಂದೂ ಧರ್ಮದಿಂದ ಹೊರಗೆ ಹೋಗಿದ್ದಾರೆ. ಅದರಿಂದ ಹಿಂದೂ ಧರ್ಮಕ್ಕೆ ಏನು ಹಾನಿಯಾಗಿದೆ ಎಂದು ಪ್ರಶ್ನಿಸಿದರು. ಪ್ರತ್ಯೇಕ ಧರ್ಮದಿಂದ ರಾಷ್ಟ್ರದ ಅಖಂಡತೆಗೆ, ಏಕತೆಗೆ ಹಾನಿಯಾಗಲ್ಲ. ಲಿಂಗಾಯತ ಧರ್ಮಕ್ಕೆ ಹೆಚ್ಚಿನ ಆಧಾರಗಳು ಇವೆ. ಲಿಂಗಾಯತರು ದೇಶ ಪ್ರೇಮಿಗಳು ದೇಶ ದ್ರೋಹಿಗಳಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಯಾವತ್ತೂ ನಿಲ್ಲಲ್ಲ. ಪ್ರತಿ ಗ್ರಾಮಗಳಲ್ಲೂ ಲಿಂಗಾಯತ ಧರ್ಮದ ಅರಿವು ಮೂಡಿಸುವ ಕೆಲಸ ನಡೆದಿದೆ. ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿತ್ತು. ನಿವೃತ್ತ ನ್ಯಾ. ನಾಗಮೋಹನದಾಸ್ ಸಮಿತಿ ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಅಧ್ಯಯನ ನಡೆಸಿತ್ತು. ಆದರೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಬಳಿಕ ಮಾನ್ಯತೆ ಮಾನ್ಯತೆ ನೀಡುವಂತೆ ಅನೇಕ ಹೋರಾಟಗಳು ನಡೆದಿದ್ದವು.
Loading...

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...