ಮಂತ್ರಿಗಿರಿ ಸಿಗದಿದ್ದಕ್ಕೆ ಭುಗಿಲೆದ್ದ ಅಸಮಾಧಾನ; ಉಮೇಶ್​ ಕತ್ತಿ ನೇತೃತ್ವದಲ್ಲಿ ನಾಳೆ 20 ಶಾಸಕರಿಂದ ಸಭೆ?

ಅಸಮಾಧಾನಿತ ಶಾಸಕರ ಸಾಲಿನಲ್ಲಿ ಉಮೇಶ್ ಕತ್ತಿ, ರೇಣುಕಾಚಾರ್ಯ, ರಾಜುಗೌಡ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್​. ಅಂಗಾರ, ಮುರುಗೇಶ್ ನಿರಾಣಿ ಸೇರಿ ಸುಮಾರು 20 ಶಾಸಕರಿದ್ದಾರೆ. 

HR Ramesh | news18-kannada
Updated:August 20, 2019, 3:55 PM IST
ಮಂತ್ರಿಗಿರಿ ಸಿಗದಿದ್ದಕ್ಕೆ ಭುಗಿಲೆದ್ದ ಅಸಮಾಧಾನ; ಉಮೇಶ್​ ಕತ್ತಿ ನೇತೃತ್ವದಲ್ಲಿ ನಾಳೆ 20 ಶಾಸಕರಿಂದ ಸಭೆ?
ರೇಣುಕಾಚಾರ್ಯ, ಉಮೇಶ್​ ಕತ್ತಿ, ಮುರುಗೇಶ್​ ನಿರಾಣಿ, ಅಂಗಾರಕ
  • Share this:
ಬೆಂಗಳೂರು: ಬಹುನಿರೀಕ್ಷೆಯ ಬಿಜೆಪಿ ಸರ್ಕಾರ ಸಚಿವ ಸಂಪುಟ ರಚನೆಯಾಗಿದೆ. ಆದರೆ, ಸಂಪುಟ ರಚನೆ ಬೆನ್ನಲ್ಲೇ ಬಿಜೆಪಿಗೆ ಬಂಡಾಯದ ಕಾವು ಎದುರಾಗಿದೆ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಲವರಿಗೆ ಮಂತ್ರಿಗಿರಿ ತಪ್ಪಿಹೋಗಿದೆ. ಹೀಗಾಗಿ ಅಸಮಾಧಾನಗೊಂಡಿರುವ ಶಾಸಕರು ನಾಳೆ ಸಭೆ ನಡೆಸುವ ಸಾಧ್ಯತೆ ಇದೆ. ಬಿಜೆಪಿಯ ಹಿರಿಯ ಮುಖಂಡ ಉಮೇಶ್ ಕತ್ತಿ‌ ನೇತೃತ್ವದಲ್ಲೇ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಳೆಯೊಳಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಅಸಮಾಧಾನಿತ ಶಾಸಕರು ತೀರ್ಮಾನಿಸಿದ್ದಾರೆ. ಒಂದು ವೇಳೆ ಮಾತುಕತೆ ಫಲಿಸದೆ ಹೋದರೆ ಬಂಡಾಯ ಏಳುವ ಸಾಧ್ಯತೆ ಇದೆ.

ಇದನ್ನು ಓದಿ: ಯಡಿಯೂರಪ್ಪ ಸಂಪುಟದಲ್ಲಿ ಹೈದ್ರಾಬಾದ್, ಉತ್ತರ ಕರ್ನಾಟಕಕ್ಕೆ ಅನ್ಯಾಯ ಆರೋಪ; ಬೂದಿ ಮುಚ್ಚಿದ ಕೆಂಡದಂತಿರುವ ಭಿನ್ನಮತ!

ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಕ್ಕೆ ಹೋಗುವ ಯೋಚನೆ ಸದ್ಯಕ್ಕಿಲ್ಲ. ಆದರೆ ಪಕ್ಷದಲ್ಲಿದ್ದುಕೊಂಡೇ ಮೌನಕ್ಕೆ ಶರಣಾಗುವ ಮೂಲಕ ಬಂಡಾಯ ಸಾರುವುದು. ತಟಸ್ಥ ನೀತಿ ಅನುಸರಿಸಿ ಸರ್ಕಾರಕ್ಕೆ ಮುಜುಗರ ಸೃಷ್ಟಿಸಲು ಅತೃಪ್ತರು ಉಪಾಯ ರೂಪಿಸಿದ್ದಾರೆ. ಯಡಿಯೂರಪ್ಪನವರ ಸ್ಪಂದನೆಯ ಮೇಲೆ ಮುಂದೇನು ಮಾಡಬಹುದು ಎಂದು ನಿರ್ಧರಿಸಿದ್ದಾರೆ.

ಅಸಮಾಧಾನಿತ ಶಾಸಕರ ಸಾಲಿನಲ್ಲಿ ಉಮೇಶ್ ಕತ್ತಿ, ರೇಣುಕಾಚಾರ್ಯ, ರಾಜುಗೌಡ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಎಸ್​. ಅಂಗಾರ, ಮುರುಗೇಶ್ ನಿರಾಣಿ ಸೇರಿ ಸುಮಾರು 20 ಶಾಸಕರಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading