ಶ್ರೀರಾಮುಲು ಗೆ ಡಿಸಿಎಂ ಸ್ಥಾನ ನಿರಾಕರಣೆ ವಿವಾದ; ರಾಜ್ಯದಾದ್ಯಂತ ಇನ್ನೂ ನಿಂತಿಲ್ಲ ವಾಲ್ಮೀಕಿ ಸಮಾಜದ ಪ್ರತಿಭಟನೆ!

ಇಂದು ಕೊಪ್ಪಳದಲ್ಲಿ ರಸ್ತೆಗಿಳಿದಿರುವ ಅಖಿಲ ಭಾರತ ವಾಲ್ಮೀಕಿ ಸಮುದಾಯದ ಜನ ರಾಜ್ಯ ಸರ್ಕಾರ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ನಗರದಲ್ಲಿ ವಾಲ್ಮೀಕಿ ಹಾಗೂ ಶ್ರೀರಾಮುಲು ಪೋಟೋಗಳನ್ನು ಹಿಡಿದು ಮೆರವಣಿಗೆ ನಡೆಸಿರುವ ವಾಲ್ಮೀಕಿ ಸಮಾಜದವರು “ಕೊಟ್ಟ ಮಾತು ತಪ್ಪಿದ ಬಿಜೆಪಿ, ವಚನ ಭ್ರಷ್ಟ ಯಡಿಯೂರಪ್ಪನಿಗೆ ಧಿಕ್ಕಾರ” ಎಂದು ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

MAshok Kumar | news18-kannada
Updated:August 29, 2019, 4:13 PM IST
ಶ್ರೀರಾಮುಲು ಗೆ ಡಿಸಿಎಂ ಸ್ಥಾನ ನಿರಾಕರಣೆ ವಿವಾದ; ರಾಜ್ಯದಾದ್ಯಂತ ಇನ್ನೂ ನಿಂತಿಲ್ಲ ವಾಲ್ಮೀಕಿ ಸಮಾಜದ ಪ್ರತಿಭಟನೆ!
ಸಿಎಂ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೊಪ್ಪಳದಲ್ಲಿ ಪ್ರತಿಭಟನೆ ನಿರತರಾಗಿರುವ ವಾಲ್ಮೀಕಿ ಸಮಾಜ.
  • Share this:
ಕೊಪ್ಪಳ (ಆಗಸ್ಟ್.29); ಬಿಜೆಪಿ ಪಕ್ಷದ ಹಿರಿಯ ನಾಯಕ ಶ್ರೀರಾಮುಲುಗೆ ರಾಜ್ಯದ ನೂತನ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡದಿರುವ ವಿವಾದ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಲೇ ಇದೆ. ರಾಜ್ಯ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಈಗಲೂ ಪ್ರತಿಭಟನೆಗಳು ಅಲ್ಲಿಲ್ಲಿ ನಡೆಯುತ್ತಲೇ ಇವೆ. ರಾಜ್ಯ ಸರ್ಕಾರದ ನಡೆಯ ವಿರುದ್ಧ ವಾಲ್ಮೀಕಿ ಸಮಾಜ ಬೀದಿ ಗಿಳಿದು ಹೋರಾಡತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ ಕೊಪ್ಪಳ.

ಕಳೆದ ವಿಧಾನಸಭಾ ಚುನಾವಣೆ ವೇಳೆ ವಾಲ್ಮೀಕಿ ಸಮಾಜದ ಶ್ರೀರಾಮುಲು ಅವರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ಡಿಸಿಎಂ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ, ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಅವರಿಗೆ ಡಿಸಿಎಂ ಸ್ಥಾನವಿರಲಿ ಬಳ್ಳಾರಿ ಉಸ್ತುವಾರಿಯೂ ದೊರೆಯುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಈ ನಡೆಯ ವಿರುದ್ಧ ಶ್ರೀರಾಮುಲು ಅಭಿಮಾನಿಗಳು ಹಾಗೂ ವಾಲ್ಮೀಕಿ ಸಮಾಜದವರು ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಅನೇಕ ಕಡೆಗಳಲ್ಲಿ ಹೋರಾಟ ನಡೆಸುತ್ತಲೇ ಇದ್ದಾರೆ.

ಇಂದು ಕೊಪ್ಪಳದಲ್ಲಿ ರಸ್ತೆಗಿಳಿದಿರುವ ಅಖಿಲ ಭಾರತ ವಾಲ್ಮೀಕಿ ಸಮುದಾಯದ ಜನ ರಾಜ್ಯ ಸರ್ಕಾರ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ನಗರದಲ್ಲಿ ವಾಲ್ಮೀಕಿ ಹಾಗೂ ಶ್ರೀರಾಮುಲು ಪೋಟೋಗಳನ್ನು ಹಿಡಿದು ಮೆರವಣಿಗೆ ನಡೆಸಿರುವ ವಾಲ್ಮೀಕಿ ಸಮಾಜದವರು “ಕೊಟ್ಟ ಮಾತು ತಪ್ಪಿದ ಬಿಜೆಪಿ, ವಚನ ಭ್ರಷ್ಟ ಯಡಿಯೂರಪ್ಪನಿಗೆ ಧಿಕ್ಕಾರ” ಎಂದು ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಒಟ್ಟಲ್ಲಿ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡದೆ ಇರುವ ವಿಚಾರ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ರಾಜ್ಯ ಬಿಜೆಪಿ ವಿರುದ್ಧ ವಾಲ್ಮೀಕಿ ಸಮಾಜದ ಆಕ್ರೋಶ ಬಟಾಬಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ಹಂತ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಅವಶ್ಯಕತೆ ಇಲ್ಲ; ಸಚಿವ ಸಿ.ಟಿ. ರವಿ ಹೇಳಿಕೆಗೆ ಭುಗಿಲೆದ್ದ ವಿವಾದ, ಆಕ್ರೋಶ ಹೊರಹಾಕಿದ ಕರವೇ!

First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ