ನೆಲೆಯೇ ಇಲ್ಲದ ಶಿರಾ ಕೋಟೆ ಮೇಲೆ ಕೇಸರಿ ಬಾವುಟ ಹಾರಿಸಿದ ಬಿಜೆಪಿ

ಚುನಾವಣಾ ಆರಂಭದ ದಿನದಿಂದಲೂ ಶಿರಾದ ಮದಲೂರು ಕೆರೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಅದೇ ಮದಲೂರು ಕೆರೆಗೆ ನೀರು ಹರಿಸೋದಾಗಿ ಸ್ವತಃ ಸಿಎಂ ಬಿ.ಎಸ್.ವೈ ಭರವಸೆ ನೀಡಿದ್ದು, ಆ ಭಾಗದಲ್ಲಿ ಹೆಚ್ಚು ಮತ ಸೆಳೆಯಲು ಬಿಜೆಪಿಗೆ ಕಾರಣವಾಯಿತು.

ಬಿಜೆಪಿ

ಬಿಜೆಪಿ

  • Share this:
ತುಮಕೂರು(ನ.12): ಬಹುನಿರೀಕ್ಷಿತ ಶಿರಾ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಮೊನ್ನೆಯಷ್ಟೆ ಹೊರಬಿದ್ದಿದೆ.‌ ನೆಲೆಯೇ ಇಲ್ಲದ ಬಿಜೆಪಿ ಐಸಿಹಾಸಿಕ ಗೆಲುವು ಸಾಧಿಸಿ ಗೆದ್ದು ಬೀಗಿದೆ. ಪರಂಪರಾಗತ ಎದುರಾಳಿಗಳಾಗಿದ್ದ ಜೆಡಿಎಸ್-ಕಾಂಗ್ರೆಸ್​​ ಪಕ್ಷಗಳನ್ನು ನೆಲಕಚ್ಚಿಸಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಉಪಚುನಾವಣೆ ಆರಂಭದಿಂದಲೂ ಬಿಜೆಪಿ, ಶಿರಾ ಕ್ಷೇತ್ರದ ಮೇಲೆ ಇಟ್ಟಿದ್ದ ವಿಶೇಷ ಗಮನ, ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿಸಿದೆ. 2008ರ ಚುನಾವಣೆಯಲ್ಲಿ ಬಿಜೆಪಿ 24,600 ಮತಗಳನ್ನು ಪಡೆದಿತ್ತು. ಇದೇ ಆ ಪಕ್ಷ ಗಳಿಸಿದ್ದ ಗರಿಷ್ಠ ಮತ. 2018ರ ಚುನಾವಣೆಯಲ್ಲಿ 16 ಸಾವಿರ ಮತಗಳನ್ನು ಪಡೆದಿತ್ತು. ಇದೀಗ 76,564 ಮತಗಳನ್ನ ಪಡೆಯುವ ಮೂಲಕ ಬಿಜೆಪಿ ಹೊಸದೊಂದು ಅಲೆ ಎಬ್ಬಿಸಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದರು.

ಅಧಿಕಾರ ಮತ್ತು ಸಂಪನ್ಮೂಲವನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಂಡು ಗೆಲುವಿನ ದಡ ಸೇರಿದೆ. ಚುನಾವಣಾ ಆರಂಭದ ದಿನದಿಂದಲೂ ಶಿರಾದ ಮದಲೂರು ಕೆರೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಅದೇ ಮದಲೂರು ಕೆರೆಗೆ ನೀರು ಹರಿಸೋದಾಗಿ ಸ್ವತಃ ಸಿಎಂ ಬಿ.ಎಸ್.ವೈ ಭರವಸೆ ನೀಡಿದ್ದು, ಆ ಭಾಗದಲ್ಲಿ ಹೆಚ್ಚು ಮತ ಸೆಳೆಯಲು ಬಿಜೆಪಿಗೆ ಕಾರಣವಾಯಿತು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅಭಿವೃದ್ಧಿಯ ನಿರೀಕ್ಷೆಗಳನ್ನು ಬಿಜೆಪಿ ಹೆಚ್ಚು ಮೂಡಿಸಿತು. ಪ್ರಮುಖವಾಗಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕ‌ ಆ ಸಮುದಾಯವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಹಿಂದೂಗಳನ್ನು ಎದುರಾಕೊಂಡ್ರೆ ಬಿಎಸ್​ವೈ ಸರ್ಕಾರ ಮೂರು ತಿಂಗಳು ಇರಲ್ಲ; ಋಷಿಕುಮಾರ ಸ್ವಾಮೀಜಿ ಕಿಡಿ

ಈ ರೀತಿಯಲ್ಲಿ ತನ್ನ ಪಾಲಿಗೆ ಬಂದ ಎಲ್ಲ ಅವಕಾಶಗಳನ್ನು ಸಮರ್ಥವಾಗಿ ಬಿಜೆಪಿ ಬಳಸಿಕೊಂಡು ಗೆಲುವಿನ ನಗೆ ಬೀರಿದೆ. ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕ‌ ಬಿಜೆಪಿ ಆ ಸಮಯದಾಯದ ಮನ ಗೆದ್ದಿತು. ಕಾಂಗ್ರೆಸ್​ನ ಅಹಿಂದ ಮತಗಳನ್ನೂ ಸಹ ಬಿಜೆಪಿ ವಿಭಜಿಸಿದೆ. ಮದ್ದಕ್ಕನಹಳ್ಳಿಯ ಕಲ್ಲುಗಣಿಗಾರಿಕೆ ವಿವಾದ ಪರಿಹರಿಸುವ ಭರವಸೆ ದೊರೆತ ಕಾರಣ ಭೋವಿ ಸಮಾಜ ಬಿಜೆಪಿ ಕೈ ಹಿಡಿದಿದೆ. ಜಾತಿವಾರು ಸಭೆಗಳನ್ನು ನಡೆಸಿ ಸಣ್ಣ ಪುಟ್ಟ ಜಾತಿಗಳನ್ನು ತೆಕ್ಕೆಗೆ ತೆಗೆದುಕೊಂಡು ,ಜೆಡಿಎಸ್ ಪಕ್ಷದ ಮತಗಳನ್ನ ತನ್ನ ಕಡೆಗೆ ಸೆಳೆದು ಬಿಜೆಪಿ ತನ್ನ ಬಲ ಹೆಚ್ಚಿಸಿಕೊಂಡಿದೆ.

ಕೆ.ಆರ್.ಪೇಟೆ ಚುನಾವಣೆ ನಂತರ ಬಿ.ವೈ.ವಿಜಯೇಂದ್ರ ಶಿರಾ ಚುನಾವಣೆ ಉಸ್ತುವಾರಿ ಹೊತ್ತಿದ್ದು, ಶಿರಾ ಗೆಲುವಿನ ಬಹುತೇಕ ಕ್ರೆಡಿಟ್ ವಿಜಯೇಂದ್ರ ಪಾಲಿಗೆ ಒಲಿಯಲಿದೆ. ತಮ್ಮದೇ ಆದ ತಂಡದ ಮೂಲಕ ಶಿರಾದಲ್ಲಿ ಕಾರ್ಯತಂತ್ರ ನಡೆಸಿದ್ದು, ಅವರ ತಂತ್ರಗಳು ಶಿರಾದಲ್ಲಿ ಫಲ‌ ನೀಡಿವೆ. ಬಿಜೆಪಿಯ ಐತಿಹಾಸಿಕ ಗೆಲುವಿನ ಬಳಿಕ  ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ.

ಇತ್ತ ಕೊರೋನಾದಿಂದ ಆಸ್ಪತ್ರೆ ಸೇರಿರುವ ಕಾಂಗ್ರೆಸ್​​ನ ಟಿ.ಬಿ.ಜಯಚಂದ್ರ, ತಮಗೆ ಮತ ನೀಡಿದ ಮತದಾರರಿಗೆ ಫೇಸ್ ಬುಕ್ ಮೂಲಕ ಕೃತಜ್ಙತೆ ಸಲ್ಲಿಸಿದ್ದಾರೆ .ಕಾಂಗ್ರೆಸ್ ಜೆಡಿಎಸ್ ನ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿದ್ದು, ಬಿಜೆಪಿ ಮಾತ್ರ ಅಂದುಕೊಂಡಂತೆ ತನ್ನ ಗೆಲುವಿನ ಗುರಿ ಮುಟ್ಟಿದೆ.
Published by:Latha CG
First published: