ಡಿ.ಕೆ. ಸುರೇಶ್​ ಬಿಡುಗಡೆ ಮಾಡಿದ್ದು ನಕಲಿ ಪತ್ರವೇ?; ಹೌದು ಎನ್ನುತ್ತದೆ ಬಿಜೆಪಿ ಪ್ರಕಟಣೆ


Updated:September 8, 2018, 5:23 PM IST
ಡಿ.ಕೆ. ಸುರೇಶ್​ ಬಿಡುಗಡೆ ಮಾಡಿದ್ದು ನಕಲಿ ಪತ್ರವೇ?; ಹೌದು ಎನ್ನುತ್ತದೆ ಬಿಜೆಪಿ ಪ್ರಕಟಣೆ

Updated: September 8, 2018, 5:23 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಸೆಪ್ಟೆಂಬರ್​​.08): ಡಿಕೆಶಿ  ಬ್ರದರ್ಸ್​ ಮೇಲೆ ಐಟಿ ದಾಳಿ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ಬಿ.ಎಸ್​ ಯಡಿಯೂರಪ್ಪ ಪತ್ರ ಬರೆದಿದ್ದರು ಎಂಬ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಡಿಕೆ. ಸುರೇಶ್​​ ಅವರು ಬಿಡುಗಡೆ ಮಾಡಿರುವುದು ನಕಲಿ ಪತ್ರ. ಬಿಎಸ್ ವೈ ಅವರ ಸಹಿ ಯಾವಾಗಲೂ ಬಲಭಾಗದಲ್ಲಿರುತ್ತದೆ. ಆದರೆ ನಕಲು ಮಾಡಿರುವ ಪತ್ರದಲ್ಲಿ ಸಹಿಯನ್ನು ಎಡಭಾಗಕ್ಕೆ ಮಾಡಲಾಗಿದೆ ಎಂದು ಮತ್ತೊಂದು ಪತ್ರ ಬಿಡುಗಡೆ ಮಾಡಿದ್ಧಾರೆ.ದ್ವೇಷ ರಾಜಕಾರಣ ಮಾಡಲು ನಕಲಿ ಪತ್ರ ಬಿಡಗಡೆ ಮಾಡಲಾಗಿದೆ. 2017ರ ಜನವರಿ 10ರಂದು ಬಿಎಸ್​ವೈ ಐಟಿ ಇಲಾಖೆಗೆ ಪತ್ರ ಬರೆದಿದ್ದರು ಎಂಬುದು ಶುದ್ದ ಸುಳ್ಳು. ಈಗಾಗಲೇ ಬಿಡುಗಡೆ ಮಾಡಿರುವ ಪತ್ರ ನಕಲಿ, ತಾವು ಯಾವುದೇ ಪತ್ರವನ್ನೂ ಆದಾಯ ತೆರಿಗೆ ಇಲಾಖೆಗೆ ಬರೆದಿಲ್ಲ ಎಂದು ಯಡಿಯೂರಪ್ಪ ಸಮರ್ಥನೆ ನೀಡಿದ್ದಾರೆ.

ಸಂಸದ ಡಿ.ಕೆ.ಸುರೇಶ್​ ಬಿಡುಗಡೆ ಮಾಡಿದ ಪತ್ರ ನಕಲಿ. 2017ರಿಂದ ಈವರೆಗೆ ಬಿಎಸ್​ವೈ ಮತ್ತು ಡಿಕೆ ಶಿವಕುಮಾರ್​ ಸಂಬಂಧ ಚೆನ್ನಾಗಿದೆ ಎಂದು ಹೇಳಿದ್ದಾರೆ. ಹೀಗಿರುವಾಗ ಅವರು ಯಾಕೆ ಡಿಕೆಶಿ ವಿರುದ್ಧ ದೂರು ನೀಡಲು ಮುಂದಾಗುತ್ತಾರೆ ಎಂದು ಬಿಜೆಪಿ ವಕ್ತಾರರು ಪ್ರಶ್ನಿಸಿದ್ದಾರೆ. ಅಲ್ಲದೇ ಡಿ.ಕೆ. ಸುರೇಶ್​ ಈ ರೀತಿ ಆರೋಪ ಮಾಡುವ ಮೂಲಕ ಹೊಸ ಗೊಂದಲ ಮೂಡಿಸುತ್ತಿದ್ದಾರೆ, ಈ ಬಗ್ಗೆ ಡಿ.ಕೆ.ಸುರೇಶ್​ ತಮ್ಮ ಅಣ್ಣನ ಬಳಿ ಕೇಳಲಿ ಎಂಬುದಾಗಿ ಬಿಎಸ್​ವೈ ಹೇಳಿಕೆಯನ್ನು ಬಿಜೆಪಿ ಪುನರುಚ್ಚರಿಸಿದೆ.

ನಾನು, ಡಿಕೆಶಿ ಚೆನ್ನಾಗಿದ್ದೀವಿ; ಡಿ.ಕೆ. ಸುರೇಶ್​ ನಕಲಿ ಪತ್ರ ಬಿಡುಗಡೆ ಮಾಡಿದ್ದಾರೆ; ಮಾಜಿ ಸಿಎಂ ಯಡಿಯೂರಪ್ಪ
Loading...

ಬಿಎಸ್ ವೈ ಅವರ ಲೆಟರ್​ ಹೆಡ್​ನಲ್ಲಿ ಬೆಂಗಳೂರು ನಿವಾಸದ ವಿಳಾಸವಿದ್ದು ಫೋನ್ ನಂಬರ್ ಶಿವಮೊಗ್ಗದ್ದಿದೆ. ಅಲ್ಲದೇ ಅವರ ಈಮೇಲ್ ಐಡಿಯಲ್ಲಿಯೂ Bsy(ಮೊದಲ letter capital​​) ಅಂತಿದೆ. ನಿಜವಾದ ಲೆಟರ್ ಹೆಡ್​ನಲ್ಲಿ bsy (ಮೊದಲ letter small ) ಅಂತಿದೆ. ಯಡಿಯೂರಪ್ಪ ಅವರು, ಸಹಿ ಯಾವಾಗಲೂ ಬಲಭಾಗದಲ್ಲಿದೆ. ಆದರೆ ನಕಲು ಮಾಡಿರುವ ಪತ್ರದಲ್ಲಿ ಸಹಿಯನ್ನು ಎಡಭಾಗಕ್ಕೆ ಮಾಡಲಾಗಿದೆ ಎಂದು ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ಧಾರೆ.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...