ಜಯನಗರದಲ್ಲಿ ಪ್ರಹ್ಲಾದ್ ಬಾಬು ಸೋಲಿಗೆ ಕಾರಣರಾದರಾ ಬಿಜೆಪಿ ಕಾರ್ಪೊರೇಟರ್ಸ್?


Updated:June 13, 2018, 3:16 PM IST
ಜಯನಗರದಲ್ಲಿ ಪ್ರಹ್ಲಾದ್ ಬಾಬು ಸೋಲಿಗೆ ಕಾರಣರಾದರಾ ಬಿಜೆಪಿ ಕಾರ್ಪೊರೇಟರ್ಸ್?
ಪ್ರಹ್ಲಾದ್ ಬಾಬು

Updated: June 13, 2018, 3:16 PM IST
- ಥಾಮಸ್ ಪುಷ್ಪರಾಜ್, ನ್ಯೂಸ್18 ಕನ್ನಡ

ಬೆಂಗಳೂರು(ಜೂನ್ 13): ಜಯನಗರ ವಿಧಾ‌ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಸಂಭಾವಿತ ರಾಜಕಾರಣಿ ಎಂದೇ ಕರೆಸಿಕೊಂಡಿದ್ದ ವಿಜಯಕುಮಾರ್ ಸಾವಿನ ಅನುಕಂಪವೇ ವರ್ಕೌಟ್ ಆಗಬಹುದೆಂಬ ಪಕ್ಷದ ವರಿಷ್ಟರ ಅತಿಯಾದ ಅತ್ಮವಿಶ್ವಾಸವೇ ಅವರಿಗೆ ಮುಳುವಾಗಿದೆ. ಬಿಜೆಪಿಯ ಒಡಕಿನ ಲಾಭ ಪಡೆದ ಕಾಂಗ್ರೆಸ್ ಮತದಾರನ ಮನಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಸಾಥ್ ಕೊಟ್ಟ ಜೆಡಿಎಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರೋದು ಸುಳ್ಳಲ್ಲ.

ಜಯನಗರ.. ಬೆಂಗಳೂರಷ್ಟೇ ಅಲ್ಲ ರಾಜ್ಯದ ಅತ್ಯಂತ ಸುಶಿಕ್ಷಿತರನ್ನೊಳಗೊಂಡ ಕ್ಷೇತ್ರ.. ವೆಲ್ ಪ್ಲ್ಯಾನ್ಡ್ ಆಗಿ‌ ನಿರ್ಮಾಣಗೊಂಡಿರುವ ಕ್ಷೇತ್ರಗಳಲ್ಲೊಂದು. ಕಳೆದ ಎರಡು ಚುನಾವಣೆಗಳಲ್ಲಿ‌ ಗೆಲ್ಲೋ ಮೂಲಕ ಬಿಜೆಪಿ ಈ ಕ್ಷೇತ್ರವನ್ನು ಭದ್ರಕೋಟೆಯನ್ನಾಗಿಸಿಕೊಂಡಿತ್ತು. ಆದ್ರೆ ಈ ಬಾರಿಯ ಫಲಿತಾಂಶ ಅದನ್ನು ಹುಸಿ ಮಾಡಿದೆ. ಇದಕ್ಕೆ ಕ್ಷೇತ್ರದ ಮತದಾರರನ್ನು ದೂರೋದ್ರಲ್ಲಿ ಅರ್ಥವೇ ಇಲ್ಲ. ಕಳೆದ ಎರಡು ಬಾರಿಯ ಚುನಾವಣೆಗಳಲ್ಲಿ ಕಾರ್ಪೊರೇಟರ್ಸ್ ತೋರಿದ್ದ ಬದ್ದತೆ ಹಾಗೂ ಪ್ರದರ್ಶಿಸಿದ್ದ ಒಗ್ಗಟ್ಟಿನ ಕೊರತೆಯೇ ಸೋಲಿಗೆ ಕಾರಣವಾಯ್ತೆಂದು ಹೇಳೋದ್ರಲ್ಲಿ ಅತಿಶಯವಿಲ್ಲ.

ಪ್ರತೀಕಾರ ತೀರಿಸಿಕೊಂಡ ಬಿಜೆಪಿ ಕಾರ್ಪೊರೇಟರ್ಸ?
ಬಿಜೆಪಿ ಸೋಲಿಗೆ ಇದೇ ಪ್ರಮುಖ‌ ಹಾಗೂ ನಿಖರ ಕಾರಣ ಎನ್ನಲಾಗ್ತಿದೆ. ತಮ್ಮಲ್ಲೊಬ್ಬರಿಗೆ ಟಿಕೆಟ್ ಕೊಡ್ತೀನಂಥ ಹೇಳಿ ಕೈ ಎತ್ತಿದ ವರಿಷ್ಟರಿಗೆ ಬಿಜೆಪಿಯ ಹಾಲಿ ಹಾಗೂ ಮಾಜಿ ಕಾರ್ಪೊರೇಟರ್ಸೇ ಖೆಡ್ಡಾ ತೋಡುದ್ರು ಎಂಬ ಮಾತು‌ ಕೇಳಿ ಬರ್ತಿದೆ.ವಿಜಯ ಕುಮಾರ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸ್ತಿದ್ದ ಕಾರ್ಪೊರೇಟರ್ಸ್ ಈ ಬಾರಿ ತಮಗಾದ ಮೋಸಕ್ಕೆ  ಒಗ್ಗಟ್ಟಾಗಿಯೇ ಪ್ರತೀಕಾರ ತೀರಿಸಿಕೊಂಡಿದ್ದಾರೆಂದ್ರೂ ತಪ್ಪಾಗ್ಲಿಕ್ಕಿಲ್ಲ.

ಇದಕ್ಕೆ ಕಾರಣವೂ ಇದೆ.. ತಮಗಾದ ಅನ್ಯಾಯಕ್ಕೆ ಅಸಮಾಧಾನಗೊಳ್ಳದೆ ಒಗ್ಗಟ್ಟು  ಪ್ರದರ್ಶಿಸಿದ್ರೆ ಬಹುಷಃ ಪ್ರಹ್ಲಾದ್ ಬಾಬು ಗೆಲ್ಲೋದು ಕಷ್ಟವಾಗಿರಲಿಲ್ಲ. ಹಾಗಾಗಿಯೇ ಗೆಲುವಿನ ಸುಲಭ ತುತ್ತನ್ನು ಬಿಜೆಪಿ ಕೈ ಚೆಲ್ಲುವಂತಾಯ್ತೇನೋ..

ಅದೇನೇ ಆಗ್ಲಿ, ಬಿಜೆಪಿ ವರಿಷ್ಟರ ಅತಿಯಾದ ಆತ್ಮವಿಶ್ವಾಸ ಪಕ್ಷದ ಸೋಲಿಗೆ ಎಷ್ಟರ ಮಟ್ಟಿಗೆ ಕಾರಣವಾಯ್ತೋ,ಕಾರ್ಪೊರೇಟರ್ಸ್ ಗಳ ಬದ್ದತೆ ಹಾಗೂ ಒಗ್ಗಟ್ಟಿನ ಕೊರತೆಯೂ ಕಾಂಗ್ರೆಸ್ ನ‌ ಎದುರು‌ ಮಂಡಿಯೂರುವಂತೆ ಮಾಡಿದ್ದು ವಿಪರ್ಯಾಸವಾದ್ರೂ ಸುಳ್ಳಲ್ಲ.
Loading...

ವಿಜಯಕುಮಾರ್ ಬದುಕಿದ್ದವರೆಗೂ ಅವರ ಜೊತೆಗೆ ರಾಜಕೀಯ ಲಾಭಕ್ಕಾಗಿ ಜೊತೆಗಿದ್ದ ಬಿಜೆಪಿ ಕಾರ್ಪೊರೇಟರ್ಸ್ ತಮ್ಮಲೊಬ್ಬರಿಗೆ ಟಿಕೆಟ್ ಸಿಗ್ಲಿಲ್ಲ ಎನ್ನೋ ಕಾರಣಕ್ಕೆ ಮುನಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರೋದೇ. ಆಂತರಿಕ ಬಂಡಾಯ ಹಾಗೂ ಭಿನ್ನಮತಕ್ಕೆ ವರಿಷ್ಠರು ತೇಪೆ ಹಚ್ಚಲು ಯತ್ನಿಸಿ ಸಫಲವಾಗಿದೆವೆಂಬ ವಿಶ್ವಾಸದಲ್ಲಿದ್ರು. ಆದ್ರೆ ಒಳಗೊಳಗೆ  ಮಸಲತ್ತು ಮಾಡಿದ ಮಾಜಿ ಕಾರ್ಪೊರೇಟರ್ಸ್ ನಟರಾಜ್, ರಾಮಮೂರ್ತಿ, ಸೋಮಶೇಖರ್, ಮಂಜುನಾಥ ರೆಡ್ಡಿ, ಗೋವಿಂದ ನಾಯ್ಡು ಅವರು ಪ್ರಹ್ಲಾದ್ ಬಾಬು ಅವರನ್ನು ಸೋಲಿಸುವ ಮೂಲಕ ತಮಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಂಡ್ರಾ ಎಂಬ ಅನುಮಾನವಂತೂ ಹಾಗೇ ಉಳಿದುಕೊಂಡಿದೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...