ದೋಸ್ತಿ ಸರ್ಕಾರಕ್ಕೆ ಶಾಕ್​ ಕೊಡಲು ಬಿಜೆಪಿ ಭರ್ಜರಿ ಸಿದ್ಧತೆ: ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಕಮಲ ಪಡೆ ಮೀಟಿಂಗ್


Updated:July 17, 2018, 9:27 AM IST
ದೋಸ್ತಿ ಸರ್ಕಾರಕ್ಕೆ ಶಾಕ್​ ಕೊಡಲು ಬಿಜೆಪಿ ಭರ್ಜರಿ ಸಿದ್ಧತೆ: ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಕಮಲ ಪಡೆ ಮೀಟಿಂಗ್
ಯಡಿಯೂರಪ್ಪನವರ ಪ್ರಾತಿನಿಧಿಕ ಚಿತ್ರ

Updated: July 17, 2018, 9:27 AM IST
ನ್ಯೂಸ್​ 18 ಕನ್ನಡ

ಬೆಂಗಳಖೂರು(ಜು.17): ಮೈತ್ರಿ ಸರ್ಕಾರದಲ್ಲಿ ಎದ್ದಿರೋ ಸಣ್ಣ ಸಣ್ಣ ಬಿರುಗಾಳಿಯನ್ನೇ ಲಾಭ ಮಾಡಿಕೊಳ್ಳಲು ಬಿಜೆಪಿ ವೇದಿಕೆ ಸಿದ್ಧಪಡಿಸಿಕೊಂಡಿದೆ. ಇದಕ್ಕೆ ಸಾಕ್ಷಿ ಎನ್ನುವ ಹಾಗೇ ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸಭೆ ನಡೆಯಲಿದೆ.

ಹೌದು ದೋಸ್ತಿ ಸರ್ಕಾರಕ್ಕೆ ಶಾಕ್​ ಕೊಡಲು ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.
ಸಂಪೂರ್ಣ ಸಾಲಮನ್ನಾ ಮಾಡದೇ ಇರುವುದನ್ನೇ ಮುಂದಿಟ್ಟಿಕೊಂಡು ಹೋರಾಟ ನಡೆಸುವ ಬಗ್ಗೆ, ಜೊತೆಗೆ ನೇಕಾರರು, ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮುಂದಿಟ್ಟು ಹೋರಾಟ ನಡೆಸುವ ಸಿದ್ಧತೆ ಮಾಡಿಕೊಳ್ಳಲಿದೆ.

ಈ ಮಧ್ಯೆ ಜುಲೈ 25ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಬೆಂಗಳೂರಿಗೆ ಬರುತ್ತಿದ್ದು, 2019ರ ಲೋಕಸಭೆ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆಯೂ ಇವತ್ತಿನ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ. ಈಗಾಗಲೇ ವಿಧಾನಸಭೆ ಚುನಾವಣೆಗೆ ಅಮಿತ್ ಷಾ ರಾಜ್ಯ ಬಿಜೆಪಿಗೆ 19 ಅಂಶಗಳ ಟಾಸ್ಕ್ ನೀಡಿದ್ದರು. ಇದೀಗ ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧವಾಗಿರುವ 23 ಅಂಶಗಳ ಟಾಸ್ಕ್​ನೊಂದಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜುಲೈ 25ರಂದು  ಬೆಂಗಳೂರಿಗೆ ಬೆರುತ್ತಿದ್ದು, ವಿಧಾನಸಭಾ ಚುನಾವಣೆಯ 19 ಅಂಶಗಳಿಗೆ ಹೆಚ್ಚುವರಿಯಾಗಿ 4 ಟಾಸ್ಕ್ ಸೇರ್ಪಡೆಯಾಗುತ್ತದೆ ಎನ್ನಲಾಗಿದೆ.
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...