ಮುಗಿಯದ ಗೊಂದಲ; ಮುನಿರತ್ನ, ತುಳಸಿ ಮುನಿರಾಜುಗೌಡ ಇಬ್ಬರ ಹೆಸರು ಹೈ ಕಮಾಂಡ್​ಗೆ ಶಿಫಾರಸ್ಸು

ರಾಜಾರಾಜೇಶ್ವರಿ ಟಿಕೆಟ್​ಗೆ ಯಾರಿಗೆ ನೀಡಬೇಕು ಎಂಬ ಚರ್ಚೆ ನಡೆದಿದ್ದು, ಅಂತಿಮ ಒಮ್ಮತ ಸಾಧ್ಯವಾಗದ ಹಿನ್ನಲೆ ಇಬ್ಬರ ಹೆಸರನ್ನು ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ

ಮುನಿರತ್ನ-ತುಳಸಿ ಮುನಿರಾಜುಗೌಡ

ಮುನಿರತ್ನ-ತುಳಸಿ ಮುನಿರಾಜುಗೌಡ

  • Share this:
ಬೆಂಗಳೂರು (ಅ.1): ಶಿರಾ ಹಾಗೂ ರಾಜಾರಾಜೇಶ್ವರಿ ಉಪಚುನಾವಣೆಯ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಗೊಂದಲ ಬಗೆಹರಿದಿಲ್ಲ. ಈ ಹಿನ್ನಲೆ ರಾಜರಾಜೇಶ್ವರಿ ನಗರಕ್ಕೆ ಮುನಿರತ್ನ ಹಾಗೂ ತುಳಸಿ ಮುನಿರಾಜು ಗೌಡ ಇಬ್ಬರ ಹೆಸರನ್ನು ಶಿಫಾರಸ್ಸು ಮಾಡಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಲಾಗಿದೆ. ಈ ಹಿನ್ನಲೆ ಅಭ್ಯರ್ಥಿಗಳ ಆಯ್ಕೆಯನ್ನು ಹೈ ಕಮಾಂಡ್​ಗೆ ವಹಿಸಲಾಗಿದೆ.  ಶಿರಾ ಕ್ಷೇತ್ರಕ್ಕೆ ಮೂವರ ಹೆಸರನ್ನು  ಬಿಜೆಪಿ ಚುನಾವಣಾ ಸಮಿತಿಗೆ ಕಳುಹಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳ ಆಯ್ಕೆ ಕುರಿತು ಇಂದು ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ,ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಕೋರ್​ ಕಮಿಟಿ ನಡೆಸಲಾಯಿತು. ಈ ವೇಳೆ ರಾಜಾರಾಜೇಶ್ವರಿ ಟಿಕೆಟ್​ಗೆ ಯಾರಿಗೆ ನೀಡಬೇಕು ಎಂಬ ಚರ್ಚೆ ನಡೆದಿದ್ದು, ಅಂತಿಮ ಒಮ್ಮತ ಸಾಧ್ಯವಾಗದ ಹಿನ್ನಲೆ ಇಬ್ಬರ ಹೆಸರನ್ನು ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ಇನ್ನು ಶಿರಾ ಕ್ಷೇತ್ರದಲ್ಲಿ ಪ್ರಬಲ ಬಿಜೆಪಿ ಅಭ್ಯರ್ಥಿ ಇಲ್ಲದ ಹಿನ್ನಲೆ ಮೂವರು ಹೆಸರನ್ನು ಶಿಫಾರಸ್ಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

ರಾಜಾರಾಜೇಶ್ವರಿ ನಗರಕ್ಕೆ ಆಪರೇಷನ್​ ಕಮಲದ ಮೂಲಕ ಬಂದಿರುವ ಮುನಿರತ್ನಗೆ ಟಿಕೆಟ್​ ನೀಡುವ ಬಗ್ಗೆ ಈಗಾಗಲೇ ಸಿಎಂ ಬಿಎಸ್​ವೈ ಮಾತು ನೀಡಿದ್ದಾರೆ. ಈ ಹಿನ್ನಲೆ ನನಗೆ ಟಿಕೆಟ್​ ಸಿಗಬೇಕು ಎಂದು ಮುನಿರತ್ನ ತಿಳಿಸಿದ್ದರು. ಆದರೆ, ಅಂತಿಮ ತೀರ್ಮಾನ ಪಕ್ಷದ್ದೆ ಎನ್ನುವ ಮೂಲಕ ಈ ಹಿಂದೆ ಪಕ್ಷ ಸ್ಥಾಪನೆಗೆ ನೆರವಾಗಿದ್ದನ್ನು ಸೂಚ್ಯವಾಗಿ ತಿಳಿಸಿದ್ದರು. ಇನ್ನು ತುಳಸಿ ಮುನಿರಾಜುಗೌಡ ಮೊದಲಿನಿಂದಲೂ ಇಲ್ಲಿ ಬಿಜೆಪಿ ಪರ ಕಣಕ್ಕೆ ಇಳಿದಿದ್ದು, ಈ ಬಾರಿಯೂ ತಾನು ಪ್ರಬಲ ಆಕಾಂಕ್ಷಿ ಎಂದು ಸ್ಥಾನ ತ್ಯಾಗ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇನ್ನು ಸಭೆಯಲ್ಲಿ ಸರ್ಕಾರದ ಬಹುಮತಕ್ಕೆ ಮುನಿರತ್ನ ಸಹಾಯ ಮಾಡಿದ್ದಾರೆ. ಅವರಿಗೆ ಟಿಕೆಟ್​ ನೀಡಬೇಕು. ಬೇರೆ ದಾರಿ ಇಲ್ಲ. ಆದರೆ, ಇತ್ತ ತುಳಸಿ ಮುನಿರಾಜುಗೌಡ ಕೂಡ ಟಿಕೆಟ್​ಗೆ ಪಟ್ಟು ಹಿಡಿದಿದ್ದು,  ನಿಗಮ ಮಂಡಳಿ ಸ್ಥಾನ ಕೊಡುತ್ತೇನೆ ಎಂದರು ಕೇಳುತ್ತಿಲ್ಲ. ಈ ಹಿನ್ನಲೆ ಇಬ್ಬರ ಹೆಸರನ್ನು ಸಮಿತಿಗೆ ಕಳುಹಿಸೋಣ ಎಂದು ಬಿಎಸ್​ವೈ ಸಲಹೆ ನೀಡಿದರು. ಅವರ ಮಾತಿಗೆ ಕಟೀಲ್​ ಕೂಡ ಸಮ್ಮತಿಸಿದ್ದು, ಈ ವಿಚಾರವನ್ನು ಹೈ ಕಮಾಂಡ್​ ಗಮನಕ್ಕೆ ತರೋಣ ಎಂದಿದ್ದಾರೆ ಎನ್ನಲಾಗಿದೆ.

ಇನ್ನು ಶಿರಾದಲ್ಲಿ ಕೂಡ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳು ಯಾರು ಇಲ್ಲ. ಈ ಹಿನ್ನಲೆ ಶಿ ಎಸ್.ಆರ್. ಗೌಡ, ಬಿ.ಕೆ. ಮಂಜುನಾಥ್ ಮತ್ತು ರಾಜೇಶ್ ಗೌಡ ಹೆಸರನ್ನು ಅಂತಿಮ ಮಾಡಿ ಕಳುಹಿಸುವ ಕುರಿತು ಚರ್ಚಿಸಲಾಗಿದೆ.

ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿ 

ಬೆಂಗಳೂರು ಪದವೀಧರ ಕ್ಷೇತ್ರ- ಪುಟ್ಟಣ್ಣ
ಆಗ್ನೇಯ ಪದವೀಧರ ಕ್ಷೇತ್ರ- ಚಿದಾನಂದ
ಪಶ್ಚಿಮ ಪದವೀಧರ ಕ್ಷೇತ್ರ- ಎಸ್.ವಿ. ಸಂಕನೂರ್
ಈಶಾನ್ಯ ಶಿಕ್ಷಕರ ಕ್ಷೇತ್ರ- ಶಶೀಲ್ ನಮೋಶಿ

ಉಸ್ತುವಾರಿ ನೇಮಕ: ಎರಡು ವಿಧಾನಸಭಾ ಉಪ ಚುನಾವಣೆ ಕ್ಷೇತ್ರ ಹಾಗೂ ಪರಿಷತ್​ನ ನಾಲ್ಕು ಕ್ಷೇತ್ರಗಳಿಗೆ  ಉಸ್ತುವಾರಿ ನೇಮಕ ಮಾಡಲಾಗಿದೆ ಎಂದು ಅರವಿಂದ್​ ಲಿಂಬಾವಳಿ ತಿಳಿಸಿದ್ದಾರೆ.

  • ಶಿರಾ ವಿಧಾನಸಭಾ ಕ್ಷೇತ್ರ-:  ಡಿಸಿಎಂ ಗೋವಿಂದ ಕಾರಜೋಳ,‌ಡಿಸಿಎಂಅಶ್ವತ್ಥನಾರಾಯಣ, ಎನ್. ರವಿಕುಮಾರ್, ಬಿ.ವೈ ವಿಜಯೇಂದ್ರ, ಸಂಸದ ಪಿ.ಸಿ ಮೋಹನ್, ನಾರಾಯಣಸ್ವಾಮಿ, ಪೂರ್ಣಿಮಾ ಶ್ರೀನಿವಾಸ್ ಮತ್ತು ತಿಪ್ಪೇಸ್ವಾಮಿ

  • ರಾಜರಾಜೇಶ್ವರಿ ಕ್ಷೇತ್ರ:  ಅರವಿಂದ ಲಿಂಬಾವಳಿ, ಆರ್ ಅಶೋಕ್, ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ್, ಎಸ್.ಆರ್ ವಿಶ್ವನಾಥ್

  • ಬೆಂಗಳೂರು ಶಿಕ್ಷಕರ ಕ್ಷೇತ್ರ: ಸುರೇಶ್ ಕುಮಾರ್, ಸಿದ್ದೇಶ್

  • ಆಗ್ನೇಯ ಪದವೀಧರ ಕ್ಷೇತ್ರ: ಮಾಧುಸ್ವಾಮಿ,ಡಾ. ಸುಧಾಕರ್ ನಾರಾಯಣಸ್ವಾಮಿ, ಶಿವಯೋಗಿಸ್ವಾಮಿ,

  • ಪಶ್ಚಿಮ ಪದವೀಧರ ಕ್ಷೇತ್ರ- ಜಗದೀಶ್ ಶೆಟ್ಟರ್, ಶಿವರಾಮ್ ಹೆಬ್ಬಾರ್, ಮಹೇಶ್ ತೆಂಗಿನಕಾಯಿ

  • ಈಶಾನ್ಯ ಶಿಕ್ಷಕರ ಕ್ಷೇತ್ರ: ಈಶ್ವರಪ್ಪ, ಶಶಿಕಲಾ ಜೊಲ್ಲೆ,ಮಹಾಂತೇಶ್ ಕವಟಗಿಮಠ

Published by:Seema R
First published: