ಬಿಜೆಪಿ ಕಾರ್ಯಕಾರಿಣಿ ಸಭೆ: ಲೋಕಸಭೆಗೆ ರಣಕಹಳೆ ಊದಿರುವ ಕೇಸರೀ ಪಾಳಯ

news18
Updated:June 29, 2018, 12:47 PM IST
ಬಿಜೆಪಿ ಕಾರ್ಯಕಾರಿಣಿ ಸಭೆ: ಲೋಕಸಭೆಗೆ ರಣಕಹಳೆ ಊದಿರುವ ಕೇಸರೀ ಪಾಳಯ
news18
Updated: June 29, 2018, 12:47 PM IST
ರಮೇಶ್​ ಹಿರೇಜಂಬೂರು, ನ್ಯೂಸ್​ 18 ಕನ್ನಡ

ಬೆಂಗಳೂರು (ಜೂ 29): ಲೋಕಸಭೆಗೆ ಸಜ್ಜಾಗಿರುವ ಬಿಜೆಪಿ ರಣಕಹಳೆಯನ್ನು ಊದುವ ಸಲುವಾಗಿ ಬಿಜೆಪಿ ನಾಯಕರು ಸಿದ್ದರಾಗಿದ್ದು, ಈ ಸಂಬಂಧ ಕಾರ್ಯ ಕಾರಿಣಿ ಸಭೆ ನಡೆಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನು ಇದೆ ವೇಳೆ ಪರಿಷತ್​ ವಿಪಕ್ಷ ಸ್ಥಾನದ ಆಯ್ಕೆ ಬಗ್ಗೆ ಅಂತಿಮ ನಿರ್ಧಾರವಾಗಿದ್ದು, ಕೋಟಾ ಶ್ರೀನಿವಾಸ ಪೂಜಾರಿ ಆಯ್ಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ರೈತರ ಸಾಲಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ವಿಳಂಬ ಧೋರಣೆ, ಜೆಡಿಎಸ್​ ಮೈತ್ರಿ ಹಾಗೂ ಹಾಗೂ ಮೈತ್ರಿ ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ರೂಪುರೇಷೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಲೋಕಸಭಾ ಚುನಾವಣೆಗೆ ಕೈಗೊಳ್ಳಬೇಕಾದ ಪೂರ್ವಸಿದ್ಧತೆ, ರಾಜ್ಯದಲ್ಲಿ ಉಪಚುನಾವಣೆ ಎದುರಾದರೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಗಿದೆ.

ಮಂಡ್ಯ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳ ಉಪ ಚುನಾವಣೆ ಮತ್ತು ಲೋಕಸಭಾ ಚುನಾವಣಾ ವೇಳೆಗೆ ಪಕ್ಷವನ್ನು ಹೇಗೆ ಬಲವರ್ಧನೆ ಮಾಡಬೇಕು. ಮೋದಿ ಸರ್ಕಾರದ ಸಾಧನೆಗಳನ್ನು ಹೇಗೆ ಜನರಿಗೆ ತಲುಪಿಸಬೇಕು ಎಂಬ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಕನಿಷ್ಟ 25 ಸ್ಥಾನ ಗೆಲುವ ಗುರಿಯನ್ನು ಹೊಂದಿರುವ ಬಿಜೆಪಿ ಯಾರನ್ನು ಕಣಕ್ಕೆ ಇಳಿಸಿದರೆ ಉತ್ತಮ ಹಾಗೂ ನಾಯಕರಗಳ ಕ್ಷೇತ್ರ ಬದಲಾವಣೆಗಳ ಕುರಿತು ಚರ್ಚೆಗೆ ಮುಂದಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಉಸ್ತುವಾರಿ ಮುರಳೀಧರ್​ ರಾವ್​ ನೇತೃತ್ವದಲ್ಲಿ ದಿನಪೂರ್ತಿ ಸಭೆ ನಡೆಯಲಿದೆ. ಸಭೆಯಲ್ಲಿ ಸಭೆಯಲ್ಲಿ ಶಾಸಕ ಜಗದೀಶ್ ಶೆಟ್ಟರ್​, ಕೇಂದ್ರ ಸಚಿವ ಅನಂತ ಕುಮಾರ್​ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಶಾಸಕರು, ಸಂಸದರು,  ಪರಿಷತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಮತ್ತೊಮ್ಮೆ ರಾಯಣ್ಣ ಬ್ರಿಗೇಡ್​ ಮೂಲಕ ಸದ್ದು ಮಾಡುತ್ತಿರುವ ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ, ಸಂಸದ ನಳಿನ್ ಕುಮಾರ್ ಕಟೀಲು, ಸಂದಾನಂದ ಗೌಡ ಸಭೆಗೆ ಗೈರಾಗಿದ್ದಾರೆ
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...