'ಸರ್ಕಾರವನ್ನು ಉರುಳಿಸುವ ಬಿಜೆಪಿ ಷಡ್ಯಂತ್ರ ನಡೆಯೋದಿಲ್ಲ'; ಹೆಚ್​. ವಿಶ್ವನಾಥ್​

news18
Updated:September 8, 2018, 12:44 PM IST
'ಸರ್ಕಾರವನ್ನು ಉರುಳಿಸುವ ಬಿಜೆಪಿ ಷಡ್ಯಂತ್ರ ನಡೆಯೋದಿಲ್ಲ'; ಹೆಚ್​. ವಿಶ್ವನಾಥ್​
news18
Updated: September 8, 2018, 12:44 PM IST
ಶ್ರೀನಿವಾಸ್​ ಹಳಕಟ್ಟಿ, ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 8): ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಷಡ್ಯಂತರ ಮಾಡುತ್ತಿದೆ. ಅದಕ್ಕಾಗಿ ಐಟಿ, ಇಡಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್​ ಆಕ್ಷೇಪಿಸಿದ್ದಾರೆ.

ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಯಾವ ಪ್ರಯತ್ನವೂ ನಡೆಯುವುದಿಲ್ಲ. ನಮ್ಮ ಸರ್ಕಾರ ಭದ್ರವಾಗಿದೆ. ಇಡಿ ಮತ್ತು ಐಟಿಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ನಾವು ಡಿ.ಕೆ. ಶಿವಕುಮಾರ್ ಪರ ಅಥವಾ ಇನ್ಯಾರದೋ ಪರ ಎಂದರ್ಥವಲ್ಲ. ಅವರಿಗೆ ಇಡಿ, ಐಟಿಯಿಂದ ಅನ್ಯಾಯವಾಗುತ್ತಿರುವುದಕ್ಕೆ ನಾವು ವಿರೋಧಿಸುತ್ತಿದ್ದೇವೆ ಎಂದು ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್​ ಸೋಮವಾರ ಕರೆಕೊಟ್ಟಿರುವ ಬಂದ್​ಗೆ ಜೆಡಿಎಸ್​ನ ಸಂಪೂರ್ಣ ಬೆಂಬಲವಿದೆ. ಟೌನ್​ಹಾಲ್​ ಮುಂದೆ ಜೆಡಿಎಸ್​​ ಮುಖಂಡರು ಮತ್ತು ಶಾಸಕರಿಂದ ಪ್ರತಿಭಟನೆ ನಡೆಯಲಿದೆ. ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಂತೆ ಬಂದ್ ನಡೆಸಲಾಗುವುದು. ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ.

ಹೋರಾಟ ಮಾಡೋಣ ಬನ್ನಿ ಬಿಜೆಪಿಗರೇ:

ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡೋಣ ಬಿಜೆಪಿಗರೇ ಬನ್ನಿ. ನಮ್ಮ ಹೋರಾಟಕ್ಕೆ ಕೈ ಜೋಡಿಸಿ. ಕೌರವರು ಅಡಗಿಕೊಂಡ ಹಾಗೆ ನೀವೂ ವೈಶಂಪಾಯನ ಸರೋವರದಲ್ಲಿ ಅಡಗಿಕೊಂಡಿದ್ದೀರಾ? ನೀರವ್​ ಮೋದಿ ಸಿಗ್ತಿಲ್ವಾ ನಿಮಗೆ? ದಾವೂದ್​ ಸಿಗ್ತಿಲ್ವಾ? ಅವರನ್ನು ದೇಶಕ್ಕೆ ಕರೆದುಕೊಂಡುಬನ್ನಿ ಎಂದು ಹೆಚ್​. ವಿಶ್ವನಾಥ್​ ಬಿಜೆಪಿಯನ್ನು ಟೀಕಿಸಿದ್ದಾರೆ.

 
First published:September 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ