ಯಶವಂತಪುರದಲ್ಲಿ ಒಕ್ಕಲಿಗರೇ ಕಿಂಗ್ ಮೇಕರ್ಸ್; ಮೂರೂ ಪಕ್ಷಗಳಿಂದಲೂ ಮತಬೇಟೆಗೆ ಸರ್ಕಸ್

ಬಿಜೆಪಿಯ ಪ್ರಮುಖ ಒಕ್ಕಲಿಗ ಮುಖಂಡರಾದ ಈ ಕ್ಷೇತ್ರದ ಮಾಜಿ ಶಾಸಕಿ ಶೋಭಾ ಕರಂದ್ಲಾಜೆ, ಡಿ.ವಿ. ಸದಾನಂದ ಗೌಡ ಮತ್ತು ಆರ್. ಅಶೋಕ್ ಅವರು ಕಳೆದೊಂದು ವಾರದಿಂದ ಈ ಕ್ಷೇತ್ರದಲ್ಲೇ ಬೀಡುಬಿಟ್ಟು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

news18
Updated:November 29, 2019, 11:43 AM IST
ಯಶವಂತಪುರದಲ್ಲಿ ಒಕ್ಕಲಿಗರೇ ಕಿಂಗ್ ಮೇಕರ್ಸ್; ಮೂರೂ ಪಕ್ಷಗಳಿಂದಲೂ ಮತಬೇಟೆಗೆ ಸರ್ಕಸ್
ಮಾಜಿ ಸಿಎಂ ಕುಮಾರಸ್ವಾಮಿ
  • News18
  • Last Updated: November 29, 2019, 11:43 AM IST
  • Share this:
ಬೆಂಗಳೂರು(ನ. 29): ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕರೆನಿಸಿದ್ದಾರೆ. ಇಲ್ಲಿರುವ ನಾಲ್ಕೂವರೆ ಲಕ್ಷ ಮತದಾರರಲ್ಲಿ ಒಕ್ಕಲಿಗರ ಪ್ರಮಾಣ ಒಂದು ಲಕ್ಷಕ್ಕೂ ಅಧಿಕವಿದೆ. ಈಗ ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಒಕ್ಕಲಿಗರನ್ನು ಹೊಂದಿರುವುದು ಯಶವಂತಪುರವೇ. ಒಕ್ಕಲಿಗರ ಭದ್ರಕೋಟೆ ಕೆ.ಆರ್. ಪೇಟೆಗಿಂತಲೂ ಹೆಚ್ಚು. ಇಂಥ ಒಕ್ಕಲಿಗ ವಿಶೇಷ ಕ್ಷೇತ್ರದಲ್ಲಿ ಆ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರೂ ಪಕ್ಷಗಳು ಕಸರತ್ತು ನಡೆಸುತ್ತಿವೆ.

ಯಶವಂತಪುರ ಮತಕ್ಷೇತ್ರದಲ್ಲಿ ಒಕ್ಕಲಿಗರೇ ಗೆಲ್ಲುತ್ತಾ ಬಂದಿದ್ದಾರೆ. 2008ರಲ್ಲಿ ಶೋಭಾ ಕರಂದ್ಲಾಜೆ ಜಯಿಸಿದ್ದರು. ಕಳೆದ ಎರಡು ಬಾರಿಯ ಚುನಾವಣೆಯಲ್ಲಿ ಒಕ್ಕಲಿಗರಾಗಿರುವ ಎಸ್.ಟಿ. ಸೋಮಶೇಖರ್ ಅವರು ಗೆದ್ದಿದ್ದಾರೆ. ಈಗ ಎಸ್.ಟಿ. ಸೋಮಶೇಖರ್ ಹ್ಯಾಟ್ರಿಕ್ ಗೆಲುವಿನ ಕನಸಲ್ಲಿದ್ದಾರೆ.

ಇದನ್ನೂ ಓದಿ: ಸ್ವಗ್ರಾಮಕ್ಕೆ ಕುಮಟಳ್ಳಿಗೆ ಇಲ್ಲ ಪ್ರವೇಶ; ಅನರ್ಹ ಶಾಸಕನ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕಳೆದೆರಡು ಬಾರಿ ಕಾಂಗ್ರೆಸ್ ಟಿಕೆಟ್​ನಿಂದ ಸ್ಪರ್ಧಿಸಿದ್ದ ಗೆದ್ದಿದ್ದ ಎಸ್.ಟಿ. ಸೋಮಶೇಖರ್ ಈಗ ಬಿಜೆಪಿ ಪಾಳಯದಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್​ನಿಂದ ಸ್ಪರ್ಧಿಸಿರುವ ಪಿ. ನಾಗರಾಜ್ ಮತ್ತು ಜೆಡಿಎಸ್​ನಿಂದ ಕಣದಲ್ಲಿರುವ ಜವರಾಯಿಗೌಡ ಇಬ್ಬರೂ ಒಕ್ಕಲಿಗರೇ. ಕಳೆದ ಎರಡು ಬಾರಿಯೂ ಎಸ್.ಟಿ. ಸೋಮಶೇಖರ್​ಗೆ ನಿಕಟ ಪೈಪೋಟಿ ನೀಡಿರುವ ಜವರಾಯಿಗೌಡ ಅವರ ಅದೃಷ್ಟ ಈ ಬಾರಿ ಖುಲಾಯಿಸುತ್ತಾ ನೋಡಬೇಕು. ಕಾಂಗ್ರೆಸ್ ಸ್ಪರ್ಧೆಯೊಂದಿಗೆ ತ್ರಿಕೋನ ಫೈಟ್ ಇದೆಯಾದರೂ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳೇ ಮೊದಲೆರಡು ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಬಿಜೆಪಿಯ ಪ್ರಮುಖ ಒಕ್ಕಲಿಗ ಮುಖಂಡರಾದ ಈ ಕ್ಷೇತ್ರದ ಮಾಜಿ ಶಾಸಕಿ ಶೋಭಾ ಕರಂದ್ಲಾಜೆ, ಡಿ.ವಿ. ಸದಾನಂದ ಗೌಡ ಮತ್ತು ಆರ್. ಅಶೋಕ್ ಅವರು ಕಳೆದೊಂದು ವಾರದಿಂದ ಈ ಕ್ಷೇತ್ರದಲ್ಲೇ ಬೀಡುಬಿಟ್ಟು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್​ನ ಸ್ಟಾರ್ ಪ್ರಚಾರಕರು ಬಂದು ಮುಗಿಸಿ ಹೋದ ನಂತರ ಅಂತಿಮವಾಗಿ ಎಸ್.ಎಂ. ಕೃಷ್ಣ ಅವರನ್ನು ಕರೆಸಿ ಪ್ರಚಾರ ಮಾಡಲು ಬಿಜೆಪಿ ಯೋಜಿಸಿದೆ. ದೇವೇಗೌಡರ ಕುಟುಂಬ ಬಿಟ್ಟರೆ ಅತಿ ಹೆಚ್ಚು ಖ್ಯಾತರಾಗಿರುವ ಒಕ್ಕಲಿಗ ಮುಖಂಡರೆಂದರೆ ಎಸ್.ಎಂ. ಕೃಷ್ಣ ಅವರೆಯೇ. ಹೀಗಾಗಿ, ಅಂತಿಮ ಹಂತದಲ್ಲಿ ಕೃಷ್ಣರಿಂದ ಪ್ರಚಾರ ಮಾಡಿಸಿ ಅನಿಶ್ಚಿತ ಒಕ್ಕಲಿಗ ಮತಗಳನ್ನು ಸೆಳೆಯುವುದು ಬಿಜೆಪಿಯ ಪ್ಲಾನ್ ಆಗಿದೆ.

ಇದನ್ನೂ ಓದಿ: 15 ಕ್ಷೇತ್ರಗಳಲ್ಲಿ ಬಿಜೆಪಿ 9 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ ಪಕ್ಷದ ವರದಿ

ಇನ್ನು, ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರವಾಗಿ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ದೇವೇಗೌಡ ಅವರು ಪ್ರಚಾರ ಮಾಡುತ್ತಿದ್ಧಾರೆ. ಹೆಚ್​ಡಿಕೆ ಈಗಾಗಲೇ ಇಲ್ಲಿ ಒಂದು ಸುತ್ತು ಬಂದು ಹೋಗಿದ್ದಾರೆ. ಡಿ. 1ಕ್ಕೆ ದೇವೇಗೌಡರು ಆಗಮಿಸಲಿದ್ದಾರೆ.ಈ ಮಧ್ಯೆ, ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಅವರನ್ನು ಸೋಲಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂಬ ಮಾತು ಕೇಳಿಬರುತ್ತಿದೆ. ಅಷ್ಟೇನೂ ಖ್ಯಾತರಲ್ಲದ ಪಿ. ನಾಗರಾಜ್ ಅವರನ್ನು ಕಾಂಗ್ರೆಸ್​ನಿಂದ ಕಣಕ್ಕಿಳಿಸಿರುವುದು ಇದಕ್ಕೆ ಸಾಕ್ಷಿ ಎನ್ನುತ್ತವೆ ಮೂಲಗಳು. ಅದೇನೇ ಇದ್ದರೂ ಕಾಂಗ್ರೆಸ್​ನ ಪ್ರಬಲ ಒಕ್ಕಲಿಗ ಮುಖಂಡ ಡಿ.ಕೆ. ಶಿವಕುಮಾರ್ ಅವರು ಈ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ: ಕೋಲಾರ ಜಿ.ಪಂ. ಅಧ್ಯಕ್ಷೀಯ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ ಬಿಜೆಪಿ ಸದಸ್ಯರು

ಯಶವಂತಪುರ ಜಾತಿ ಲೆಕ್ಕಾಚಾರ:

ಕ್ಷೇತ್ರದ ಒಟ್ಟು ಮತದಾರರು: 4,53,546
ಒಕ್ಕಲಿಗರು: 1,03,230
ದಲಿತರು: 58,000
ಲಿಂಗಾಯತರು: 52,800
ಕುರುಬರು: 24,655
ಬ್ರಾಹ್ಮಣರು: 25,800
ಮುಸ್ಲಿಮರು: 24,000
ಕ್ರೈಸ್ತರು: 12,920
ಇತರರು: 1,52,000

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 29, 2019, 11:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading