ಟಿಕ್​ಟಾಕ್ ಆಂಟಿಯೊಂದಿಗೆ ಸಚಿವ ಮಾಧುಸ್ವಾಮಿ ಫೋಟೋ; ಅವಹೇಳನಕಾರಿ ಟ್ವೀಟ್ ಮಾಡಿದ ಜೆಡಿಎಸ್​ ವಿರುದ್ಧ ಬಿಜೆಪಿ ದೂರು

ಟಿಕ್​ಟಾಕ್ ಮಹಿಳೆಯ ಎರಡು ಫೋಟೋಗಳು ಇರುವ ಕಡೆ ಸಚಿವ ಮಾಧುಸ್ವಾಮಿಯವರ ಫೋಟೊ ಹಾಕಿ ಟ್ವೀಟ್ ಮಾಡಿರುವ ಜೆಡಿಎಸ್​ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದಿಂದ ದೂರು ನೀಡಲಾಗಿದೆ.

Sushma Chakre | news18-kannada
Updated:November 21, 2019, 1:20 PM IST
ಟಿಕ್​ಟಾಕ್ ಆಂಟಿಯೊಂದಿಗೆ ಸಚಿವ ಮಾಧುಸ್ವಾಮಿ ಫೋಟೋ; ಅವಹೇಳನಕಾರಿ ಟ್ವೀಟ್ ಮಾಡಿದ ಜೆಡಿಎಸ್​ ವಿರುದ್ಧ ಬಿಜೆಪಿ ದೂರು
ಸಚಿವ ಜೆ.ಸಿ. ಮಾಧುಸ್ವಾಮಿ
  • Share this:
ಬೆಂಗಳೂರು (ನ. 21): ಇತ್ತೀಚೆಗಷ್ಟೆ ಖತರ್ನಾಕ್​ ಮಹಿಳೆಯೊಬ್ಬಳು ಟಿಕ್​ಟಾಕ್​ನಲ್ಲಿ ಗಂಡಸರನ್ನು ಪರಿಚಯ ಮಾಡಿಕೊಂಡು, ಮದುವೆಯಾಗುತ್ತೇನೆಂದು ನಂಬಿಸಿ ಹಣ ದೋಚುತ್ತಿದ್ದ ವಿಚಾರ ಎಲ್ಲ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಅದೇ ಸುದ್ದಿಗೆ ಆ ಮಹಿಳೆಯ ಫೋಟೋದ ಜೊತೆಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಫೋಟೋವನ್ನು ಎಡಿಟ್ ಮಾಡಿ ಕರ್ನಾಟಕ ಜೆಡಿಎಸ್ ಸೋಷಿಯಲ್ ಮೀಡಿಯಾದ ಪೇಜ್​ನಲ್ಲಿ ಪೋಸ್ಟ್ ಮಾಡಲಾಗಿತ್ತು.

ಟಿಕ್​ಟಾಕ್ ಆಂಟಿಯ ಫೋಟೋದ ಜೊತೆಗೆ ಸಚಿವ ಮಾಧುಸ್ವಾಮಿ ಫೋಟೋ ಹಾಕಿ, ಹೆಡ್​ಲೈನ್ ಕೂಡ ಎಡಿಟ್ ಮಾಡಲಾಗಿತ್ತು. 'ಟಿಕ್​ಟಾಕ್​ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗುತ್ತೇನೆಂದು ಮಾಧುಸ್ವಾಮಿಗೆ 4 ಕೋಟಿ ರೂ. ಪೀಕಿದ ಬ್ಯೂಟಿ' ಎಂಬ ಹೆಡ್​ಲೈನ್ ಹಾಕಿ ಪೋಸ್ಟ್​ ಮಾಡಲಾಗಿತ್ತು. ನಕಲಿ ಸುದ್ದಿ ಮತ್ತು ಫೋಟೋವನ್ನು ಪೋಸ್ಟ್​ ಮಾಡಿರುವ ಜೆಡಿಎಸ್​ ವಿರುದ್ಧ ಬಿಜೆಪಿ ನಾಯಕರು ದೂರು ನೀಡಿದ್ದು, ಸಚಿವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Viral Video: ಗಗನಕ್ಕೇರಿದ ತರಕಾರಿ ಬೆಲೆ; ಚಿನ್ನದ ಬದಲು ಟೊಮ್ಯಾಟೋ ಆಭರಣ ಧರಿಸಿ ಮದುವೆಯಾದ ವಧು!

ಟಿಕ್​ಟಾಕ್ ಚೆಲುವೆಯ ಎರಡು ಫೋಟೋಗಳು ಇರುವ ಕಡೆ ಸಚಿವ ಮಾಧುಸ್ವಾಮಿಯವರ ಫೋಟೊ ಹಾಕಿ ಟ್ವೀಟ್ ಮಾಡಿರುವ ಜೆಡಿಎಸ್​ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದಿಂದ ದೂರು ನೀಡಲಾಗಿದೆ. ಚಿಕ್ಕನಾಯಕನ ಹಳ್ಳಿ ಬಿಜೆಪಿ ಸಾಮಾಜಿಕ ಜಾಲ ವಿಭಾಗದ ಸಂಚಾಲಕ ಯೋಗೇಶ್ವರ್ ಅವರಿಂದ ಬೆಂಗಳೂರಿನ ಸೈಬರ್ ಕ್ರೈಂ ಪೋಲೀಸರಿಗೆ ದೂರು ನೀಡಲಾಗಿದೆ.

ಟಿಕ್​ಟಾಕ್ ಮಹಿಳೆ ಜೊತೆ ಮಾಧುಸ್ವಾಮಿ ಫೋಟೋ ಹಾಕಿರುವ ಜೆಡಿಎಸ್​ ನಕಲಿ ಟ್ವೀಟ್


ಸಚಿವರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿ ಸಾರ್ವಜನಿಕವಾಗಿ ಅವರ ಹೆಸರು ಕೆಡಸುವ ಪ್ರಯತ್ನ ಮಾಡಲಾಗುತ್ತಿದೆ. ಸಚಿವ ಮಾಧುಸ್ವಾಮಿ ಅವರು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದವರು ಅವರ ಮೇಲೆ ಆರೋಪ ಹೊರಿಸಿ ವಿಕೃತ ಸಂತೋಷ ಪಡುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ಸಮಾಜದಲ್ಲಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಪ್ರಕಟಿಸಿರುವ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

(ವರದಿ: ಚಿದಾನಂದ ಪಟೇಲ್) 

 
First published:November 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading