ಸರ್ಕಾರ ರಚನೆಗೆ ಆತುರ ತೋರದ ಬಿಎಸ್​ವೈ; 2008ರ ಇತಿಹಾಸ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿರುವ ಭಾವಿ ಸಿಎಂ!

ಈಬಾರಿಯಾದರೂ ಬಿಜೆಪಿ ಇಂತಹ ಸಮಸ್ಯೆಗಳನ್ನು ಉಲ್ಭಣಿಸದಂತೆ ಮುಂಜಾಗ್ರತೆ ವಹಿಸಿ ಮುಂದಿನ 3.5 ವರ್ಷ ಸುಸ್ಥಿರ ಆಡಳತ ನೀಡುತ್ತಾ? ರಾಜ್ಯದ ಅಭಿವೃದ್ಧಿಗೆ ಪೂರಕವಾಗುತ್ತಾ? ರೈತರ ಸಮಸ್ಯೆಗೆ ಕಿವಿಯಾಗುತ್ತಾ? ಹಾಗೂ ಇಡೀ ಅವಧಿಗೆ ಬಿಎಸ್​ವೈ ಒಬ್ಬರೇ ಸಿಎಂ ಆಗಿ ಮುಂದುವರಿಯುತ್ತಾರ? ಎಂಬುದನ್ನು ಕಾದು ನೋಡಬೇಕಿದೆ.

MAshok Kumar | news18
Updated:July 24, 2019, 12:05 PM IST
ಸರ್ಕಾರ ರಚನೆಗೆ ಆತುರ ತೋರದ ಬಿಎಸ್​ವೈ; 2008ರ ಇತಿಹಾಸ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿರುವ ಭಾವಿ ಸಿಎಂ!
ಬಿ.ಎಸ್​. ಯಡಿಯೂರಪ್ಪ.
  • News18
  • Last Updated: July 24, 2019, 12:05 PM IST
  • Share this:
ಬೆಂಗಳೂರು (ಜುಲೈ.24); ಅದು 2008ರ ಸಮಯ. ಜೆಡಿಎಸ್ ಜೊತೆ ಮೈತ್ರಿ ಸಾಧಿಸಿದ್ದ ಬಿಜೆಪಿ ಕುಮಾರಸ್ವಾಮಿಯವರ 20 ತಿಂಗಳ ಆಡಳಿತದ ನಂತರ ಅಧಿಕಾರ ಪಡೆದಿತ್ತು. ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಹುದ್ದೆಗೆ ಏರಿದ್ದರು. ದಕ್ಷಿಣ ಭಾರತದ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಇದಾಗಿ ಕೇವಲ ಒಂದು ವಾರದಲ್ಲಿ ಸರ್ಕಾರ ಪನವಾಗಿ ಬಿಎಸ್​ವೈ ತೀವ್ರ ಮುಖಭಂಗ ಅನುಭವಿಸಿದ್ದರು. ನಂತರ ಎದುರಾದ ವಿಧಾನಸಭಾ ಚುನಾವಣೆಯಲ್ಲಿ ಅನುಕಂಪದ ಅಲೆಯಲ್ಲಿ ತೇಲಿದ್ದ ಬಿಜೆಪಿಗೆ ಜನ 110 ಸ್ಥಾನಗಳನ್ನು ನೀಡಿ ಗೆಲ್ಲಿಸಿದ್ದು ಇಂದು ಇತಿಹಾಸ.

2008ರ ಚುನಾವಣೆಯಲ್ಲಿ ಹೀಗೆ 110 ಸ್ಥಾನ ಗೆದ್ದರೂ ಸಹ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿರಲಿಲ್ಲ. ಪರಿಣಾಮ ಮೊದಲ ಬಾರಿಗೆ ಆಪರೇಷನ್ ಕಮಲಕ್ಕೆ ಕೈಹಾಕಿದ್ದ ಬಿಎಸ್​ವೈ ಇತರೆ ಪಕ್ಷದಿಂದ 15ಕ್ಕೂ ಹೆಚ್ಚು ಶಾಸಕರನ್ನು ಸೆಳೆದಿದ್ದರು. ಕೊನೆಗೂ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಹುಮತದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿತ್ತು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿಎಸ್​ವೈ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ, ಅವರು ಹೆಚ್ಚು ದಿನ ಆ ಸ್ಥಾನದಲ್ಲಿ ಉಳಿಯಲು ಸ್ವಪಕ್ಷೀಯರೇ ಬಿಟ್ಟಿರಲಿಲ್ಲ ಎಂಬುದು ವಿಪರ್ಯಾಸ.

ಇದನ್ನೂ ಓದಿ : ರೆಸಾರ್ಟ್ ರಾಜಕೀಯಕ್ಕೆ ಲಕ್ಷ ಲಕ್ಷ ಸುರಿದ ಬಿಜೆಪಿ ನಾಯಕರು; ಕಳೆದ 13 ದಿನದಲ್ಲಿ ಖರ್ಚಾದ ಹಣ ಎಷ್ಟು ಗೊತ್ತಾ?

2008ರ ಪರಿಸ್ಥಿತಿ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿರುವ ಬಿಎಸ್​ವೈ;

ಬಿಎಸ್​ವೈ 2008ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರೂ ಸಹ 5 ವರ್ಷಗಳ ಕಾಲ ನೆಮ್ಮದಿಯಾಗಿ ಆಡಳಿತ ನಡೆಸಲು ಸ್ವಪಕ್ಷೀಯರೆ ಬಿಟ್ಟಿರಲಿಲ್ಲ. ರಾಜ್ಯದಲ್ಲಿ ಅದು ಬಿಜೆಪಿಯ ಮೊದಲ ಆಡಳಿತವಾದ ಕಾರಣ ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದದ್ದು ಇದಕ್ಕೆ ಕಾರಣ.

ಅಂದು ಪಕ್ಷದಲ್ಲಿ ಯಡಿಯೂರಪ್ಪ ಬಣ, ರೆಡ್ಡಿ ಬ್ರದರ್ಸ್ ಬಣ, ಜಗದೀಶ್ ಶೆಟ್ಟರ್ ಬಣ, ರೇಣುಕಾಚಾರ್ಯ ಬಣ, ಈಶ್ವರಪ್ಪ ಬಣ ಹೀಗೆ ಪ್ರತಿಯೊಂದು ನಾಯಕರ ಹಿಂದೆಯೂ ಒಂದೊಂದು ಬಣವಿತ್ತು. ಎಲ್ಲರೂ ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಗಳೇ ಆಗಿದ್ದರು. ಪರಿಣಾಮ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪಕ್ಷದ ಒಳಗೆ ದೊಡ್ಡ ಅಸಮಾಧಾನ ಹೆಡೆ ಎತ್ತಿತ್ತು. ಸುಮಾರು 17 ಜನ ಶಾಸಕರು ಯಡಿಯೂರಪ್ಪ ವಿರುದ್ಧ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು.

ಈ ನಡುವೆ ಬಳ್ಳಾರಿ ಗಣಿ ಹಾಗೂ ಡಿನೋಟಿಫಿಕೇಷನ್ ಹಗರಣ ದೇಶದಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಯಿತು. ಪರಿಣಾಮ ಯಡಿಯೂರಪ್ಪ ಕೇವಲ 2 ವರ್ಷ ಅಧಿಕಾರ ಅನುಭವಿಸಿ ನಂತರ ಜೈಲು ಪಾಲಾಗಬೇಕಾದ ಪರಿಸ್ಥಿತಿ ಎದುರಾಗಿತ್ತು. ಆ ನಂತರ ಅವರು ಬಿಜೆಪಿ ತ್ಯಜಿಸಿ ಕೆಜೆಪಿ ಪಕ್ಷವನ್ನು ಕಟ್ಟಿ ಮತ್ತೆ ಬಿಜೆಪಿ ಜೊತೆ ವಿಲೀನವಾದದ್ದು ಇತಿಹಾಸ.
Loading...

ಒಂದೇ ಅವಧಿಯಲ್ಲಿ ಮೂರು ಜನ ಮುಖ್ಯಮಂತ್ರಿಗಳನ್ನು ಕಂಡ ಕುಖ್ಯಾತಿಯೂ 2008-2013ರ ಅವಧಿಯಲ್ಲಿ ಅಧಿಕಾರ ನಡೆಸಿದ ಬಿಜೆಪಿ ಗೆ ಇದೆ ಎಂಬುದು ಉಲ್ಲೇಖಾರ್ಹ.

ಇದನ್ನೂ ಓದಿ : ಬಿಎಸ್​ವೈ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್; ಶುಕ್ರವಾರ ಸಂಜೆ 4ಕ್ಕೆ ನಾಲ್ಕನೇ ಭಾರಿ ಮುಖ್ಯಮಂತ್ರಿಯಾಗಿ ಪದಗ್ರಹಣ?

ಹೀಗೆ ಭೂತಕಾಲದ ಘಟನೆಗಳಿಂದ ಪಾಠ ಕಲಿತಂತೆ ಕಂಡು ಬರುತ್ತಿರುವ ಬಿಎಸ್​ವೈ ಇದೀಗ ಮತ್ತೆ ಅಂಥ ಎಡವಟ್ಟಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಮೈತ್ರಿ ಸರ್ಕಾರ ಬೀಳಿಸಲು ತೋರಿಸಿದ ಆತುರವನ್ನು ಅವರು ಸರ್ಕಾರ ರಚನೆಗೆ ತೋರುತ್ತಿಲ್ಲ. ಪಕ್ಷದ ಒಳಗೆ ಭಿನ್ನಾಭಿಪ್ರಾಯ ಮೂಡದಂತೆ ಮೊದಲೇ ಎಚ್ಚರಿಕೆ ವಹಿಸಿ, ಎಲ್ಲಾ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಮೊದಲು ತಾವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕೇಂದ್ರದ ನಾಯಕರ ಮುಂದಾಳತ್ವದಲ್ಲಿ ಖಾತೆಯನ್ನು ಹಂಚಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ, ಈಬಾರಿಯಾದರೂ ಬಿಜೆಪಿ ಇಂತಹ ಸಮಸ್ಯೆಗಳನ್ನು ಉಲ್ಭಣಿಸದಂತೆ ಮುಂಜಾಗ್ರತೆ ವಹಿಸಿ ಮುಂದಿನ 3.5 ವರ್ಷ ಸುಸ್ಥಿರ ಆಡಳತ ನೀಡುತ್ತಾ? ರಾಜ್ಯದ ಅಭಿವೃದ್ಧಿಗೆ ಪೂರಕವಾಗುತ್ತಾ? ರೈತರ ಸಮಸ್ಯೆಗೆ ಕಿವಿಯಾಗುತ್ತಾ? ಹಾಗೂ ಇಡೀ ಅವಧಿಗೆ ಬಿಎಸ್​ವೈ ಒಬ್ಬರೇ ಸಿಎಂ ಆಗಿ ಮುಂದುವರಿಯುತ್ತಾರ? ಎಂಬುದನ್ನು ಕಾದು ನೋಡಬೇಕಿದೆ.

First published:July 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...