IPSOS Exit Poll: ಬಿಜೆಪಿಗೆ ಭರವಸೆ ಮೂಡಿಸಿರುವ ಗುಜರಾತ್ ನಲ್ಲಿ ಕ್ಲೀನ್​ಸ್ವೀಪ್ ಸಾಧನೆ, ಮಹಾರಾಷ್ಟ್ರದಲ್ಲೂ ಅಧಿಕ ಸ್ಥಾನ ಗಳಿಕೆ!

ಐಪಿಎಸ್​ಒಎಸ್​ ಹಾಗೂ ನ್ಯೂಸ್​ 18 ಸಮೀಕ್ಷೆಯ ಪ್ರಕಾರ ಬಿಜೆಪಿ ಈ ಬಾರಿಯೂ ಗುಜರಾತ್​ನಲ್ಲಿ ಎಲ್ಲಾ 26 ಸ್ಥಾನಗಳಲ್ಲೂ ಗೆಲ್ಲುವುದು ಖಚಿತ ಎನ್ನಲಾಗುತ್ತಿದ್ದು,48 ಸ್ಥಾನಗಳಿರುವ ಮಹಾರಾಷ್ಟ್ರದಲ್ಲೂ ಬಿಜೆಪಿ-ಶಿವಸೇನೆ ನೇತೃತ್ವದ ಎನ್​ಡಿಎ ಮೈತ್ರಿ ಕೂಟ 42 ರಿಂದ 45 ಸ್ಥಾನಗಳಲ್ಲಿ ಗೆಲ್ಲಲಿದೆ ಎನ್ನುತ್ತಿವೆ ಚುನಾವಣೋತ್ತರ ಸಮೀಕ್ಷೆಗಳು.

MAshok Kumar | news18
Updated:May 19, 2019, 11:03 PM IST
IPSOS Exit Poll: ಬಿಜೆಪಿಗೆ ಭರವಸೆ ಮೂಡಿಸಿರುವ ಗುಜರಾತ್ ನಲ್ಲಿ ಕ್ಲೀನ್​ಸ್ವೀಪ್ ಸಾಧನೆ, ಮಹಾರಾಷ್ಟ್ರದಲ್ಲೂ ಅಧಿಕ ಸ್ಥಾನ ಗಳಿಕೆ!
ಎಕ್ಸಿಟ್​ ಪೋಲ್​​
  • News18
  • Last Updated: May 19, 2019, 11:03 PM IST
  • Share this:
ಬಹು ನಿರೀಕ್ಷೆಯ ಭಾರತ ಲೋಕಸಭಾ ಚುನಾವಣೆ 2019 ಕೊನೆಗೂ ಅಂತ್ಯವಾಗಿದೆ. ಇದೇ ಮೇ.23 ರಂದು ಫಲಿತಾಂಶ ಹೊರಬೀಳಲಿದ್ದು ಸರ್ಕಾರ ರಚಿಸುವವರು ಯಾರು? ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ? ಯಾರು ಪ್ರಧಾನಿಯಾಗಲಿದ್ದಾರೆ? ಎಂಬ ಎಲ್ಲಾ ಪ್ರಶ್ನೆಗಳಿಗೂ ಫಲಿತಾಂಶದ ದಿನ ಉತ್ತರ ಸಿಗಲಿದೆ.

ಈ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನದಿಂದ ಹಿಡಿದು ಆರನೇ ಹಂತದವರೆಗೂ ಐಪಿಎಸ್​ಒಎಸ್​ ಹಾಗೂ ನ್ಯೂಸ್​ 18 ಪ್ರತಿನಿಧಿಗಳು ಎಲ್ಲಾ ಮತಗಟ್ಟೆಯಲ್ಲೂ ಮತದಾರರ ಅಭಿಪ್ರಾಯ ಕಲೆ ಹಾಕಿ, ಚುನಾವಣೋತ್ತರ ಸಮೀಕ್ಷೆಯನ್ನು ಸಿದ್ಧಪಡಿಸಿದೆ. ಈ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಪಾಲಿಗೆ ಮಹತ್ವದ ರಾಜ್ಯಗಳಾದ ಗುಜರಾತ್​ ಹಾಗೂ ಮಹಾರಾಷ್ಟ್ರದಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸಲಿದೆ? ಮತದಾರ ಯಾರ ಪರ ನಿಂತಿದ್ದಾನೆ? ಯಾರಿಗೆ ಸಿಗಲಿದೆ ಹೆಚ್ಚಿನ ಸ್ಥಾನ? ಇಲ್ಲಿದೆ ಚುನಾವಣೋತ್ತರ ಸಮೀಕ್ಷೆ ನೀಡಿದ ಅಂಕಿಅಂಶಗಳ ಆಧಾರದ ಸಂಕ್ಷೇಪ ವರದಿ. 

ಗುಜರಾತ್​ನಲ್ಲಿ ಅನಿರೀಕ್ಷಿತ ಫಲಿತಾಂಶ : ಗುಜರಾತ್​ನಲ್ಲಿ 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಒಟ್ಟು 26 ಕ್ಷೇತ್ರಗಳ ಪೈಕಿ ಬಿಜೆಪಿ 15ರಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್​ 11 ಕ್ಷೇತ್ರದಲ್ಲಿ ಗೆದ್ದಿತ್ತು. ಆದರೆ, 2014ರಲ್ಲಿ ಮೋದಿ ಅಲೆಯ ಪರಿಣಾಮ ಎಲ್ಲಾ 26 ಕ್ಷೇತ್ರಗಳನ್ನೂ ಕ್ಲೀನ್​ ಸ್ವೀಪ್ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಗುಜರಾತ್​ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು.

ಆದರೆ, ಇತ್ತೀಚೆಗೆ ನಡೆದ ಗುಜರಾತ್​ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಕಠಿಣ ಸವಾಲು ನೀಡಿತ್ತು. ಇದಲ್ಲದೆ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್​ ಪಟೇಲ್ ಕಾಂಗ್ರೆಸ್​ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು ಕಾಂಗ್ರೆಸ್​ಗೆ ವರದಾನವಾಗಲಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿತ್ತು. ಆದರೆ, ಈ ಎಲ್ಲಾ ಚುನಾವಣಾಪೂರ್ವ ವಿಶ್ಲೇಷಣೆಗಳನ್ನು ಚುನಾವಣೋತ್ತರ ಸಮೀಕ್ಷೆಗಳು ಸುಳ್ಳು ಮಾಡಿವೆ.

ಐಪಿಎಸ್​ಒಎಸ್​ ಹಾಗೂ ನ್ಯೂಸ್​ 18 ಸಮೀಕ್ಷೆಯ ಪ್ರಕಾರ ಬಿಜೆಪಿ ಈ ಬಾರಿಯೂ ಗುಜರಾತ್​ನಲ್ಲಿ ಎಲ್ಲಾ 26 ಸ್ಥಾನಗಳಲ್ಲೂ ಗೆಲ್ಲುವುದು ಖಚಿತ ಎನ್ನಲಾಗುತ್ತಿದ್ದು, ಬಿಜೆಪಿ ಪಾಳಯದಲ್ಲಿ ಈಗಾಗಲೇ ಸಂಸತ ಮನೆ ಮಾಡಿದೆ.

ಮಹರಾಷ್ಟ್ರದಲ್ಲೂ ಎನ್​ಡಿಎಗೆ ಮೇಲುಗೈ :  2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನಾ ನೇತೃತ್ವದ ಎನ್​ಡಿಎ ಮೈತ್ರಿಕೂಟ 48 ಕ್ಷೇತ್ರಗಳ ಪೈಕಿ ಒಟ್ಟಾರೆ 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 24 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 23 ಹಾಗೂ 20 ಕ್ಷೇತ್ರಗಳಲ್ಲಿ ಗೆದ್ದಿದ್ದ ಶಿವಸೇನೆ 18ರಲ್ಲಿ ಗೆಲುವು ಕಂಡಿತ್ತು. 2009ರ ಚುನಾವಣೆಗೆ ಹೋಲಿಸಿದರೆ 2014ರಲ್ಲಿ ಈ ಮೈತ್ರಿ ಕೂಟ ಒಟ್ಟು 21 ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿತ್ತು.

2019ರಲ್ಲಿ ಮಹಾರಾಷ್ಟ್ರದಲ್ಲಿ ಮತ್ತೆ ತನ್ನ ಪಾರುಪತ್ಯ ಸಾಧಿಸಬೇಕು ಎಂಬ ಹಂಬಲದಲ್ಲಿ ಕಾಂಗ್ರೆಸ್ ತನ್ನ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿತ್ತು. ಶರದ್​ ಪವಾರ್ ನೇತೃತ್ವದ ಎನ್​ಸಿಪಿ ಪಕ್ಷ ಈ ಮೈತ್ರಿಕೂಟಕ್ಕೆ ಬಲ ತುಂಬುವ ಇರಾದೆ ವ್ಯಕ್ತಪಡಿಸಿತ್ತು. ಆದರೆ, ವಿರೋಧ ಪಕ್ಷಗಳು ಎಷ್ಟೇ ಕಸರತ್ತು ಮಾಡಿದರೂ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಸಾಧ್ಯವಾಗಿಲ್ಲ ಎನ್ನುತ್ತಿವೆ ಚುನಾವಣೋತ್ತರ ಸಮೀಕ್ಷೆಗಳು.ಐಪಿಎಸ್​ಒಎಸ್​ ಹಾಗೂ ನ್ಯೂಸ್​ 18 ಸಮೀಕ್ಷೆಯ ಪ್ರಕಾರ 48 ಸ್ಥಾನಗಳಿರುವ ಮಹಾರಾಷ್ಟ್ರದಲ್ಲಿ ಈ ಬಾರಿಯೂ ಬಿಜೆಪಿ-ಶಿವಸೇನೆ ನೇತೃತ್ವದ ಎನ್​ಡಿಎ ಮೈತ್ರಿ ಕೂಟ 42 ರಿಂದ 45 ಸ್ಥಾನಗಳಲ್ಲಿ ಗೆಲ್ಲಲಿದೆ. ಆ ಮೂಲಕ ಕಳೆದ ಬಾರಿಗಿಂತ ಈ ಬಾರಿ ಇನ್ನೂ ಉತ್ತಮ ಸಾಧನೆ ಮಾಡಲಿದೆ ಎನ್ನಲಾಗುತ್ತಿದೆ. ಇನ್ನೂ ಮಹತ್ವಾಕಾಂಕ್ಷೆಯಿಂದ ಚುನಾವಣೆ ಎದುರಿಸಿದ ಕಾಂಗ್ರೆಸ್ ಮೈತ್ರಿ ಕೂಟ ಕೇವಲ 4 ರಿಂದ 6 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.


First published: May 19, 2019, 9:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading