• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • BJP Candidates List 2023: ಈಶ್ವರಪ್ಪ ಪುತ್ರನಿಗಿಲ್ಲ ಶಿವಮೊಗ್ಗ ಟಿಕೆಟ್! ಬಿಜೆಪಿ ಅಭ್ಯರ್ಥಿಗಳ ಕೊನೆ ಪಟ್ಟಿ ರಿಲೀಸ್

BJP Candidates List 2023: ಈಶ್ವರಪ್ಪ ಪುತ್ರನಿಗಿಲ್ಲ ಶಿವಮೊಗ್ಗ ಟಿಕೆಟ್! ಬಿಜೆಪಿ ಅಭ್ಯರ್ಥಿಗಳ ಕೊನೆ ಪಟ್ಟಿ ರಿಲೀಸ್

ಈಶ್ವರಪ್ಪ ಹಾಗೂ ಪುತ್ರ ಕಾಂತೇಶ್ (ಸಂಗ್ರಹ ಚಿತ್ರ)

ಈಶ್ವರಪ್ಪ ಹಾಗೂ ಪುತ್ರ ಕಾಂತೇಶ್ (ಸಂಗ್ರಹ ಚಿತ್ರ)

ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರದಲ್ಲಿ ಅವರ ಪುತ್ರನಿಗೆ ಟಿಕೆಟ್ ನೀಡಿಲ್ಲ. ಅತ್ತ ಮಾನ್ವಿಯಲ್ಲಿ ನಿನ್ನೆಯಷ್ಟೇ ಕಾಂಗ್ರೆಸ್ನಿಂದ ಬಿಜೆಪಿ ಸೇರಿದ್ದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

ಬೆಂಗಳೂರು: ಬಿಜೆಪಿ (BJP) ತನ್ನ ಅಭ್ಯರ್ಥಿಗಳ (candidates) ಅಂತಿಮ ಪಟ್ಟಿಯನ್ನು ಇದೀಗ ರಿಲೀಸ್ ಮಾಡಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿರುವ ಬಿಜೆಪಿ, ಎಲ್ಲಾ 224 ಕ್ಷೇತ್ರಗಳಲ್ಲಿ ತನ್ನ ಕದನ ಕಲಿಗಳ ಹೆಸರನ್ನು ಘೋಷಿಸಿದೆ. ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳು, 2ನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳು, 3ನೇ ಪಟ್ಟಿಯಲ್ಲಿ 10 ಅಭ್ಯರ್ಥಿಗಳ ಹೆಸರು ಘೋಷಿಸಿತ್ತು. ಇದೀಗ 4ನೇ ಹಾಗೂ ಅಂತಿಮ ಪಟ್ಟಿ ಹೊರಬಿದ್ದಿದ್ದು, ಬಾಕಿ ಉಳಿದಿದ್ದ ಶಿವಮೊಗ್ಗ ನಗರ (Shimoga city) ಹಾಗೂ ರಾಯಚೂರಿನ (Raichuru) ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ (Manvi Assembly Constituency) ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದೆ. ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರದಲ್ಲಿ ಅವರ ಪುತ್ರನಿಗೆ ಟಿಕೆಟ್ ನೀಡಿಲ್ಲ. ಅತ್ತ ಮಾನ್ವಿಯಲ್ಲಿ ನಿನ್ನೆಯಷ್ಟೇ ಕಾಂಗ್ರೆಸ್‌ನಿಂದ (Congress) ಬಿಜೆಪಿ ಸೇರಿದ್ದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದೆ.


ಈಶ್ವರಪ್ಪ ಪುತ್ರನಿಗಿಲ್ಲ ಟಿಕೆಟ್!


ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಈಶ್ವರಪ್ಪಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆಗೂ ಮುನ್ನವೇ ಈಶ್ವರಪ್ಪ ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಆದರೆ ಅವರು ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ ಅವರ ಮನವಿಗೆ ಹೈಕಮಾಂಡ್ ಅಸ್ತು ಎಂದಿಲ್ಲ!


ಈಶ್ವರಪ್ಪ ಆಪ್ತನಿಗೆ ಸಿಕ್ಕಿತು ಟಿಕೆಟ್


ಈಶ್ವರಪ್ಪ ಪುತ್ರ ಕಾಂತೇಶ್ ಬದಲು ಈಶ್ವರಪ್ಪ ಸೊಸೆಗೆ ಟಿಕೆಟ್ ನೀಡೋ ಬಗ್ಗೆ ಯೋಚಿಸಬಹುದು ಅಂತ ಹೈಕಮಾಂಡ್ ಹೇಳಿತ್ತು ಎನ್ನಲಾಗಿದೆ. ಆದರೆ ಈಶ್ವರಪ್ಪ ಇದಕ್ಕೆ ಒಪ್ಪಿಲ್ಲವಂತೆ. ಹೀಗಾಗಿ ಅವರ ಆಪ್ತ ಹಾಗೂ ಶಿವಮೊಗ್ಗ ಪಾಲಿಕೆ ಮಾಜಿ ಉಪಮೇಯರ್ ಚನ್ನಬಸಪ್ಪ ಎಂಬುವರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ.


ಇದನ್ನೂ ಓದಿ: Ramadas: ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ! ಬಿಜೆಪಿಯಲ್ಲೇ ಇರ್ತೀನಿ ಅಂದ್ರು ರೆಬೆಲ್ ರಾಮದಾಸ್!


ನಿನ್ನೆ ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆ, ಇಂದು ಟಿಕೆಟ್!


ನಿನ್ನೆ ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಬಿವಿ ನಾಯಕ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಿವಿ ನಾಯಕ್, ನಿನ್ನೆ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಇದೀಗ ಅವರಿಗೆ ಮಾನ್ವಿ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ.


4 ಹಂತಗಳಲ್ಲಿ ಟಿಕೆಟ್ ಘೋಷಿಸಿದ ಬಿಜೆಪಿ


ಒಟ್ಟು ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿರುವ ಬಿಜೆಪಿ, ಎಲ್ಲಾ 224 ಕ್ಷೇತ್ರಗಳಲ್ಲಿ ತನ್ನ ಕದನ ಕಲಿಗಳ ಹೆಸರನ್ನು ಘೋಷಿಸಿದೆ. ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳು, 2ನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳು, 3ನೇ ಪಟ್ಟಿಯಲ್ಲಿ 10 ಅಭ್ಯರ್ಥಿಗಳ ಹೆಸರು ಘೋಷಿಸಿತ್ತು. ಇದೀಗ 4ನೇ ಹಾಗೂ ಅಂತಿಮ ಪಟ್ಟಿಯಲ್ಲಿ ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಿಸಿದೆ.
ಶಾಸಕ ಪ್ರೀತಂ ಗೌಡ ಪತ್ನಿ ನಾಮಪತ್ರ ಸಲ್ಲಿಕೆ


ಅಚ್ಚರಿ ಬೆಳವಣಿಗೆಯಲ್ಲಿ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಪ್ರೀತಂ ಗೌಡ ಪತ್ನಿ ಕಾವ್ಯಾ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದಕ್ಕೂ ಮುನ್ನ ಪ್ರೀತಂ ಗೌಡ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಅವರಿಗೆ ಪತ್ನಿ ಕಾವ್ಯಾ ಅವರಿಗೆ ಸಾಥ್ ನೀಡಿದ್ದರು. ಆದರೆ ಪತ್ನಿ ಕಾವ್ಯಾ ಉಮೇದುವಾರಿಕೆ ಸಲ್ಲಿಕೆ ವೇಳೆ ಪತಿ ಪ್ರೀತಂ ಗೈರಾಗಿದ್ದರು. ಕಾವ್ಯಾ ಅವರಿಗೆ ನಾಮಪತ್ರ ಸಲ್ಲಿಕೆ ವೇಳೆ ಪ್ರೀತಂ ಗೌಡ ಅವರು ಬೆಂಬಲಿಗರು ಸಾಥ್ ನೀಡಿದ್ದರು.

First published: