• Home
  • »
  • News
  • »
  • state
  • »
  • ಓ ಮೈ ಗಾಡ್: ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮೊದಲ ರಿಯಾಕ್ಷನ್​​ ಟ್ವಿಟ್ಟರ್​ನಲ್ಲಿ ಭಾರೀ ವೈರಲ್

ಓ ಮೈ ಗಾಡ್: ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮೊದಲ ರಿಯಾಕ್ಷನ್​​ ಟ್ವಿಟ್ಟರ್​ನಲ್ಲಿ ಭಾರೀ ವೈರಲ್

ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ

ಹೀಗಾಗಿ ಬಿಜೆಪಿಯ ಮೊದಲ ಪಟ್ಟಿಯಲ್ಲೇ ತೇಜಸ್ವಿನಿ ಅನಂತ್​ಕುಮಾರ್​ ಅವರಿಗೆ ಟಿಕೆಟ್​ ಸಿಗಲಿದೆ ಎನ್ನಲಾಗಿತ್ತು. ಆದರೆ, ಅವರಿಗೆ ಟಿಕೆಟ್​ ನೀಡಲಿಲ್ಲ.

  • News18
  • Last Updated :
  • Share this:

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಈ ಕ್ಷೇತ್ರದಿಂದ ಬಿಜೆಪಿ ದಿವಂಗತ ನಾಯಕ ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರು ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಸೋಮವಾರ ಮಧ್ಯರಾತ್ರಿ ಯುವ ಮುಖಂಡ​ ತೇಜಸ್ವಿ ಸೂರ್ಯ ಹೆಸರನ್ನು ಘೋಷಿಸಲಾಗಿದೆ. ಆದರೆ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರ ಅಚ್ಚರಿಯ ಘೋಷಣೆ ಖುದ್ದು 28ರ ಹರೆಯದ ತೇಜಸ್ವಿ ಸೂರ್ಯರನ್ನು ಸಹ ಅಚ್ಚರಿಗೊಳಿಸಿತ್ತು ಎಂಬುದಕ್ಕೆ ಅವರು ಮಾಡಿದ ಟ್ವೀಟ್ ಸಾಕ್ಷಿ.ಟಿಕೆಟ್​​ ಘೋಷಣೆಯಾದ ಬೆನ್ನಲ್ಲೇ ತೇಜಸ್ವಿ ಸೂರ್ಯ ಉತ್ಸಾಹದಲ್ಲಿ ಟ್ವೀಟ್​ ಮಾಡಿದ್ದಾರೆ. ಓ ಮೈ ಗಾಡ್.. ಓ ಮೈ ಗಾಡ್​​, ನನಗೆ ಇದನ್ನು ನಂಬಲಾಗುತ್ತಿಲ್ಲ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿ ಹಾಗೂ ಅತೀ ದೊಡ್ಡ ರಾಜಕೀಯ ಪಕ್ಷದ ಅಧ್ಯಕ್ಷರು, ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರವನ್ನು ಪ್ರತಿನಿಧಿಸಲು ನನ್ನಂಥ 28 ವರ್ಷದ ಯುವಕನಲ್ಲಿ ನಂಬಿಕೆ ಇಟ್ಟಿದ್ದಾರೆ. ಇದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಟ್ವೀಟ್ ಮಾಡಿ ತಿಳಿಸಿದ್ದರು. ಈ ಆಶ್ಚರ್ಯಚಕಿತ ಟ್ವೀಟ್ ಈಗ ಎಲ್ಲೆಡೆ ವೈರಲ್​ ಆಗುತ್ತಿದ್ದು, 28 ರ ಅಭ್ಯರ್ಥಿಗೆ ಹಲವರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.


ಮತ್ತೊಂದು ಟ್ವೀಟ್​ನಲ್ಲಿ.. ಇದನ್ನು ಬರೆಯುವಾಗ ನನ್ನ ಕೈಗಳು ನಡುಗುತ್ತಿದೆ. ಕಳೆದ ವರ್ಷ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಅವರೊಂದಿಗೆ ಒಂದು ಗಂಟೆಗಳ ಕಾಲ ಚರ್ಚೆ ಮಾಡುವ ಅವಕಾಶ ಒದಗಿತ್ತು. ಅವರೊಂದಿಗೆ ನಡೆದ ಮಾತುಕತೆ ನನಗೆ ಎಷ್ಟು ಸ್ಫೂರ್ತಿದಾಯಕವಾಗಿತ್ತು ಎಂದರೆ ಅದರ ನಂತರ ನನಗೆ ಒಂದು ವಾರದವರೆಗೂ ನಿದ್ದೆ ಬಂದಿರಲಿಲ್ಲ. ಅವರ ಸಿದ್ಧಾಂತಗಳಿಗೆ ನಾನು ಮಾರು ಹೋಗಿದ್ದೆ. ಅಮಿತ್​ ಶಾ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದರು.


ಈ ಟ್ವೀಟ್​ಗಳು ಈಗ ದೇಶೆದೆಲ್ಲೆಡೆ ವೈರಲ್ ಆಗುತ್ತಿದ್ದು, ಭಾರತೀಯ ಜನತಾ ಪಕ್ಷದಿಂದ ಕಿರಿಯ ಸಂಸದನಾಗಿ ತೇಜಸ್ವಿ ಸೂರ್ಯ ಸಂಸತ್ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ. ತೇಜಸ್ವಿ ಸೂರ್ಯ ಅವರ ಮೊದಲ ರಿಯಾಕ್ಷನ್ ವೈರಲ್ ಆಗುತ್ತಿದ್ದಂತೆ ಹಲವರು ಯಾರು ಈ ಯುವ ನಾಯಕ ಎಂಬುದನ್ನು ತಡಕಾಡಿದ್ದಾರೆ. ಅಲ್ಲದೆ ಇಂತಹ ಯುವ ಮುಖಂಡರು ಸಂಸತ್​ಗೆ ಆಯ್ಕೆಯಾಗುವುದರಿಂದ ರಾಜಕೀಯದಲ್ಲಿ ಯುವ ತಲೆಮಾರಿನ ಆಸಕ್ತಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.


28ರ ಹರೆಯದ ತೇಜಸ್ವಿ ಸೂರ್ಯ ವಿದ್ಯಾರ್ಥಿಯಾಗಿದ್ದಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ (ಎಬಿವಿಪಿ) ಸಂಘಟನೆಯಿಂದ ಗುರುತಿಸಿಕೊಂಡಿದ್ದರು. ಬಾಲ್ಯದಿಂದಲೇ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಿದ್ಧಾಂತಕ್ಕೆ ಮಾರು ಹೋಗಿದ್ದ ಇವರು ಬೆಂಗಳೂರಿನ ಬಸವನಗುಡಿಯ ಶಾಸಕ ರವಿ ಸುಬ್ರಹ್ಮಣ್ಯ ಅವರ ಅಣ್ಣನ ಮಗ ಎಂಬುದು ವಿಶೇಷ. ಈ ಹಿನ್ನೆಲೆಯಲ್ಲಿ ರಾಜಕೀಯ ಕೂಡ ಆರಂಭದಲ್ಲೇ ಕರಗತವಾಗಿತ್ತು. ನಾಲ್ಕು ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡ ತೇಜಸ್ವಿ ತಮ್ಮ ಹಿಂದುತ್ವದ ಬಗೆಗಿನ ಭಾಷಣಗಳ ಮೂಲಕ ಗಮನ ಸೆಳೆದರು. ಅಲ್ಲದೆ ವಿದ್ಯಾರ್ಥಿ ಸಂಘಟನೆಯ ಯುವ ನಾಯಕನಾಗಿ ಗುರುತಿಸಿಕೊಂಡಿದ್ದರು.


ಜಯನಗರದ ನ್ಯಾಷನಲ್​ ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡಿರುವ ಇವರು.  ವಕೀಲರಾಗಿ ಕೂಡ ಕಾರ್ಯ ನಿರ್ವಹಿಸುತ್ತಾರೆ. ಅದರಲ್ಲೂ  ತಮ್ಮ ವೃತ್ತಿ ಬದುಕಿನಲ್ಲೂ ಬಿಜೆಪಿ ಪರ ಕಾನೂನು ಸಮರ ಸಾರಿದ್ದರು. ಪೋಸ್ಟ್​​ ಕಾರ್ಡ್​ ಎಂಬ ವೆಬ್​​ಸೈಟ್​​ ಅಡ್ಮಿನ್ ಮಹೇಂದ್ರ ವಿಕ್ರಂ ಹೆಗ್ಡೆ ಅವರನ್ನು​​ ಸುಳ್ಳು ಸುದ್ದಿ ಹರಡುತ್ತಿರುವ ಆರೋಪದ ಮೇಲೆ ಜೈಲಿಗೆ ಹಾಕಿದ್ದರು. ಆಗ ಅವರ ಪರ ವಾದ ಮಾಡಿ ಮಾಡಿದವರು ಇದೇ ತೇಜಸ್ವಿ. ಇದೇ ರೀತಿ ಹಲವು ಕಟ್ಟರ್​​ ಹಿಂದುತ್ವವಾದಿಗಳು ಜೈಲು ಪಾಲಾದಾಗ ಅವರ ಪರ ಹಣವನ್ನೂ ಪಡೆಯದೇ ಈ ಯುವ ಮುಖಂಡ ವಾದ ಮಾಡಿದ್ದಾರೆ . ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ 1996 ರಿಂದ 2014 ರವರೆಗೆ ಗೆಲುವು ಸಾಧಿಸುತ್ತಾ ಬಂದಿರುವ ಅನಂತ ಕುಮಾರ್ ಸ್ಥಾನ ಈಗ ತೇಜಸ್ವಿ ಸೂರ್ಯ ಹೆಗಲೇರಿದೆ.


ಈ ಕ್ಷೇತ್ರಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರೊಬ್ಬರ ಹೆಸರನ್ನೇ ಶಿಫಾರಸ್ಸು ಮಾಡಲಾಗಿತ್ತು. ಹೀಗಾಗಿ ಬಿಜೆಪಿಯ ಮೊದಲ ಪಟ್ಟಿಯಲ್ಲೇ ತೇಜಸ್ವಿನಿ ಅನಂತ್​ಕುಮಾರ್​ ಅವರಿಗೆ ಟಿಕೆಟ್​ ಸಿಗಲಿದೆ ಎನ್ನಲಾಗಿತ್ತು. ಆದರೆ, ಅವರಿಗೆ ಟಿಕೆಟ್​ ನೀಡಲಿಲ್ಲ. ಹಾಗಾಗಿ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಣಕ್ಕಿಳಿಯುತ್ತಾರೆಂಬ ಸುದ್ದಿ ನಿನ್ನೆಯವರೆಗೂ ದಟ್ಟವಾಗಿ ಹಬ್ಬಿತ್ತು. ಆದರೆ, ಬಿಜೆಪಿ ನಾಯಕರು ಇದನ್ನು ಅಲ್ಲಗಳೆದಿದ್ದರು. ಆದರೆ ಸೋಮವಾರ ಮಧ್ಯರಾತ್ರಿ ಬಿಜೆಪಿಯ ರಾಷ್ಟ್ರೀಯ ಮುಖಂಡರು ತೇಜಸ್ವಿ ಸೂರ್ಯ ಅವರನ್ನ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಅದರಂತೆ ಯುವ ನಾಯಕನ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ.


ಈ ಬಾರಿ ತೇಜಸ್ವಿ ಸೂರ್ಯ ಜಯಗಳಿಸಿದರೆ ಸಂಸತ್ ಪ್ರವೇಶಿಸಲಿರುವ ಅತ್ಯಂತ ಕಿರಿಯ ಬಿಜೆಪಿ ಸಂಸದರಾಗಲಿದ್ದಾರೆ. ಇವರೊಂದಿಗೆ ಜೆಡಿಎಸ್- ಕಾಂಗ್ರೆಸ್ ಅಭ್ಯರ್ಥಿ 29 ರ ನಿಖಿಲ್ ಕುಮಾರಸ್ವಾಮಿ ಕೂಡ ಕಿರಿಯ ಅಭ್ಯರ್ಥಿಯಾಗಿ ಸಂಸತ್ ಪ್ರವೇಶಿಸುವ ಸಕಲ ಪ್ರಯತ್ನದಲ್ಲಿದ್ದಾರೆ. ಈ ಹಿಂದೆ ಹರಿಯಾಣದ ಹಿಸ್ಸಾರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ದೇವಿ ಲಾಲ್ ಅವರ ಮೊಮ್ಮಗ ದುಶ್ಯಂತ್ ಚೌತಲ ಅವರು 26ನೇ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಅತೀ ಕಿರಿಯ ಸಂಸದ ಎಂಬ ಕೀರ್ತೀಗಳಿಸಿದ್ದರು.

First published: