ಸಿದ್ದರಾಮಯ್ಯ ಕೊಬ್ಬು, ಡಿಕೆಶಿ ಭ್ರಷ್ಟಾಚಾರ ಬಿಜೆಪಿ ಸೇರಲು ಕಾರಣ; ರಮೇಶ್​ ಜಾರಕಿಹೊಳಿ ಗುಡುಗು

ಸಿದ್ದರಾಮಯ್ಯರನ್ನು ನಂಬಿ ರಾಜಕೀಯ ಮಾಡಿದ್ದೇವು. ಹಾಗೇಂದ ಮಾತ್ರಕ್ಕೆ ಯಾರ ಬಳಿಯೂ ಚಮಚಗಿರಿ ಮಾಡಿಲ್ಲ. ಸತೀಶ್​ ಜಗಳದಲ್ಲಿ ಸಿದ್ದರಾಮಯ್ಯ ಅನಿವಾರ್ಯವಾಗಿ ನನ್ನ ಮಂತ್ರಿ ಮಾಡಿದರು. ಸಚಿವನಾದ ಕೂಡಲೇ ಸರ್ಕಾರ ಬೀಳಿಸಬೇಕು ಎಂದು ನಿರ್ಧರಿಸಿದೆ.

Seema.R | news18-kannada
Updated:November 15, 2019, 5:01 PM IST
ಸಿದ್ದರಾಮಯ್ಯ ಕೊಬ್ಬು, ಡಿಕೆಶಿ ಭ್ರಷ್ಟಾಚಾರ ಬಿಜೆಪಿ ಸೇರಲು ಕಾರಣ; ರಮೇಶ್​ ಜಾರಕಿಹೊಳಿ ಗುಡುಗು
ರಮೇಶ್​ ಜಾರಕಿಹೊಳಿ
  • Share this:
ಗೋಕಾಕ್​ (ನ.15): ಸಿದ್ದರಾಮಯ್ಯ ಕೊಬ್ಬು, ಡಿಕೆ ಶಿವಕುಮಾರ್​ ಭ್ರಷ್ಟಚಾರದಿಂದಾಗಿ ಅನಿವಾರ್ಯವಾಗಿ ಬಿಜೆಪಿ ಸೇರಬೇಕಾದ ಸ್ಥಿತಿ ನಿರ್ಮಾಣವಾಯಿತು ಎಂದು ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ ಗುಡುಗಿದ್ದಾರೆ. 

ಬಿಜೆಪಿ ಸೇರ್ಪಡನೆಗೊಂಡ ಬಳಿಕ ಕ್ಷೇತ್ರದಲ್ಲಿ ಬೃಹತ್​ ಸಮಾವೇಶ ಆಯೋಜಿಸಿ ಮಾತನಾಡಿದ ಅವರು, ಕಾಂಗ್ರೆಸ್​ ತೊರೆಯಲು ಕಾರಣವನ್ನು ಬಿಚ್ಚಿಟ್ಟರು. ಕಾಂಗ್ರೆಸ್​ ನಾಯಕರ ದುರಂಹಕಾರದಿಂದ ನನ್ನ ವಿರುದ್ಧ ಕುತಂತ್ರ ನಡೆದಿತ್ತು, ನನ್ನ ವಿರುದ್ಧ ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್​ ಕುಂತತ್ರ ನಡೆಸಿದರು ಎಂದು ಹರಿಹಾಯ್ದರು.

 

ಸಿದ್ದರಾಮಯ್ಯರನ್ನು ನಂಬಿ ರಾಜಕೀಯ ಮಾಡಿದ್ದೇವು. ಹಾಗೇಂದ ಮಾತ್ರಕ್ಕೆ ಯಾರ ಬಳಿಯೂ ಚಮಚಗಿರಿ ಮಾಡಿಲ್ಲ. ಸತೀಶ್​ ಜಗಳದಲ್ಲಿ ಸಿದ್ದರಾಮಯ್ಯ ಅನಿವಾರ್ಯವಾಗಿ ನನ್ನ ಮಂತ್ರಿ ಮಾಡಿದರು. ಸಚಿವನಾದ ಕೂಡಲೇ ಸರ್ಕಾರ ಬೀಳಿಸಬೇಕು ಎಂದು ನಿರ್ಧರಿಸಿದೆ ಎಂದು ಅಬ್ಬರಿಸಿದರು.

ಹಿಂದುಳಿದ ವರ್ಗದ ನಾಯಕರು ಬೆಳೆಯಬಾರದು ಎಂಬುದು ಸಿದ್ದರಾಮಯ್ಯ ಅವರ ಉದ್ದೇಶ. ಆತಂಕರಿಕ ಸಮಸ್ಯೆ ಅಂತ ಹೇಳಿದರೆ ಭಿನ್ನಮತ ಅಂತಾರೆ. ಮೂರು ತಿಂಗಳ ನಂತರ ನನ್ನನ್ನು ಕೆಳಗಿಸಿ ಇಳಿಸಿ ನನ್ನ ರಾಜಕೀಯ ಮುಗಿಸಬೇಕು ಎನ್ನುವ ದುರುದ್ದೇಶ ಇತ್ತು.  ಜಿಲ್ಲೆಯಲ್ಲಿ ಸಂಘಟನೆ ಮಾಡಿದ ತಕ್ಷಣ ಹೈಕಮಾಂಡ್ ನಲ್ಲಿ ಬೇರೆ ಚರ್ಚೆ ಆಯಿತು.

 

‘ತೇಲಲಿ, ಮುಳುಗಲಿ ನಿಮ್ಮ ಬೆನ್ನು ಬಿಡಲ್ಲ’  ಎಂದು  ಸಿಎಂ ಯಡಿಯೂರಪ್ಪಗೆ ಮಾತು ಕೊಟ್ಟಿದ್ದೆ. ಅದರಂತೆ ನಡೆದು ಕೊಂಡೆವು. 8 ಬಾರಿ ಆಪರೇಷನ್ ‌ಕಮಲ ವಿಫಲಗೊಂಡಿತ್ತು. ಯಡಿಯೂರಪ್ಪ, ಶೆಟ್ಟರ್ ವಾಪಸ್ ಕಾಂಗ್ರೆಸ್ ಹೋಗಿ ಎಂದ್ದರು. ಆದರೆ ಹಠ ಬಿಡದೇ ಬಿಜೆಪಿ ಸೇರಿದ್ದೇನೆ ಬಿಜೆಪಿ ಸೇರುವ ಕುರಿತು ಮೊದಲ ಮಾತುಕತೆ ಯಡಿಯೂರಪ್ಪ ಜತೆ ನಡೆದಿತ್ತು. ಎರಡನೇ ಮಾತುಕತೆ ಅಮಿತ್ ಷಾ ಜತೆ ನಡೆಯಿತು. ಯಡಿಯೂರಪ್ಪರವರನ್ನು ಸಿಎಂ ಮಾಡುವುದಾದರೆ ಮಾತ್ರ ಬಿಜೆಪಿ ಸೇರುವುದಾಗಿ ಹೇಳಿದೆ. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರು. ಈಗ ಬಿಜೆಪಿಯಿಂದ ಟಿಕೆಟ್​ ಪಡೆದಿದ್ದು, ಸೋಮವಾರ ‌ಬಹಿರಂಗವಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದರು.ಇನ್ನು ಚುನಾವಣಾ ಕಣದಲ್ಲಿ ತಮ್ಮ ಎದುರಾಳಿಯಾಗಿರುವ ಲಖನ್​ ತಮ್ಮನಲ್ಲ. ಆತ ನಮ್ಮ ವೈರಿ. ನಾನು ಯಾವುದೇ ಸ್ವಾರ್ಥ, ಅಧಿಕಾರಕ್ಕೆ ಬಿಜೆಪಿ ಹೋಗಿಲ್ಲ. 2008 ರ ಚುನಾವಣೆಯ ಸನ್ನಿವೇಶ ಮತ್ತೆ ನಿರ್ಮಾಣವಾಗಿದೆ. ಆಗ ನಾನು ವೀಕ್ ಇದೆ. ಆದರೆ ಈಗ ಚಿತ್ರಣ ಬೇರೆ ಇದೆ. ಸತೀಶ ಕುತಂತ್ರದಿಂದ ಭಿಮಶೀ ಸ್ಪರ್ಧಿಸಿದ್ದರು. ಸದ್ಯ ಲಖನ್​ ಸಹ ಸತೀಶ ಕುತಂತ್ರದಿಂದ ಸ್ಪರ್ಧಿಸಿದ್ದಾರೆ. ಆದರೆ, ದೇವರ ದಯೆಯಿಂದ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದರು.

ಇದನ್ನು ಓದಿ: ಉಪ ಚುನಾವಣೆ ಬಳಿಕ ರಾಜಕೀಯ ನಿವೃತ್ತಿ; ಕೆಬಿ ಕೋಳಿವಾಡ ಘೋಷಣೆ

ಬಿಜೆಪಿ ಸೇರಿದ ಬಳಿಕ ಮೊದಲ ಬಾರಿ ನಗರಕ್ಕೆ ಆಗಮಿಸಿದ ಅವರಿಗೆ ಬೆಂಬಲಿಗರು,  ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಗೋಕಾಕ್ ನಾಕಾದಿಂದ ಮನೆಯವರೆಗೆ ಭವ್ಯ ಮೆರವಣಿಗೆ ಅವರನ್ನು ಕರೆತರಲಾಯಿತು. ಈ ವೇಳೆ ಅವರಿಗೆ 2 ಕ್ವಿಟಾಂಲ್ ತೂಕದ ಸೇಬುಹಾರ ಹಾಕಲಾಯಿತು.
First published:November 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading