ಅಪರೇಷನ್ ಕಮಲಕ್ಕೆ ಬಿಜೆಪಿಗೆ ಎಂಟಿಬಿ ನಾಗರಾಜ್​​​​ ಸಾಲ ನೀಡಿದ್ದಾರೆ; ಮಾಜಿ ಸಿಎಂ ಸಿದ್ಧರಾಮಯ್ಯ

ನಾನು ಎಂಟಿಬಿ ನಾಗರಾಜ್ ಬಳಿ ಸಾಲವನ್ನ ಪಡೆದಿಲ್ಲ. ಹೀಗಾಗಿ ನಾನು ಸಾಲ ಪಡೆಯದೇ ಏನ್ ವಾಪಸ್ ನೀಡಲಿ. ಕೃಷ್ಣೇಭೈರೇಗೌಡ ಪಡೆದಿದ್ದ ಸಾಲವನ್ನ ವಾಪಸ್ ನೀಡಿದ್ದಾರೆ ಎಂದು ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದರು.

G Hareeshkumar | news18-kannada
Updated:November 21, 2019, 11:22 AM IST
ಅಪರೇಷನ್ ಕಮಲಕ್ಕೆ ಬಿಜೆಪಿಗೆ ಎಂಟಿಬಿ ನಾಗರಾಜ್​​​​ ಸಾಲ ನೀಡಿದ್ದಾರೆ; ಮಾಜಿ ಸಿಎಂ ಸಿದ್ಧರಾಮಯ್ಯ
ಎಂಟಿಬಿ ನಾಗರಾಜ್​​​​​​​ ಹಾಗೂ ಸಿದ್ದರಾಮಯ್ಯ
  • Share this:
ಮೈಸೂರು (ನ.21): ಅಪರೇಷನ್ ಕಮಲದಲ್ಲಿ ಎಂಟಿಬಿ ನಾಗರಾಜ್ ಹಣ ಪಡೆದಿಲ್ಲ. ಬದಲಾಗಿ ಅವರೇ ನೀಡಿದ್ದಾರೆ. ಹಾಗಾಗಿ ಎಂಟಿಬಿ ನಾಗರಾಜ್​​​​ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪ್ರೀತಿ ಹೆಚ್ಚಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.

'ನಾನು ಎಂಟಿಬಿ ನಾಗರಾಜ್ ಬಳಿ ಸಾಲವನ್ನ ಪಡೆದಿಲ್ಲ. ಹೀಗಾಗಿ ನಾನು ಸಾಲ ಪಡೆಯದೇ ಏನ್ ವಾಪಸ್ ನೀಡಲಿ. ಕೃಷ್ಣೇಭೈರೇಗೌಡ ಪಡೆದಿದ್ದ ಸಾಲವನ್ನ ವಾಪಸ್ ನೀಡಿದ್ದಾರೆ'ಎಂದು ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದರು.

'ಕಾಂಗ್ರೆಸ್ ನಾಯಕರು ನನ್ನ ಬಳಿ ಸಾಲ ಪಡೆದಿದ್ದಾರೆ. ನಾನು ಅವರ ಋಣದಲ್ಲಿಲ್ಲ. ಅವರು ನನ್ನ ಋಣದಲ್ಲಿದ್ದಾರೆ' ಎಂದು ನಿನ್ನೆ ಚುನಾವಣಾ ಪ್ರಚಾರದಲ್ಲಿ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದರು.

ಇದನ್ನೂ ಓದಿ : ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಬಿ.ಕೆ. ಹರಿಪ್ರಸಾದ್ ಔಟ್; ಸಿದ್ದರಾಮಯ್ಯಗೆ ಮೇಲುಗೈ?

ಅನರ್ಹರ ಬಗ್ಗೆ ಜನರೇ ಚರ್ಚೆ ಮಾಡುತ್ತಿದ್ದಾರೆ. ಅವರು ಹಣದಾಸೆಗೆ ಹೋಗಿದ್ದಾರೆ ಅಂತಾ ಅವರೇ ಹೇಳುತ್ತಿದ್ದಾರೆ. ನಾನು ಪ್ರಚಾರದಲ್ಲಿ ಬರೀ ಪ್ರಶ್ನೆ ಕೇಳುತ್ತಿದ್ದೇನೆ. ಜನರಿಗೆ ಗೊತ್ತಾಗಿದೆ ಅವರೇ ಉತ್ತರ ಕೊಡುತ್ತಿದ್ದಾರೆ. ಜನರು ಅನರ್ಹರನ್ನು ಸಹಿಸಲ್ಲ ಜನರೇ ಅವರನ್ನಯ ಸೋಲಿಸುತ್ತಾರೆ ಅನರ್ಹರು 15 ಜನವೂ ಸೋಲುತ್ತಾರೆ. ಇವರ ನಯ ವಿನಯದ ಸುಳ್ಳನ್ನು ಜನ ನಂಬಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿಲ್ಲ. ಕುಕ್ಕರ್, ಸೀರೆ ಹಂಚುತ್ತಿದ್ದಾರೆ. ಮಾರಾಟವಾದಾಗಲೂ ದುಡ್ಡು ಬಂದಿದೆ. ಚುನಾವಣೆಗೆ ಅಂತಾನೂ ದುಡ್ಡು ಬಂದಿದೆ. ಬೇಕಾ ಬಿಟ್ಟಿ ದುಡ್ಡು ಅದಕ್ಕೆ ಹಂಚುತ್ತಿದ್ದಾರೆ. ಸಿಎಂ ಯಡಿಯೂರಪ್ಪ ನವರು ಬರೀ ಸುಳ್ಳು ಹೇಳುತ್ತಾರೆ. ಹಿಂದೆ ತಾಲ್ಲೂಕು ದತ್ತು ಪಡೆಯುವುದಾಗಿ ಹೇಳಿದ್ದರು. ಎಲ್ಲಿ ಪಡೆದರು ಇದು ಬರೀ ಚುನಾವಣಾ ಗಿಮಿಕ್. ಎಲ್ಲರನ್ನೂ ಗೆಲ್ಲಿಸುತ್ತೇನೆ ಅಂತಾರೆ ಯಡಿಯೂರಪ್ಪನವರು ಜನರನ್ನು ದಡ್ಡರನ್ನಾಗಿ ಮಾಡಲು ಸಾಧ್ಯವಿಲ್ಲ. ಜನರಿಗೆ ಎಲ್ಲಾ ಗೊತ್ತಿದೆ ಎಂದರು.

ಇದನ್ನೂ ಓದಿ : ಮುಖ್ಯಮಂತ್ರಿ ಆಗುವ ಶಕ್ತಿ ಜಾರಕಿಹೊಳಿ ಕುಟುಂಬಕ್ಕಿದೆ: ಪ್ರಸನ್ನಾನಂದ ಸ್ವಾಮೀಜಿಶಾಸಕ ಜಿ.ಟಿ ದೇವೇಗೌಡರ ಮನಸ್ಥಿತಿ ಹೇಗಿದೆ ಅಂತಾ ಮೊದಲು ಗೊತ್ತಾಗಬೇಕು. ಅವರು ಯಾವ ಕಾರಣಕ್ಕೆ ದೂರ ಇದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ನಂತರ ಜಿ‌.ಟಿ ದೇವೇಗೌಡರ ಜೊತೆ ಮಾತನಾಡುತ್ತೇನೆ. ಆಮೇಲೆ ನೀವು ವಿಶ್ಲೇಷಣೆ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ಹೇಳಿದರು.

ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕಿತ್ತು

'ನನ್ನ ಪ್ರಕಾರ ಸಚಿವ ಮಾಧುಸ್ವಾಮಿ ಕುರುಬ ಸಮುದಾಯದವರ ಕ್ಷಮೆ ಕೇಳಬೇಕಿತ್ತು.ಇದನ್ನ ಮುಂದುವರೆಸಬಾರದು. ಮಾಧುಸ್ವಾಮಿ ಬಿಟ್ಟು ಸಿಎಂ ಯಡಿಯೂರಪ್ಪನವರು ಯಾಕೇ ಕ್ಷಮೆ ಕೇಳಬೇಕು ? ಮಾಧುಸ್ವಾಮಿ ತಪ್ಪು ಮಾಡಿಲ್ಲ ಅಂದ್ರೆ ಕ್ಷಮೆ ಏಕೆ ಕೇಳಬೇಕು ? ಇದಕ್ಕೆ ರಾಜಕೀಯ ಜಾತಿ ಬಣ್ಣ ಕಟ್ಟಬಾರದು' ಎಂದು ತಿಳಿಸಿದರು.

 (ವರದಿ : ಪುಟ್ಟಪ್ಪ)

First published:November 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ