ನಾನು ಈಗಾಗಲೇ ಗೆದ್ದಿದ್ದೇನೆ - ಯಾರನ್ನೇ ಸಚಿವರನ್ನಾಗಿ ಮಾಡ್ಲಿ, ನಾನು ಯಾವ ಸಿಎಂಗೂ ಕಮ್ಮಿಯಿಲ್ಲ ; ಎಂಟಿಬಿ ನಾಗರಾಜ್

ಕಾಂಗ್ರೆಸ್ ನಿಂದ ನಿಂತ ಮುನೇಗೌಡರು ಮೂರು ಬಾರಿ ಸೋತಿದ್ರು. ಅದಕ್ಕೆ ಗತಿ ಇಲ್ಲದೆ ಈ ಮಿನಿ ಬಿಹಾರ್ ನಲ್ಲಿ ತಂದು ನಿಲ್ಲಿಸಿದ್ರು. ಈ ಭಾಗದಲ್ಲಿ ನನ್ನಿಂದಾಗಿ ಕಾಂಗ್ರೆಸ್ ಗೆ ವರ್ಚಸ್ಸು ಹೆಚ್ಚಾಯಿತೆ ವಿನಃ ಕಾಂಗ್ರೆಸ್ ನಿಂದ ನನಗಲ್ಲ ಎಂದು ಕಾಂಗ್ರೆಸ್ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

G Hareeshkumar | news18-kannada
Updated:November 25, 2019, 7:21 PM IST
ನಾನು ಈಗಾಗಲೇ ಗೆದ್ದಿದ್ದೇನೆ - ಯಾರನ್ನೇ ಸಚಿವರನ್ನಾಗಿ ಮಾಡ್ಲಿ, ನಾನು ಯಾವ ಸಿಎಂಗೂ ಕಮ್ಮಿಯಿಲ್ಲ ; ಎಂಟಿಬಿ ನಾಗರಾಜ್
ಎಂಟಿಬಿ ನಾಗರಾಜ್​​
  • Share this:
ಹೊಸಕೋಟೆ(ನ.25): ನಾನು ಯಾವುದರಲ್ಲೂ ಕಡಿಮೆ ಇಲ್ಲ. ನಾನು ಈ ಕ್ಷೇತ್ರದಲ್ಲಿ ಗೆಲ್ತೇನೆ ಅಲ್ಲ ಈಗಾಗಲೆ ಗೆದ್ದಿದ್ದೇನೆ. ಯಾರನ್ನೇ ಸಚಿವರನ್ನು ಮಾಡಿದ್ರು ಏನು ಮಾಡಿದ್ರು ನಾನು ಯಾವ ಸಿಎಂಗೂ ಕಮ್ಮಿ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ. 

ಡಿಸೆಂಬರ್ 5ಕ್ಕೆ ವಿಧಾನಸಭಾ ಉಪಚುನಾವಣೆ ನಿಗಧಿಯಾಗಿದೆ. ಅಭ್ಯರ್ಥಿಗಳು ಜನರ ಮನಗೆಲ್ಲೋದಕ್ಕೆ ಹರಸಾಹಸ ಪಡುತ್ತಿದ್ದಾರೆ. ಅದರಲ್ಲೂ ಅನರ್ಹ ಅಭ್ಯರ್ಥಿಗಳು ಕೊಂಚ ಜಾಸ್ತಿಯೇ ಪ್ರಚಾರದಲ್ಲಿ ತೊಡಗಿದ್ದಾರೆ. ಹೊಸಕೋಟೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಎಂಟಿಬಿಯನ್ನ ಹೊಸಕೋಟೆಗೆ ಕರೆದುತಂದು ನಿಲ್ಲಿಸಿದ್ದು ಎಸ್ ಎಂ ಕೃಷ್ಣ ಮಾತ್ರ. ಇಲ್ಲಿ ಕಾಂಗ್ರೆಸ್ ನಿಂದ ನಿಂತ ಮುನೇಗೌಡರು ಮೂರು ಬಾರಿ ಸೋತಿದ್ರು. ಅದಕ್ಕೆ ಗತಿ ಇಲ್ಲದೆ ಈ ಮಿನಿ ಬಿಹಾರ್ ನಲ್ಲಿ ತಂದು ನಿಲ್ಲಿಸಿದ್ರು. ಈ ಭಾಗದಲ್ಲಿ ನನ್ನಿಂದಾಗಿ ಕಾಂಗ್ರೆಸ್ ಗೆ ವರ್ಚಸ್ಸು ಹೆಚ್ಚಾಯಿತೆ ವಿನಃ ಕಾಂಗ್ರೆಸ್ ನಿಂದ ನನಗಲ್ಲ ಎಂದು ಕಾಂಗ್ರೆಸ್ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶರತ್ ಬಚ್ಚೇಗೌಡರಿಗೆ ಬುದ್ದಿ ಭ್ರಮಣೆ ಆಗಿದೆ

ರಿಯಲ್ ಎಸ್ಟೇಟ್ ಸೈಟ್ ಮಾದರಿಯಲ್ಲಿ ಜನ ನಾಯಕರಿಗೆ ಬೆಲೆ ಕಟ್ಟುತ್ತಿರುವ ಶರತ್ ಆರೋಪಕ್ಕೆ ತಿರುಗೇಟು ನೀಡಿದ ಎಂಟಿಬಿ ನಾಗರಾಜು, ನಾನು ಸತ್ಯವಾಗಲೂ ಯಾರಿಗೂ ಯಾವ ಬೆಲೆಯನ್ನ ಕಟ್ಟಿಲ್ಲ. ಶರತ್ ಬಚ್ಚೇಗೌಡ ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬುದ್ದಿ ಭ್ರಮಣೆಯಾಗಿದೆ. ಅದಕ್ಕೆ ಇಂತಹ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದರು.

ಸ್ಪರ್ಧೆಯಿಂದ ಹಿಂದೆ ಸರಿಯಲು​​ 120 ಕೋಟಿ ಬೆಲೆ ಕಟ್ಟಿದ್ದ ಎಂಟಿಬಿ  ; ಶರತ್ ಬಚ್ಚೇಗೌಡ

ಎಂಟಿಬಿ ನಾಗರಾಜ್ ಬುದ್ದಿಭ್ರಮಣೆ ಹೇಳಿಕೆಗೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ತಿರುಗೇಟು ನೀಡಿದ್ದು, ಯಾರಿಗೆ ಬುದ್ದಿ ಭ್ರಮಣೆ ಆಗಿದೆಯೆಂದು ಜನ ತೀರ್ಮಾನ ಮಾಡುತ್ತಾರೆ. ದೊಡ್ಡವರು ಏನಾದ್ರು ಮಾತಾಡಲಿ, ಎಲ್ಲದಕ್ಕೆ ಜನತೆಗೆ ಬಿಟ್ಟಿದ್ದೇನೆ. ಈಗಾಗಲೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ನೋಟು ಕೊಟ್ಟು ಓಟು ಹಾಕಿಸಿಕೊಳ್ಳೊ ಮಾತಾಡುತ್ತಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯಲು 120 ಕೋಟಿ ಬೆಲೆ ಕಟ್ಟಿದ್ದರು ಶರತ್ ಬಚ್ಚೇಗೌಡ ಹೇಳಿದರು.(ವರದಿ: ರಘುರಾಜ್)
First published:November 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading